ಕ್ಯಾಂಬೆಲ್, ನ್ಯೂಜಿಲೆಂಡ್ನ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಇಷ್ಟಪಟ್ಟಿದ್ದಾರೆ. ಮದುವೆಗೆ ಒಂದು ವಾರದಿಂದ ಪೂರ್ವತಯಾರಿ ಆಗಿದ್ದು, ಕುಟುಂಬಸ್ಥರು ಶೇರ್ವಾನಿ, ಸೀರೆ ಧರಿಸಿ ತಯಾರಾದರು. ಅರ್ಚನ, ಶಾಸ್ತ್ರ ಪೂಜೆಗಳು, ಅರುಂಧತಿ ನಕ್ಷತ್ರ ಮತ್ತು ಎಲ್ಲಾ ಸಂಪ್ರದಾಯಿಕ ವಿಧಿಗಳನ್ನು ಪಾಲಿಸಿ ಮದುವೆ ನಡೆಯಿತು. ಪ್ರತಿ ಕ್ಷಣವೂ ಸಾಂಸ್ಕೃತಿಕ ವೈಭವ ಮತ್ತು ಪವಿತ್ರತೆಯನ್ನು ತೋರಿಸುತ್ತಿದೆ.