ಮುದ್ದು ಮಕ್ಕಳ (ಚಿಕ್ಕ ಮಕ್ಕಳು) ಆಟ-ತುಂಟಾಟಗಳನ್ನು ನೋಡುವುದೇ ಚಂದ. ಪುಟಾಣಿಗಳ ಬಾಯಲ್ಲಿ ತೊಡಲು ನುಡಿ, ಹಾಡುಗಳನ್ನು ಕೇಳಿದರೆ ಮನಸ್ಸಿನ ನೋವೆಲ್ಲಾ ಮರೆಯಾಗುತ್ತದೆ. ಈ ಪುಟಾಣಿಗಳ ಮುದ್ದು ಮುದ್ದಾದ ವಿಡಿಯೋಗಳು ಪದೇ ಪದೇ ವೈರಲ್ ಆಗುತ್ತಿರುತ್ತವೆ. ಇದೀಗ ಪುಟಾಣಿಯೊಂದು ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ ಸ್ತೋತ್ರವನ್ನು ಭಕ್ತಿಭಾವದಿಂದ ಹಾಡಿದೆ. ಮುದ್ದು ಕಂದನ ಕಂಠಸಿರಿಯಲ್ಲಿ ಮೂಡಿಬಂದ ಈ ಭಜನಾ ಹಾಡಿಗೆ ನೆಟ್ಟಿಗರು ಮನಸೋತಿದ್ದಾರೆ.
ಮಣಿಕರ್ಣಿಕ ಕಟೋಚ್ (ಮಣಿಕರ್ಣಿಕಾ ಕಟೋಚ್) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ವಿಡಿಯೋದಲ್ಲಿ ಪುಟಾಣಿಯೊಂದು ದೇವರ ಕೋಣೆಯಲ್ಲಿ ಕುಳಿತು ಕೈಯಲ್ಲಿ ಪೂಜಾ ತಟ್ಟೆ ಹಿಡಿದುಕೊಂಡು ಭಜನೆಯಲ್ಲಿ ಮುಳುಗಿದೆ. ಈ ಪುಟಾಣಿಯೂ “ಅಚ್ಯುತಂ ಕೇಶವಂ” ಎಂಬ ಪ್ರಸಿದ್ಧ ಸ್ತೋತ್ರವನ್ನು ಹಾಡುವುದನ್ನು ಕಾಣಬಹುದು.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ:ಪುಟ್ಟ ಕಂದಮ್ಮನಿಗೆ ಅಮ್ಮ ಎಂದು ಹೇಳಲು ಮುದ್ದಾಗಿ ರಿಯಾಕ್ಷನ್ ಕೊಟ್ಟ ಶ್ವಾನ
ಈ ವಿಡಿಯೋ 6 ಮಿಲಿಯನ್ ಗೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ, ಮತ್ತೆ ನೋಡಬೇಕೆನಿಸುವ ದೃಶ್ಯ. ಮತ್ತೊಬ್ಬರು ಅಪ್ಪಟ ಕೃಷ್ಣ ಭಕ್ತ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 3:30 pm, ಬುಧವಾರ, 24 ಡಿಸೆಂಬರ್ 25