ಚಿಕ್ಕಮಗಳೂರು, ಡಿಸೆಂಬರ್ 23: ಅವರಿಬ್ಬರೂ 10 ವರ್ಷಗಳಿಂದ ಪ್ರೀತಿಸುತ್ತಿದ್ದರು (ಪ್ರೀತಿ). ಮದುವೆಯಾಗುವುದಾಗಿ ನಂಬಿಸಿದ್ದ ಯುವಕ ಬಳಿಕ ಪ್ರೇಯಸಿಗೆ ಕೈ ಕೊಟ್ಟು ಮತ್ತೊಬ್ಬಳ ಜೊತೆ ಮದುವೆಯಾಗಿದ್ದ. ಬೇರೆಯವರನ್ನ ಹಿಡಿದು ಹಿಡಿದು ಇತ್ತ ಪ್ರೇಯಸಿ ಹುಡುಗನ ಮನೆ, ಕಲ್ಯಾಣದಂತಹ ಘಟನೆ ಮಂಟಪಕ್ಕೆ ಹೋಗಿ ನನ್ನನ್ನು ಮದುವೆಯಾಗುವಂತೆ ರಂಪಾಟ ಮಾಡಿರುವ ಚಿಕ್ಕಮಗಳೂರಿನ (ಚಿಕ್ಕಮಗಳೂರು) ದೊಡ್ಡೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯಿತು. ಕಾನೂನು ಹೋರಾಟದ ಶಪತ ಮಾಡಿದ್ದ ನೊಂದ ಯುವತಿ, ಮೋಸ ಮಾಡಿದ್ದ ಲವರ್‌ನನ್ನು ಜೈಲಿಗೆ ಕಳುಹಿಸಿದ್ದಾರೆ.
ಚಿಕ್ಕಮಗಳೂರು ನಗರದ ಕಲ್ಯಾಣ ನಗರದ ನಿವಾಸಿ ಶರತ್ ಮತ್ತು ಬೇಲೂರು ಮೂಲದ ಅಶ್ವಿನಿ ಇಬ್ಬರು ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದರು. ನಿನ್ನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಶರತ್ ಭರವಸೆ ಕೂಡ ಕೊಟ್ಟಿದ್ದ. ಅಷ್ಟೇ ಅಲ್ಲದೆ ಅಶ್ವಿನಿಗೆ ಬಂದಿದ್ದ ಐದಾರು ಒಳ್ಳೆಯ ಸಂಬಂಧಗಳನ್ನು ಸಹ ತಪ್ಪಿಸಿದ್ದ. ಆದರೆ ಅಶ್ವಿನಿಗೆ ಗೊತ್ತಾಗದಂತೆ ಗುಪ್ತವಾಗಿ ಬೇರೊಬ್ಬ ಯುವತಿಯ ಜೊತೆ ಹಸೆಮಣೆ ಏರಲು ಸಿದ್ಧವಾಗಿತ್ತು.
ಇದನ್ನೂ ಓದಿ: ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್
ಇತ್ತ ಶರತ್ ನನಗೆ ಕೈಕೊಟ್ಟು ಬೇರೆಯವಳನ್ನ ಮದುವೆಯಾಗುತ್ತಾನೆ ಅನ್ನೋದು ಗೊತ್ತಾಗ್ತಿದ್ದಂತೆ ಕಲ್ಯಾಣ ಮಂಟಪಕ್ಕೆ ಹೋಗಿ ಮದುವೆ ದಿನವೇ ಅಶ್ವಿನಿ ನ್ಯಾಯ ಕೇಳಿ ರಂಪಾಟ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಶರತ್ ಬೇರೆ ಹುಡುಗಿಗೆ ಮದುವೆಯಾಗಿ ಹೋಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಆಯೋಗ ಸೇರಿದಂತೆ ಕಾನೂನು ಹೋರಾಟದ ಶಪಥ ಮಾಡಿದ್ದ ಅಶ್ವಿನಿ, ಇದೀಗ ತನಗೆ ಮೋಸ ಮಾಡಿದ ಶರತ್ ನನ್ನ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮನಸೋ ಇಚ್ಛೆ ಹಲ್ಲೆ: ದೂರು ದಾಖಲು
ತನಗೆ ಮೋಸ ಮಾಡಿ ಬೇರೊಬ್ಬ ಯುವತಿಯ ಜೊತೆ ಮದುವೆಯಾದ ಶರತ್ ವಿರುದ್ಧ ಅಶ್ವಿನಿ ಚಿಕ್ಕಮಗಳೂರಿನ ಡಿಸಿಆರ್‌ಐ ಠಾಣೆಯಲ್ಲಿ ದೂರು ನೀಡಿದ್ದರು. ನನ್ನನ್ನು ಮದುವೆಯಾಗುವುದಾಗಿ ಮೋಸ ಮಾಡಿ ಬೇರೊಬ್ಬ ಯುವತಿಯ ಜೊತೆ ಮದುವೆಯಾಗಿದ್ದು, ಅಷ್ಟೇ ಅಲ್ಲದೆ ಮದುವೆಯ ದಿನ ಕಲ್ಯಾಣಮಂಟಪದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ. ನಾನು ಕಲ್ಯಾಣ ಮಂಟಪದ ಒಳಗೆ ಹೋಗುತ್ತಿರುವಾಗ ಬಾಗಿಲು ಹಾಕಿಕೊಂಡು ಒಬ್ಬ ಹೆಣ್ಣು ಅನ್ನೋದನ್ನ ಕೂಡ ನೋಡದೆ ಮನಸೋ ಇಚ್ಛೆ ಹಲ್ಲೆ ಮಾಡಿ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಅಶ್ವಿನಿ ನೀಡಿದ ದೂರಿನನ್ವಯ ಶರತ್, ಶರತ್‌ನ ತಂದೆ ತಾಯಿ ಹಾಗೂ ಆತನ ಪತ್ನಿ ಮತ್ತು ಪತ್ನಿಯ ಪೋಷಕರ ಮೇಲೂ ಎಫ್‌ಐಆರ್ ದಾಖಲಾಗಿದ್ದು, ಸದ್ಯ ಶರತ್ ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಡಿಸೆಂಬರ್ 14 ರಂದು ಘಟನೆ ನಡೆದಿದ್ದು, ಸತತ 9 ದಿನದ ಕಾನೂನು ಹೋರಾಟದ ಬಳಿಕ ಶರತ್ ಅಂದರ್ ಆಗಿದ್ದಾರೆ. ಶರತ್ ತಂದೆ-ತಾಯಿ, ಪತ್ನಿ ಹಾಗೂ ಪತ್ನಿಯ ಪೋಷಕರ ವಿಚಾರಣೆ ನಡೆಸಿ ಸಾಕ್ಷ್ಯ ಕಲೆ ಹಾಕಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಂತಕನ ಪ್ಲಾನ್ ಏನಿತ್ತು ಗೊತ್ತಾದ್ರೆ ಬೆಚ್ಚಿಬೀಳ್ತೀರಿ!
ಒಟ್ಟಿನಲ್ಲಿ ಪ್ರೀತಿ-ಪ್ರೇಮದ ಹೆಸರಲ್ಲಿ ಯುವತಿ ಬಾಳಲ್ಲಿ ಚೆಲ್ಲಾಟವಾಡಿ ಕೈಕೊಟ್ಟು ಬೇರೊಬ್ಬ ಯುವತಿಯನ್ನ ಮದುವೆಯಾಗಿ ಸುಖ-ಸಂಸಾರ ನಡೆಸಿದ್ದ ಯುವಕ ಮಾಡಿದ ತಪ್ಪಿಗೆ ರಾತ್ರಿ ಜೈಲು ಸೇರುವ ಸ್ಥಿತಿ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.