ಬಿಗ್ ಬಾಸ್ ನಿರೂಪಣೆ ಬಗ್ಗೆ ಕಂಡಕಂಡವರ ತಕರಾರು; ಸುದೀಪ್ ಖಡಕ್ ರಿಯಾಕ್ಷನ್

ಬಿಗ್ ಬಾಸ್ ನಿರೂಪಣೆ ಬಗ್ಗೆ ಕಂಡಕಂಡವರ ತಕರಾರು; ಸುದೀಪ್ ಖಡಕ್ ರಿಯಾಕ್ಷನ್


ಕಳೆದ 12 ಸೀಸನ್‌ಗಳಿಂದ ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ (ಬಿಗ್ ಬಾಸ್ ಕನ್ನಡ) ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಅವರ ನಿರೂಪಣೆಯ ಶೈಲಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸುದೀಪ್ ಇಲ್ಲದೇ ಬಿಗ್ ಬಾಸ್ ಶೋ ಇಲ್ಲ ಎಂಬ ಅಭಿಪ್ರಾಯ ಎಲ್ಲರಿಗೂ ಇದೆ. ಪ್ರತಿ ವೀಕೆಂಡ್ ಬಂದರೆ ಸುದೀಪ್ ಅವರ ಸಲುವಾಗಿಯೇ ಬಿಗ್ ಬಾಸ್ ವೀಕ್ಷಿಸುವ ವರ್ಗವಿದೆ. ಆದರೆ ಇತ್ತೀಚಿನ ಸೀಸನ್‌ಗಳಲ್ಲಿ ಕೆಲವರು ಸುದೀಪ್ ಅವರ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ವಾರ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಆ ಬಗ್ಗೆ ಕಿಚ್ಚ ಸುದೀಪ್ (ಕಿಚ್ಚ ಸುದೀಪ್) ಅವರು ಪ್ರತಿಕ್ರಿಯೆ.

‘ಬಿಗ್ ಬಾಸ್ ಕಾರ್ಯಕ್ರಮವನ್ನು ಇಷ್ಟೊಂದು ಜನರು ನೋಡಲು ಆರಂಭಿಸಿದ್ದಾರೆ. ಅದಕ್ಕಾಗಿ ಖುಷಿ ಆಗುತ್ತಿದೆ. ಬಿಗ್ ಬಾಸ್ ಶೋನಲ್ಲಿನ ನನ್ನ ಸ್ಥಾನ ಅನೇಕರಿಗೆ ಸ್ಫೂರ್ತಿಯಾಗಿದೆ. ಅವರ ಮನೆಯಲ್ಲಿ ಒಂದು ವೇದಿಕೆ ಮಾಡಿಕೊಂಡಿದ್ದಾರೆ. ಅವರೆಲ್ಲ ಅಲ್ಲಿ ಕುಳಿತು ಹೇಳುವುದನ್ನು ಕೇಳಿದರೆ ಖುಷಿಯಾಗುತ್ತದೆ. ಕೆಲವು ಸಮಯದಲ್ಲಿ ಅವರು ನೀಡುವ ವಿವರಣೆಗಳಲ್ಲಿ ಅರ್ಥ ಕೂಡ ಇರುತ್ತದೆ’ ಕಿಚ್ಚ ಸುದೀಪ್.

‘ಎಲ್ಲವನ್ನೂ ನಾನು ನಿರ್ಲಕ್ಷಿಸಲ್ಲ. ಹಾಗಂತ ಎಲ್ಲರ ವಿಡಿಯೋವನ್ನು ನಾನು ನೋಡುತ್ತೇನೆ ಅಂತ ಹೇಳೋಕಾಗಲ್ಲ. ಒಂದು ರಾಜ್ಯಕ್ಕೆ ಮುಖ್ಯಮಂತ್ರಿ ಮೇಲೆ ದೂರು ಇರುವುದು. ಪ್ರಧಾನ ಮಂತ್ರಿ ಮೇಲೆಯೂ ಜನರಿಗೆ ದೂರು ಇರುತ್ತದೆ. ಆದರೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಯಾಕೆ ಆ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಅವರಿಗೆ ಮಾತ್ರ ಗೊತ್ತಿರುತ್ತದೆ. ಬಿಗ್ ಬಾಸ್ ವೇದಿಕೆ ಮೇಲೆ ಯಾರನ್ನಾದರೂ ತಂದುಬಿಟ್ಟರೆ ಆ ಪರಿಸ್ಥಿತಿ ಏನೆಂಬುದು ಗೊತ್ತಾಗುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.

‘ಇಡಿ ಕರ್ನಾಟಕ ನೋಡುತ್ತದೆ. ನಾನು ವೇದಿಕೆಯಲ್ಲಿ ನಿಂತಿರುತ್ತೇನೆ. ಎಲ್ಲರ ಜೀವನವನ್ನು ಕೈಯಲ್ಲಿ ಇಟ್ಟುಕೊಂಡು ನಿಂತಿರುತ್ತೇನೆ. ನನಗೆ ಯಾರೂ ಏನೂ ಹೇಳಲ್ಲ. ಸ್ಪರ್ಧಿಗಳಿಗಾಗಿ ನನಗೂ ಲೈವ್ ನಡೆಯುತ್ತಿರುತ್ತದೆ. ಅವರು ಕೇಳಿದ ತಕ್ಷಣ ನಾನು ಪ್ರತಿಕ್ರಿಯಿಸಬೇಕು. ಕೆಲವೊಮ್ಮೆ ನಾನು ಕೆಲವರಿಗೆ ಬೈಯ್ದಿರುತ್ತೇನೆ. ಏಕೆಂದರೆ, ಇವತ್ತು ಬೈಯ್ಯದೇ ಇದ್ದರೆ ಹಾಳಾಗಿ ಹೋಗುತ್ತಾರೆ. ಇನ್ನು ಕೆಲವರಿಗೆ ಬೈಯ್ಯುವ ಅವಶ್ಯಕತೆಯೇ ಇಲ್ಲ. ಅದಕ್ಕಾಗಿ ಅವರು ಅಲ್ಲಿಯವರೆಗೆ ಬರುವುದೇ ಇಲ್ಲ’ ಕಿಚ್ಚ.

ಇದನ್ನೂ ಓದಿ: ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ? ಉತ್ತರ ನೀಡಿದ ಕಿಚ್ಚ ಸುದೀಪ್

‘ನಾನು ಯಾಕೆ ಪಕ್ಷಪಾತ ಮಾಡಬೇಕು? ನಾನು ಯಾಕೆ ಹೆದರಬೇಕು? ಎಂಥೆಂಥವರನ್ನೂ ಪಳಗಿಸಿಕೊಂಡು ಬಂದವನು ನಾನು. ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಅವರವರ ಅಭಿಪ್ರಾಯ. ಅಷ್ಟು ಪೇಜ್ ಓಪನ್ ಆಗಿದೆ ಎಂದರೆ ಬಿಗ್ ಬಾಸ್ ಬಗ್ಗೆ ಅವರಿಗೆ ಆ ಪ್ರೀತಿ ಇದೆ. ಕ್ಷಣ ಪ್ರತಿಯನ್ನು ಜನರು ನೋಡುತ್ತಾರೆ. 14 ಟಿವಿಆರ್ ಸುಮ್ಮನೆ ಬರಲ್ಲ. ಇಷ್ಟು ದಿನ ನಾನು ಒಬ್ಬನೇ ಆಯಂಕರ್ ಆಗಿದ್ದೆ. ಈಗ ತುಂಬಾ ಜನ ಆಯಂಕರ್ ಆಗಿದ್ದಾರೆ. ವೇದಿಕೆ ಮೇಲೆ ಮಾತ್ರ ನಾನು ಒಬ್ಬನೆ. ಏನೇನೋ ಹೇಳುತ್ತಾ ಇರುತ್ತಾರೆ. ಅದು ಅವರ ಖುಷಿ. ಒಬ್ಬ ವೀಕ್ಷಕ ನಮಗೆ ಮುಖ್ಯ ಎಂದರೆ ಅವರು ಪ್ರತಿಕ್ರಿಯೆ ನೀಡುವ ರೀತಿಯನ್ನು ಕೂಡ ನಾವು ಒಪ್ಪಿಕೊಳ್ಳಲಾಯಿತು. ಅದನ್ನು ನಾವು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬಾರದು. ತುಂಬಾ ಚೆನ್ನಾಗಿ ಮಾತನಾಡುತ್ತಾರೆ’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *