ಇದೇ ವರ್ಷ ಬಿಡುಗಡೆ ಆದ ಸಿನಿಮಾಗಳು ಹೆಚ್ಚು ಹುಡುಕಲ್ಪಡುವುದು ಸಾಮಾನ್ಯ. ಆದರೆ 2016ರಲ್ಲಿ ಬಿಡುಗಡೆ ಆದ ‘ಸನಮ್ ಥೇರಿ ಕಸಮ್’ ಸಿನಿಮಾ ಸಹ ಇದೆ. ಈ ವರ್ಷ ಈ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಸಿನಿಮಾಕ್ಕೆ ಕಲ್ಟ್ ಫಾಲೋವಿಂಗ್ ಇದೆ. ಪಟ್ಟಿಯಲ್ಲಿ ಈ ಸಿನಿಮಾಕ್ಕೆ ಐದನೇ ಸ್ಥಾನವಿದೆ.
ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ಮತ್ತೊಂದು ಫ್ಲಾಪ್ ಅಥವಾ ಸಾಧಾರಣ ಹಿಟ್ ಸಿನಿಮಾ ಇದೆ. ಅದುವೇ ‘ವಾರ್ 2’. ಹೃತಿಕ್ ರೋಷನ್ ಮತ್ತು ಜೂ ಎನ್ ಟಿಆರ್ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು. ಪಟ್ಟಿಯಲ್ಲಿ ‘ವಾರ್ 2’ ಗೆ ನಾಲ್ಕನೇ ಸ್ಥಾನ.
ರಜನೀಕಾಂತ್ ನಟಿಸಿ, ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿರುವ ‘ಕೂಲಿ’ ಸಿನಿಮಾ ಈ ವರ್ಷ ಭಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾ. ಉಪೇಂದ್ರ, ಆಮಿರ್ ಖಾನ್ ನಟಿಸಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಯಶಸ್ಸು ಗಳಿಸಲಿಲ್ಲ. ಆದರೆ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಿಗೆ ಮೂರನೆ ಸ್ಥಾನ.
ಕನ್ನಡ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಭಾರತದ ಅತಿ ದೊಡ್ಡ ಸಿನಿಮಾಗಳಲ್ಲಿ. ಬಾಕ್ಸ್ ಆಫೀಸ್ ನಲ್ಲಿ 900 ಕೋಟಿಗೂ ಹೆಚ್ಚು ಮೊತ್ತ ಗಳಿಸಿದ ಈ ಚಿತ್ರ, ಸಿನಿಮಾ ಪ್ರೇಮಿಗಳ ಅತೀವ ಕುತೂಹಲ ಕೆರಳಿಸಿರುವ ಸಿನಿಮಾ ಕೂಡ ಆಗಿದೆ. ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳಲ್ಲಿ ‘ಕಾಂತಾರ: ಅಧ್ಯಾಯ 1’ಗೆ ಎರಡನೇ ಸ್ಥಾನ ಸಿಕ್ಕಿದೆ.
ಈ ವರ್ಷದ ಅಚಾನಕ್ ಹಿಟ್ ಸಿನಿಮಾ ಎಂದರೆ ಅದು ಹಿಂದಿಯ ‘ಸೈಯ್ಯಾರ’. ಯಾರೂ ಹೆಸರೂ ಕೇಳದೇ ಇದ್ದ ನಾಯಕ-ನಾಯಕಿಯ ‘ಸೈಯ್ಯಾರ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಚ್ ಚಲ್ ಎಬ್ಬಿಸಿತು. ಈ ಸಿನಿಮಾ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾ ಎನಿಸಿಕೊಂಡಿದೆ.
ಪಟ್ಟಿಯಲ್ಲಿ ಆರನೇ ಸ್ಥಾನ ಮಲೆಯಾಳಂ ಸಿನಿಮಾ ‘ಮಾರ್ಕೊ’, ಏಳನೇ ಸ್ಥಾನದಲ್ಲಿ ‘ಹೌಸ್ಫುಲ್ 5’, ಎಂಟನೇ ಸ್ಥಾನದಲ್ಲಿ ರಾಮ್ ಚರಣ್ ನಟನೆಯ ಫ್ಲಾಪ್ ಸಿನಿಮಾ ‘ಗೇಮ್ ಚೇಂಜರ್’ ಒಂಬತ್ತನೇ ಸ್ಥಾನದಲ್ಲಿ ‘ಮಿಸಸ್’, ಹತ್ತನೇ ಸ್ಥಾನದಲ್ಲಿ ಹೊಂಬಾಳೆ ಫಿಲಂಸ್ ವಿತರಣೆ ಮಾಡಿದ್ದ ‘ಮಹಾವತಾರ ನರಸಿಂಹ’ ಇದೆ.





