ಕೊಲಂಬೊ, ಡಿಸೆಂಬರ್ 23: ಭಾರತದ ನೆರೆಹೊರೆ ಮೊದಲು ಮತ್ತು ಮಹಾಸಾಗರ ನೀತಿಗಳ ಅಡಿಯಲ್ಲಿ ಶ್ರೀಲಂಕಾಕ್ಕೆ (ಶ್ರೀಲಂಕಾ) ಭಾರತ ಸಹಾಯಹಸ್ತ ಚಾಚಿದೆ. ದಿತ್ವಾ ಚಂಡಮಾರುತದಿಂದ ತತ್ತರಿಸಿರುವ ಶ್ರೀಲಂಕಾದ ಪುನರ್ಮಿರ್ಮಾಣಕ್ಕೆ ಭಾರತ 4 ಸಾವಿರ ಕೋಟಿ ರೂ. ಪರಿಹಾರ ನೀಡಲಾಗಿದೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ದಿತ್ವ ಚಂಡಮಾರುತದ ನಂತರ ದ್ವೀಪ ರಾಷ್ಟ್ರದಲ್ಲಿ ಬಿಕ್ಕಟ್ಟಿನ ಸಮಯದಲ್ಲಿ ಸಹಾಯ ಮಾಡಬೇಕಿರುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಶ್ರೀಲಂಕಾ ದೇಶಕ್ಕೆ ಚಂಡಮಾರುತದಿಂದ ಅಪಾರ ಹಾನಿಯಾಗಿದೆ. ಈ ಸಂದರ್ಭದಲ್ಲಿ ಭಾರತವು ನೆರೆಯ ದೇಶಕ್ಕೆ ನಿರಂತರವಾಗಿ ಸಹಾಯವನ್ನು ನೀಡುತ್ತಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಶ್ರೀಲಂಕಾಕ್ಕೆ 450 ಮಿಲಿಯನ್ ಯುಎಸ್ ಡಾಲರ್ ನೆರವು ನೀಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದನೆ ಬಗ್ಗೆ ಸಮರ್ಥನೆಗೆ ಅವಕಾಶವಿಲ್ಲ; SCO ಶೃಂಗಸಭೆಯಲ್ಲಿ ಸಚಿವ ಜೈಶಂಕರ್ ಸಂದೇಶ
ದಿತ್ವ ಚಂಡಮಾರುತವು ಶ್ರೀಲಂಕಾದಲ್ಲಿ ಅಪಾರ ಹಾನಿಯನ್ನುಂಟುಮಾಡಿದ್ದು, ಅದು ಚೇತರಿಸಿಕೊಳ್ಳಲು ವರ್ಷಗಳೇ. ಚಂಡಮಾರುತದ ಸಮಯದಲ್ಲಿ ಭಾರತ ಶ್ರೀಲಂಕಾದೊಂದಿಗೆ ನಿಂತಿದೆ ಮತ್ತು 450 ಮಿಲಿಯನ್ ಯುಎಸ್ ಡಾಲರ್ ನೆರವು ನೀಡಿದೆ ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷರನ್ನು ಭೇಟಿ ಮಾಡಲು ಸಂತೋಷವಾಗಿದೆ @ಅನುರಾದಿಸನಾಯಕೆ ಇಂದು ಕೊಲಂಬೊದಲ್ಲಿ.
ಪ್ರಧಾನ ಮಂತ್ರಿಗೆ ತಿಳಿಸಿದರು @ನರೇಂದ್ರ ಮೋದಿದಿತ್ವಾ ಚಂಡಮಾರುತದ ನಂತರ ಅವರ ಆತ್ಮೀಯ ಶುಭಾಶಯಗಳು ಮತ್ತು ಒಗ್ಗಟ್ಟಿನ ಸಂದೇಶ.
ಅಡಿಯಲ್ಲಿ ನಮ್ಮ ಮೊದಲ ಪ್ರತಿಕ್ರಿಯೆ ಚಟುವಟಿಕೆಯನ್ನು ನಿರ್ಮಿಸುವುದು #ಆಪರೇಷನ್ ಸಾಗರ್ ಬಂಧುಭಾರತವು ಒಂದು… pic.twitter.com/gGY9qbiWap
— ಡಾ. ಎಸ್. ಜೈಶಂಕರ್ (@DrSJaishankar) ಡಿಸೆಂಬರ್ 23, 2025
ಜೈಶಂಕರ್ ಎರಡು ದಿನ ಶ್ರೀಲಂಕಾ ಭೇಟಿಯಲ್ಲಿದ್ದಾರೆ. ಇಂದು (ಡಿಸೆಂಬರ್ 23) ಶ್ರೀಲಂಕಾದ ವಿದೇಶಾಂಗ ಸಚಿವೆ ವಿಜಿತಾ ಹೆರಾತ್ ಅವರ ಸಂಭಾಷಣೆಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿ ಬರೆದ ಪತ್ರವನ್ನು ಅವರು ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರಿಗೆ ಕಳುಹಿಸಿದ್ದಾರೆ. “ದಿತ್ವ ಚಂಡಮಾರುತದ ಸಮಯದಲ್ಲಿ ಭಾರತ ಶ್ರೀಲಂಕಾದೊಂದಿಗೆ ನಿಲ್ಲಲು ಹೆಮ್ಮೆಪಡುತ್ತದೆ” ಎಂದು ಜೈಶಂಕರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ