Bigg Boss ಮನೆಗೆ ಡಾಗ್​ ಸತೀಶ್​ ರೀ-ಎಂಟ್ರಿ? ಮಗ ಫೇಲ್​ ಆಗಿರೋ ಖುಷಿಗೆ ಮಾಡಿದ ಪಾರ್ಟಿಯಲ್ಲಿ ರಿವೀಲ್​!

Bigg Boss ಮನೆಗೆ ಡಾಗ್​ ಸತೀಶ್​ ರೀ-ಎಂಟ್ರಿ? ಮಗ ಫೇಲ್​ ಆಗಿರೋ ಖುಷಿಗೆ ಮಾಡಿದ ಪಾರ್ಟಿಯಲ್ಲಿ ರಿವೀಲ್​!

Bigg Boss ಮನೆಗೆ ಡಾಗ್​ ಸತೀಶ್​ ರೀ-ಎಂಟ್ರಿ? ಮಗ ಫೇಲ್​ ಆಗಿರೋ ಖುಷಿಗೆ ಮಾಡಿದ ಪಾರ್ಟಿಯಲ್ಲಿ ರಿವೀಲ್​!

ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ಮಗ ಕಾಲೇಜಿನಲ್ಲಿ ಫೇಲ್ ಆದ ಕಾರಣಕ್ಕೆ ಅದ್ಧೂರಿ ಪಾರ್ಟಿ ಆಯೋಜಿಸಿದ್ದಾರೆ. ಈ ಪಾರ್ಟಿಯಲ್ಲಿ ಸೆಲೆಬ್ರಿಟಿಗಳು ಭಾಗವಹಿಸಿದ್ದು, ಇದೇ ವೇಳೆ ಸತೀಶ್ ಅವರು ಬಿಗ್‌ಬಾಸ್ ಮನೆಗೆ ಮತ್ತೆ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ಮಾತೆತ್ತಿದರೆ ಕೋಟಿ ಕೋಟಿ ಎಂದೇ ಹೇಳುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗುತ್ತಲೇ ಹವಾ ಸೃಷ್ಟಿಸುತ್ತಿರುವವರು ಬಿಗ್​ಬಾಸ್​ ಖ್ಯಾತಿಯ ಡಾಗ್​ ಸತೀಶ್​ (Bigg Boss Dog Sathish). ತಮ್ಮದು ಲಕ್ಷ ಲಕ್ಷ ಬೆಲೆ ಬಾಳುವ ಡ್ರೆಸ್​, ತಮ್ಮ ಬಳಿ 100 ಕೋಟಿಯ ನಾಯಿ ಇದೆ, ಬಿಗ್​ಬಾಸ್​ ಅನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ತಾಕತ್ತು ನನಗಿದೆ… ಹೀಗೆ ಹಲವಾರು ಡೈಲಾಗ್​ ಮೂಲಕ ಫೇಮಸ್​ ಆಗ್ತಿದ್ದಾರೆ ಡಾಗ್​ ಸತೀಶ್​.

ತಮ್ಮ ಮಗನನ್ನು ವಿಶ್ವದ ನಂಬರ್​ 2 ಹೀರೋ ಮಾಡುತ್ತೇನೆ ಎಂದು ಪಣ ತೊಟ್ಟಿರುವ ಡಾಗ್​ ಸತೀಶ್​ ಅವರ ಮಗ ಕಾಲೇಜಿನಲ್ಲಿ ಫೇಲ್​ ಆಗಿದ್ದಾನಂತೆ. ನಂಬರ್​ 1 ಹೀರೋ ಮಾಡಿದರೆ ಅಹಂ ಹೆಚ್ಚಾಗುವ ಕಾರಣ, ನಂಬರ್​ 2 ಹೀರೋಮಾಡುವುದಾಗಿ ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಲೇ ಬಂದಿರುವ ಡಾಗ್​ ಸತೀಶ್​ ಅವರು ಇದೀಗ ಮಗ ಫೇಲ್​ ಆಗಿರುವುದಕ್ಕೆ ದೊಡ್ಡ ಪಾರ್ಟಿಯನ್ನು ಮಾಡಿ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿದ್ದಾರೆ.

ನಟನಾಗಲು, ರಾಜಕಾರಣಿಯಾಗಲು, ಆಗರ್ಭ ಶ್ರೀಮಂತನಾಗಲು ಶಿಕ್ಷಣವೇ ಮುಖ್ಯವಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಇದೇ ಕಾರಣಕ್ಕೆ ಡಾಗ್​ ಸತೀಶ್​ ಅವರು ತಮ್ಮ ಮಗನ ಫೇಲ್​ ಪಾರ್ಟಿಯನ್ನು ವಿಜ್ರಂಭಣೆಯಿಂದ ಆಚರಿಸಿದ್ದಾರೆ. ಇದರಲ್ಲಿ ಸೋನು ಗೌಡ, ಬಿಗ್​ಬಾಸ್​ ಕಾಕ್ರೋಚ್​ ಸುಧಿ ಸೇರಿದಂತೆ ಹಲವಾರು ಮಂದಿ ಆಗಮಿಸಿ ಮಗನಿಗೆ ವಿಷ್​ ಮಾಡಿದ್ದಾರೆ.

ಇದೇ 9ರಂದು ಮಗನ ಹುಟ್ಟುಹಬ್ಬವೂ ಇತ್ತು. ಹಾಗೂ ಈಗ ಫೇಲ್​ ಆಗಿದ್ದಾನೆ ಎನ್ನುವ ಕಾರಣಕ್ಕೆ ಕೇಕ್​ ಕಟ್​ ಮಾಡಿ ಈ ಪಾರ್ಟಿಯನ್ನು ಆಯೋಜಿಸಲಾಗಿದೆ ಎಂದು ಡಾಗ್​ ಸತೀಶ್​ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಅವರ ಡ್ರೆಸ್​ಗಳನ್ನು ಡಿಸೈನ್​ ಮಾಡುವವರೂ ಪಾರ್ಟಿಗೆ ಆಗಮಿಸಿದ್ದು, ಮುಂದಿನ ಬಾರಿ ಬಿಗ್​ಬಾಸ್​ಗೆ ಹೋದಾಗ ಇದನ್ನು ಧರಿಸುವಂತೆ ಹೇಳಿದ್ದಾರೆ. ಆಗ ಡಾಗ್​ ಸತೀಶ್​ ಅವರು, ಆ ಮೂರು ದಿನಗಳಲ್ಲಿ ಒಮ್ಮೆ ಖಂಡಿತವಾಗಿಯೂ ಈ ಡ್ರೆಸ್​ ಧರಿಸುತ್ತೇನೆ ಎಂದಿದ್ದಾರೆ. ಅಂದರೆ ಬಿಗ್​ಬಾಸ್​ಗೆ ಡಾಗ್​ ಸತೀಶ್​ ಮತ್ತೆ ಎಂಟ್ರಿ ಕೊಡ್ತಿದ್ದಾರಾ ಎಂದು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಅಷ್ಟಕ್ಕೂ ಗ್ರ್ಯಾಂಡ್​ ಫಿನಾಲೆ ದಿನ ಬಿಗ್​ಬಾಸ್​​ನ ಎಲ್ಲಾ ಸ್ಪರ್ಧಿಗಳನ್ನು ಕರೆಸುವುದು ಸಾಮಾನ್ಯ. ಅದೇ ರೀತಿ Bigg Boss Season 12ರ ಗ್ರ್ಯಾಂಡ್​ ಫಿನಾಲೆಯ ದಿನದ ಬಗ್ಗೆ ಬಹುಶಃ ಡಾಗ್​ ಸತೀಶ್​ ಅವರು ಮಾತನಾಡಿರಬಹುದು. ಆದರೆ ಈ ವಿಡಿಯೋ ವೈರಲ್ ಆಗುತ್ತಲೇ, ಸತೀಶ್​ ಅವರು ಬಿಗ್ಬಾಸ್​ಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡುತ್ತಿದ್ದಾರೆ ಎಂದು ಹಲವರು ಅಂದುಕೊಳ್ಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *