Headlines

Mark ಚಿತ್ರದ 'ಮಸ್ತ್​ ಮಲೈಕಾ' ಹಾಡಿಗೆ Bhargavi LLB ಭಾರ್ಗವಿ-ಅರ್ಜುನ್​ ಭರ್ಜರಿ ಸ್ಟೆಪ್​​

Mark ಚಿತ್ರದ 'ಮಸ್ತ್​ ಮಲೈಕಾ' ಹಾಡಿಗೆ Bhargavi LLB ಭಾರ್ಗವಿ-ಅರ್ಜುನ್​ ಭರ್ಜರಿ ಸ್ಟೆಪ್​​

Mark ಚಿತ್ರದ 'ಮಸ್ತ್​ ಮಲೈಕಾ' ಹಾಡಿಗೆ Bhargavi LLB ಭಾರ್ಗವಿ-ಅರ್ಜುನ್​ ಭರ್ಜರಿ ಸ್ಟೆಪ್​​
ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡು ಜನಪ್ರಿಯವಾಗಿದೆ. ಚಿತ್ರದ ಪ್ರಚಾರದ ಭಾಗವಾಗಿ, ‘ಭಾರ್ಗವಿ ಎಲ್ಎಲ್​ಬಿ’ ಸೀರಿಯಲ್ ಖ್ಯಾತಿಯ ರಾಧಾ ಭಗವತಿ ಮತ್ತು ಮನೋಜ್ ಕುಮಾರ್ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಕಿಚ್ಚ ಸುದೀಪ್​ ಅಭಿನಯದ ಮಾರ್ಕ್​ ಚಿತ್ರ ನಾಳೆ ಅಂದರೆ ಡಿಸೆಂಬರ್​ 25ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರದ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ಚಿತ್ರದ ಮಸ್ತ್​ ಮಲೈಕಾ ಹಾಡು ಇದಾಗಲೇ ಅಭಿಮಾನಿಗಳಲ್ಲಿ ಕ್ರೇಜ್​ ಹುಟ್ಟಿಸಿದೆ. ಕೆಲವರು ಈ ಹಾಡಿಗೆ ರೀಲ್ಸ್​ ಮಾಡುತ್ತಿದ್ದಾರೆ.

ಆದರೆ ಚಿತ್ರದ ಪ್ರಮೋಷನ್​ ಆಗಬೇಕು ಎಂದರೆ ಕಿರುತೆರೆಯ ಸೆಲೆಬ್ರಿಟಿಗಳಿಂದ ಹಾಡುಗಳಿಗೆ ಸ್ಟೆಪ್​ ಹಾಕಿಸಲಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಸಿನಿಮಾಗಳು ಹಿಟ್​ ಆಗಬೇಕು ಎಂದರೆ ಮೊದಲು ಅವುಗಳ ಹಾಡುಗಳು ಕ್ರೇಜ್​ ಹುಟ್ಟಿಸಬೇಕು. ಇದೇ ಕಾರಣಕ್ಕೆ ಜನರಿಗೆ ಅತ್ಯಂತ ಹತ್ತಿರವಾಗಿರುವ ಕಿರುತೆರೆ ಕಲಾವಿದರನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತದೆ.

ಇದೀಗ ಮಾರ್ಕ್​ ಚಿತ್ರದ ಮಸ್ತ್​ ಮಲೈಕಾ ಹಾಡಿಗೆ ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ ಖ್ಯಾತಿಯ ಭಾರ್ಗವಿ ಮತ್ತು ಅರ್ಜುನ್​ ಜೋಡಿ ಅರ್ಥಾತ್​ ರಾಧಾ ಭಗವತಿ ಮತ್ತು ಮನೋಜ್​ ಕುಮಾರ್​ ಅವರು ಸಕತ್​ ಸ್ಟೆಪ್​ ಹಾಕಿದ್ದಾರೆ.

ಇವರಿಬ್ಬರೂ ಒರಿಜಿನಲ್​ ಡಾನ್ಸ್​ನಂತೆಯೇ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಒರಿಜಿನಲ್​ ಸಾಂಗ್​ನಲ್ಲಿ ನಿಶ್ವಿಕಾ ನಾಯ್ಡು ಗ್ಲಾಮರಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದರೆ, ಇಲ್ಲಿ ಭಾರ್ಗವಿ ಅರ್ಥಾತ್​ ರಾಧಾ ಭಗವತಿ ಅವರು ಸೀರೆಯುಟ್ಟು ಹೆಜ್ಜೆ ಹಾಕಿದ್ದಾರೆ.

Source link

Leave a Reply

Your email address will not be published. Required fields are marked *