
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಈ ದಿನ ಒಂದಲ್ಲ ಒಂದು ಕಾರ್ಯದಲ್ಲಿ ನಿರತರಾಗಿ ಇರುತ್ತೀರಿ ಹಾಗೂ ಫಲದಾಯಕವಾಗಿಯೂ ಇರುತ್ತವೆ. ಏನಾದರೊಂದು ಕಾರಣಕ್ಕೆ ಬಾಕಿ ಉಳಿದು ಹೋದ ಕೆಲಸಗಳನ್ನು ಮುಗಿಸಲು ಅವಕಾಶ ಸಿಗುತ್ತದೆ. ನೀವು ಸಾಲ ನೀಡಿದ್ದರೆ ಅದರ ಹಣ ವಸೂಲಿ ಮಾಡುವುದಕ್ಕೆ ಅಥವಾ ಮುಖ್ಯವಾದ ವ್ಯವಹಾರ ಒಪ್ಪಂದ ಪೂರ್ಣ ಮಾಡಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯವನ್ನು ಗುರುತಿಸಲಾಗಿಲ್ಲ. ಹೆಚ್ಚಿನ ಜವಾಬ್ದಾರಿಗಳನ್ನು ಸಹ ವಹಿಸಬಹುದು. ಆದರೆ ನಿಮಗೆ ಈ ದಿನದ ಅತಿ ಮುಖ್ಯವಾದ ಎಚ್ಚರಿಕೆ ಏನೆಂದರೆ, ಯಾವುದೇ ವಿಚಾರದಲ್ಲಿಯೂ ಕೋಪ ಹಾಗೂ ಆತುರ ನಿಯಂತ್ರಣದಲ್ಲಿರಲಿ. ಕುಟುಂಬದ ಸದಸ್ಯರಿಂದ ನಿಮ್ಮ ನಿರ್ಧಾರಗಳಿಗೆ ಬೆಂಬಲ ಸಿಗುತ್ತದೆ. ರೋಗ ಅಥವಾ ಉರಿಮೂತ್ರದ ಸಮಸ್ಯೆಯು ಕಂಡುಬರುತ್ತದೆ. ನೀವೇನಾದರೂ ಶಾಂತ ಸ್ಥಿತಿಯಲ್ಲಿ ನಡೆದುಕೊಂಡರೆ ದಿನ ಸಂಪೂರ್ಣ ನಿಮ್ಮ ಪರ ಇದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಕುಟುಂಬದ ಕಡೆಯಿಂದಲೂ ಉದ್ಯೋಗ ಸ್ಥಳದಲ್ಲಿಯೂ ಈ ದಿನದ ಜವಾಬ್ದಾರಿಗಳ ಒತ್ತಡ. ಕೆಲಸದ ಕಾರಣದಿಂದ ಬೇಸರ ಆಗಬಹುದು. ಹಣಕಾಸಿನಲ್ಲಿ ಸಾಲ, ಕಂತು, ತೆರಿಗೆ ಪಾವತಿ ವಿಚಾರಗಳಿಗೆ ವಿಶೇಷವಾದ ಗಮನ ಕೊಡಿ. ವ್ಯಾಪಾರ- ವ್ಯವಹಾರದಲ್ಲಿ ಪ್ರಗತಿ ನಿಧಾನವಾಗಿದೆ. ಕುಟುಂಬದ ಬೆಂಬಲ ಇದ್ದಲ್ಲಿ ನಿಮ್ಮ ಆಪ್ತರಿಗಾಗಿ ಸಮಯ ಕೊಡಲು ಸಾಧ್ಯವಾಗದೇ ಇದ್ದರೆ ಅಸಮಾಧಾನಕ್ಕೆ ಕಾರಣ ಆಗಬಹುದು. ಸಂಧಿ ನೋವು ಅಥವಾ ಭುಜದ ನೋವು ಕಾಡಬಹುದು. ಶಿಸ್ತು ಮತ್ತು ಸಮಯಪಾಲನೆ ಇಟ್ಟುಕೊಂಡರೆ ದಿನ ನಿಮ್ಮ ಪಾಲಿಗೆ ಕೆಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ನಾನು ಮಾಡಿದ್ದೇ ಸರಿ ಎಂದು ಯಾವುದೇ ವಾದ ಮಾಡುವ ಮುನ್ನ ಅದಕ್ಕೆ ಕೆಲವು ಮುಖ್ಯ ವಿಚಾರಗಳನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಸರ್ಕಾರಿ ಕೆಲಸ- ಕಾರ್ಯಗಳಲ್ಲಿ ಅತಿಯಾದ ಒತ್ತಡ ಹಾಕಬೇಡಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಹೆಚ್ಚು, ಇತರರೊಂದಿಗೆ ಸೇರಿಕೊಳ್ಳದೆ ಏಕಾಂಗಿಯಾಗಿ ಇರುವುದಕ್ಕೆ ಬಯಸುತ್ತೀರಿ. ಈ ದಿನ ಮನಸ್ಸು ಹೆಚ್ಚು ಅಂತರ್ಮುಖಿ ಆಗಿರುತ್ತದೆ. ಒಂಟಿಯಾಗಿಯೇ ಕೆಲಸ- ಕಾರ್ಯಗಳನ್ನು ಮಾಡುವ ಆಸಕ್ತಿ. ಸಂಬಂಧಕ್ಕೆ ಸಂಬಂಧಿಸಿದಂತೆ ದೊಡ್ಡ ನಿರ್ಧಾರಗಳನ್ನು ಇವತ್ತಿನ ಮಟ್ಟಿಗೆ ಮುಂದೂಡುವುದು ಒಳಿತು. ಹಣಕಾಸಿನ ವಿಚಾರದಲ್ಲಿ ಷೇರು- ಮ್ಯೂಚುವಲ್ ಫಂಡ್ ಈ ರೀತಿ ಹೊಸ ಹೂಡಿಕೆ ಬೇಡ. ಓದಿನಲ್ಲಿ ಏಕಾಗ್ರತೆ ಕಡಿಮೆ ಆಗಬಹುದು. ದೇಹದಲ್ಲಿನ ನೀರಿನ ಅಂಶದ ಕೊರತೆ ಅಥವಾ ಮೂತ್ರಕೋಶಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳನ್ನು ಅನುಭವಿಸುತ್ತೀರಿ. ಹಣದ ವಿಚಾರವಾಗಿ ಯಾರಿಗೆ ಮಾತು ನೀಡುವ ಮೊದಲು ಅದು ಸಾಧ್ಯವಾ- ಇಲ್ಲವಾ ಎಂಬ ಎಚ್ಚರಿಕೆ ಅಗತ್ಯ. ಅನಗತ್ಯ ಚರ್ಚೆಗಳಿಂದ ದೂರ ಉಳಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ. ದಿನವನ್ನು ಹೆಚ್ಚು ಧಾವಂತ ಇಲ್ಲದೆ ಕಳೆದರೆ ಒತ್ತಡ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಈ ದಿನ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿಚಾರಗಳು ಮುಖ್ಯ ಸ್ಥಾನ ಪಡೆದುಕೊಳ್ಳುತ್ತವೆ. ಮನೆ ಖರ್ಚು, ಅಲಂಕಾರ ಅಥವಾ ದುರಸ್ತಿ ಬಗ್ಗೆ ಚರ್ಚೆ ನಡೆಯಬಹುದು. ದಿನಸಿ ಪದಾರ್ಥಗಳ ಖರೀದಿಯಲ್ಲಿ ಖರ್ಚು ಹೆಚ್ಚಾಗಲಿದೆ. ಸಾವಯವ ಉತ್ಪನ್ನಗಳ ಖರೀದಿಗಾಗಿಯೋ ಅಥವಾ ಒಣ ಹಣ್ಣುಗಳ ಖರೀದಿಗೆ ಹೆಚ್ಚು ಖರ್ಚು ಬರಲಿದೆ. ಇನ್ನು ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ಮುಂದಿನ ಆರು ತಿಂಗಳ ಒಳಗೆ ಬಡ್ತಿ ಸಿಗುವ ಬಗ್ಗೆ ಸೂಚನೆ ಸಿಗಲಿದೆ. ಭಾವುಕತೆಗೆ ಒಳಗಾಗಿ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಸಂಬಂಧಗಳಲ್ಲಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುತ್ತದೆ. ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ ಚರ್ಮ, ಕಣ್ಣು ಅಥವಾ ಹಾರ್ಮೋನ್ ಸಮಸ್ಯೆಗಳು ಕಾಡಬಹುದು. ದೈಹಿಕವಾದ ವಿಶ್ರಾಂತಿ ಮತ್ತು ಆಹಾರ ಸಮತೋಲನ ಅಗತ್ಯ. ಕುಟುಂಬಕ್ಕೆ ಸಮಯ ಕೊಟ್ಟರೆ ದಿನ ಸುಖಕರವಾಗುವುದಿಲ್ಲ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಇಡೀ ದಿನ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಬಿಡುವಿಲ್ಲದಷ್ಟು ಕೆಲಸಗಳಲ್ಲಿ ತೊಡಗಿರುತ್ತೀರಿ. ಫೋನ್ ಕರೆಗಳು, ಸಂದೇಶಗಳು, ಭೇಟಿಗಳು ಜಾಸ್ತಿ ಆಗುತ್ತವೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಹೊಸ ಅವಕಾಶದ ಮಾತು ಬರಬಹುದು, ಆದರೆ ತಕ್ಷಣ ಒಪ್ಪಿಕೊಳ್ಳಬೇಡಿ. ಪ್ರಭಾವಿಗಳ ಸಂಪರ್ಕದಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಇನ್ನು ಒಂದು ಕಡೆ ಹಣ ಬರುತ್ತದೆ, ಆದರೆ ಖರ್ಚು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಯಾಣ ಮಾಡುವಾಗ ಸಮಯ ಮತ್ತು ಹಣ ಎರಡಕ್ಕೂ ಲೆಕ್ಕವಿರಲಿ. ಆರೋಗ್ಯದ ದೃಷ್ಟಿಯಿಂದ ನಿದ್ರೆಯ ಕೊರತೆ ಅಥವಾ ತಲೆನೋವು ಕಾಡಬಹುದು. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಹೂಡಿಕೆ ಮಾಡಬೇಕು ಎಂದೆಂದಿಗೂ ಇದ್ದಲ್ಲಿ ಆತುರಕ್ಕಿಂತ ವಿವೇಕ ಬಳಸಿದರೆ ಲಾಭದಾಯಕ. ಜೊತೆಗೆ ಫೈನಾನ್ಷಿಯಲ್ ಅಡ್ವೈಸರ್ ಗಳ ಸಲಹೆ- ಮಾರ್ಗದರ್ಶನ ಪಡೆದುಕೊಳ್ಳಲು ಆದ್ಯತೆಯನ್ನು ನೀಡಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಪ್ರಯಾಣದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದ ವಿಚಾರದಲ್ಲಿ ಏಕಾಏಕಿ ಸಿಟ್ಟು ಹಾಕುವುದಕ್ಕೆ ಹೋಗಬೇಡಿ. ಈ ದಿನ ತಾಳ್ಮೆ ಬಹಳ ಅಗತ್ಯ. ಸರ್ಕಾರಿ ಕೆಲಸ, ದಾಖಲೆ ಅಥವಾ ಬ್ಯಾಂಕ್ ವಿಚಾರಗಳಲ್ಲಿ ವಿಳಂಬ ಆಗಬಹುದು. ಹಣಕಾಸಿನ ವಿಷಯದಲ್ಲಿ ಸಣ್ಣ ಲಾಭದ ಸೂಚನೆ ಇದ್ದರೂ ಅದನ್ನು ಎಲ್ಲರಿಗೂ ಹೇಳಿಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ಚಿನ್ನ- ಬೆಳ್ಳಿ ಇತರ ಬೆಲೆ ಬಾಳುವ ಲೋಹದಲ್ಲಿ ಹೂಡಿಕೆ ಮಾಡಲು ಆಲೋಚನೆ ಮಾಡಲಿದ್ದೇವೆ. ಉದ್ಯೋಗ ಬದಲಾವಣೆಯ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಕೆಲಸ ನಿಧಾನವಾಗಿ ಸಾಗುತ್ತದೆ, ಆದರೆ ನಿಮ್ಮ ಕಡೆಯಿಂದ ತಪ್ಪು ಕಡಿಮೆಯಾಗುತ್ತದೆ. ಬೆನ್ನು ಅಥವಾ ಕುತ್ತಿಗೆ ನೋವು ಕಾಡಬಹುದು, ಹೆಚ್ಚೆಚ್ಚು ವಾಹನ ಚಾಲನೆಯನ್ನು ತಪ್ಪಿಸಿ. ಕುಟುಂಬದವರ ಜೊತೆ ಸಮಯ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕ್ರೆಡಿಟ್ ಕಾರ್ಡ್ ಸಾಲ ಮಾಡದಂತೆ ಜಾಗ್ರತೆ ವಹಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಈ ದಿನ ಖರ್ಚಿನ ವಿಚಾರವೇ ಹೆಚ್ಚು ಯೋಚನೆಗೆ ಕಾರಣ ಆಗುತ್ತದೆ. ಕೆಲವು ಅನಿವಾರ್ಯಗಳನ್ನು ತಪ್ಪಿಸಲು ಸಾಧ್ಯವೇ ಆಗುವುದಿಲ್ಲ. ಉದ್ಯೋಗ ಅಥವಾ ವ್ಯವಹಾರದಲ್ಲಿ ನಿಮ್ಮ ಸಲಹೆಗೆ ಬೆಲೆ ಸಿಗುತ್ತದೆ, ಆದರೆ ತಕ್ಷಣದ ಫಲವನ್ನು ನಿರೀಕ್ಷಿಸಬೇಡಿ. ಹಳೆಯ ಸಂಪರ್ಕಗಳು ನಿಮಗೆ ಸಹಾಯ ಮಾಡಬಹುದು. ಈ ಹಿಂದೆ ನಿಮ್ಮ ಜೊತೆಗೆ ಕೆಲಸ ಮಾಡಿದ್ದಂಥ ವ್ಯಕ್ತಿಗಳೇ ಕೆಲವು ಆಕರ್ಷಕ ಕೊಡುಗೆಗಳನ್ನು ತರಲಿದ್ದಾರೆ. ನಿಮ್ಮ ಸ್ನೇಹಿತರು- ಕುಟುಂಬದ ವಿಚಾರಗಳಲ್ಲಿ ಆಗಿರುವ ಸಂದರ್ಭಗಳನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸಬೇಕಾದ ಅಗತ್ಯವಿರುತ್ತದೆ. ಆರೋಗ್ಯದ ದೃಷ್ಟಿಯಿಂದ ನಿಮ್ಮ ಆತ್ಮವಿಶ್ವಾಸ ಕಡಿಮೆ ಆಗುವಂಥ ಬೆಳವಣಿಗೆ ಆಗಬಹುದು. ಹೊಟ್ಟೆ ಅಥವಾ ತೂಕಕ್ಕೆ ಸಂಬಂಧಿಸಿದ ತೊಂದರೆ ಕಾಣಿಸಬಹುದು. ಹಣವನ್ನು ಹಿಡಿತದಲ್ಲಿ ಖರ್ಚು ಮಾಡಿದರೆ ಈ ದಿನ ನಿಮ್ಮ ನಿಯಂತ್ರಣದಲ್ಲಿರುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8);
ಈ ದಿನ ನಿಮ್ಮ ಸ್ಥಿತಿಯನ್ನು ಹೇಗಿರುತ್ತದೋ ಅದು ನೀವು ಮಾಡುವ ಕೆಲಸದ ಮೇಲೆ ಪ್ರಭಾವ ಪ್ರಭಾವ. ಒಂದು ವೇಳೆ ಬೇಡ ಎನಿಸಿ, ನಿಮ್ಮ ಮನಸ್ಸು ಒಪ್ಪದ ಕೆಲಸಗಳನ್ನೂ ಮಾಡಬೇಕಾದ ಅನಿವಾರ್ಯ ಎದುರಾಗಲಿದೆ. ವ್ಯಾಪಾರ- ವ್ಯವಹಾರಕ್ಕೆ ಬರಬೇಕಾದ ಹಣಕಾಸಿನ ವಿಷಯದಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷಿಸಬಹುದು. ಒಂದು ವೇಳೆ ಬಾಕಿ ಹಣ ವಸೂಲಿಗೆ ಪ್ರಯತ್ನವನ್ನು ಪಟ್ಟರೆ ಫಲ ಸಿಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಲಹೆ ಮತ್ತು ಅನುಭವದ ಮಾತುಗಳನ್ನು ಕೇಳಿಸಿಕೊಳ್ಳುವುದರಿಂದ ಉಪಯುಕ್ತವಾಗಿದೆ. ಕುಟುಂಬದಲ್ಲಿ ಹಿರಿಯರ ಸಲಹೆ ಕೇಳುವುದು ಒಳಿತು. ಸಂಬಂಧಗಳಲ್ಲಿ ಅತಿಯಾದ ಸಂಶಯ ಬೇಡ. ಸರಿಯಾಗಿ ನಿದ್ರೆ ಆಗದಿದ್ದರೆ ದಣಿವು. ಈ ದಿನ ಪ್ರೀತಿ-ಪ್ರೇಮದ ವಿಚಾರದಲ್ಲಿ ನಿಧಾನವಾಗಿ, ತಾಳ್ಮೆಯಿಂದ ವರ್ತಿಸಿದರೆ ನೆಮ್ಮದಿ ಇರಲು ಸಾಧ್ಯವಿಲ್ಲ, ಜೊತೆಗೆ ಸಂಬಂಧಗಳಿಗೆ ಹಾನಿ ಆಗುವುದಿಲ್ಲ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಈ ದಿನ ಕೆಲಸದ ವಿಚಾರದಲ್ಲಿ ನೀವು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂಬ ಬೇಸತ್ತು ಬರುತ್ತದೆ. ಬಂದುತ್ತಾ ಬಂದಿದ್ದ ಕೆಲವು ಜವಾಬ್ದಾರಿಗಳನ್ನು ಮುಗಿಸಿದರು. ಗಡುವಿನೊಳಗೆ ಉತ್ತರ ಹೇಳಬೇಕಾದ ಸಂಗತಿಗಳನ್ನು ಆದ್ಯತೆ ಮೇಲೆ ಮಾಡುತ್ತಾ ಬನ್ನಿ. ಇನ್ನು ವ್ಯವಹಾರದ ವಿಷಯಕ್ಕೆ ಬಂದರೆ ಲಾಭಕ್ಕಿಂತ ಸ್ಥಿರತೆ ಮುಖ್ಯವಾಗುತ್ತದೆ. ಹೊಸ ಸಾಲ ಅಥವಾ ಹೂಡಿಕೆ ನಿರ್ಧಾರವನ್ನು ಈ ದಿನದ ಮಟ್ಟಿಗೆ ಕೈ ಬಿಡುವುದು ಒಳಿತು. ಉದ್ಯೋಗದಲ್ಲಿ ಮೇಲಧಿಕಾರಿಗಳ ಜೊತೆ ನಿಮ್ಮ ಭವಿಷ್ಯದ ಬೆಳವಣಿಗೆಯ ಬಗ್ಗೆ ಮಾತುಕತೆ ನಡೆಯಬಹುದು; ಮಾತಿನಲ್ಲಿ ಸಂಯಮ ಇರಲಿ. ಕುಟುಂಬದ ಖರ್ಚು ಅಥವಾ ಆರೋಗ್ಯ ವಿಚಾರದಲ್ಲಿ ಸ್ವಲ್ಪ ಒತ್ತಡ ಬರುತ್ತದೆ. ಗಂಟಲು, ನಾಲಗೆ ಅಥವಾ ಜೀರ್ಣಕ್ರಿಯೆಗೆ ತೊಂದರೆ ಕಾಣಿಸಬಹುದು. ಆಹಾರ ಸೇವನೆಗೆ ತೆಗೆದುಕೊಳ್ಳಲು ಹಾಗೂ ಸಮಯ ಪಾಲನೆ ಗಮನವನ್ನು ನೀಡಿ.
ಲೇಖನ- ಎನ್.ಕೆ.ಸ್ವಾತಿ