ಶಿವಣ್ಣ ಫ್ಯಾನ್ಸ್ ಕ್ರೇಜ್ ಯಾವತ್ತೂ ಕಡಿಮೆ ಆಗಲ್ಲ: ಸಾಕ್ಷಿ ತೋರಿಸಿದ ಕೆ.ಪಿ. ಶ್ರೀಕಾಂತ್

ಶಿವಣ್ಣ ಫ್ಯಾನ್ಸ್ ಕ್ರೇಜ್ ಯಾವತ್ತೂ ಕಡಿಮೆ ಆಗಲ್ಲ: ಸಾಕ್ಷಿ ತೋರಿಸಿದ ಕೆ.ಪಿ. ಶ್ರೀಕಾಂತ್


‘ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್ ನಟನೆಯ ’45’ ಸಿನಿಮಾ (45 ಕನ್ನಡ ಚಲನಚಿತ್ರ) ಡಿಸೆಂಬರ್ 25ಕ್ಕೆ ಎಲ್ಲೆಡೆ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಮಟ್ಟು ಉಪೇಂದ್ರ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಡಿಸೆಂಬರ್ 24 ರಂದು ಈ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಬೆಂಗಳೂರಿನ ‘ಪ್ರಸನ್ನ’ ಚಿತ್ರಮಂದಿರದಲ್ಲಿ 2 ಪ್ರೀಮಿಯರ್ ಶೋ ಹೌಸ್ ಫುಲ್ ಆಗಿದೆ. ಶಿವರಾಜ್ ಕುಮಾರ್ (ಶಿವರಾಜಕುಮಾರ್) ಅವರ ಆಪ್ತರಾದ ಕೆ.ಪಿ. ಶ್ರೀಕಾಂತ್ ಕೂಡ ಸಿನಿಮಾ ನೋಡಲು ಬಂದಿದ್ದಾರೆ. ’45’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ಅಭಿನಯಕ್ಕೆ ಮೆಚ್ಚುಗೆ ಸಿಗುತ್ತಿದೆ. ಜನರ ಕ್ರೇಜ್ ಯಾವ ರೀತಿ ಇದೆ ಕೆ.ಪಿ. ಶ್ರೀಕಾಂತ್ (ಕೆಪಿ ಶ್ರೀಕಾಂತ್) ಅವರು ವಿವರಿಸಿದ್ದಾರೆ.

‘ಜನರ ಪ್ರತಿಕ್ರಿಯೆ ನೋಡಿ ತುಂಬಾ ಖುಷಿ ಆಗುತ್ತಿದೆ. ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಧನ್ಯವಾದಗಳು. ತುಂಬಾ ಖರ್ಚು ಮಾಡಿ ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಅರ್ಜುನ್ ಜನ್ಯ ಅವರು ಮೊದಲ ನಿರ್ದೇಶನದಲ್ಲೇ ಉತ್ತಮವಾದ ಸಿನಿಮಾ ಮಾಡಿದ್ದಾರೆ. ಶಿವ ತಾಂಡವ ನೋಡಲು ಅಭಿಮಾನಿಗಳೆಲ್ಲ ಕಾಯುತ್ತಿದ್ದಾರೆ’ ಶಿವನಿಗೆ ಕೆ.ಪಿ. ಶ್ರೀಕಾಂತ್.

‘ಡಾ. ರಾಜ್ ಅವರು ಅನ್ನದಾತರು ಅಂತ ಕರೆಯುತ್ತಿದ್ದರು. ಇಂದು ಅವರ ಅಭಿಮಾನಿಗಳು ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ‘ಯುವರಾಜ’ ಸಿನಿಮಾವನ್ನು 25 ವರ್ಷಗಳ ಹಿಂದೆ ಇದೇ ಚಿತ್ರಮಂದಿರದಲ್ಲಿ ನಾವೇ ರಿಲೀಸ್ ಮಾಡಿದ್ದೆವು. ನಾನು ನೋಡಿದ ಹಾಗೆ ಆ ಸಿನಿಮಾಗೆ ಎಷ್ಟು ಕ್ರೇಜ್ ಇತ್ತೋ ಅದೇ ಕ್ರೇಜ್ ಇದೆ. ಶಿವರಾಜ್ ಕುಮಾರ್ ಮೇಲೆ ಅಭಿಮಾನಿಗಳಿಗೆ ಇರುವ ಕ್ರೇಜ್ ಯಾವಾಗಲೂ ಕಡಿಮೆ ಆಗಲ್ಲ’ ಎಂದು ಕೆ.ಪಿ. ಶ್ರೀಕಾಂತ್ ಅವರು ಹೇಳಿದ್ದಾರೆ.

‘ನಾಳೆ ರಿಲೀಸ್ ಕೂಡ ಒಂದು ದಿನ ಮೊದಲೇ 2 ಪ್ರೀಮಿಯರ್ ಶೋಗಳು ಪ್ರಸನ್ನ ಚಿತ್ರಮಂದಿರದಲ್ಲಿ ಫುಲ್ ಆಗಿವೆ. ಅದ್ಭುತವಾದ ಪ್ರತಿಕ್ರಿಯೆ ಜನರಿಂದ ಸಿಗುತ್ತಿದೆ. ಅಭಿಮಾನಿಗಳೆಲ್ಲರೂ ಸಂಭ್ರಮಿಸುತ್ತಿದ್ದಾರೆ. ಇಡೀ ಕರ್ನಾಟಕದಲ್ಲಿ ಇದೇ ಸಂಭ್ರಮ. ಶಿವಣ್ಣ ನಟಿಸಿದ ಟಗರು, ಮಫ್ತಿ ಸಿನಿಮಾಗಳ ರೀತಿಯೇ ’45’ ಸಿನಿಮಾಗೆ ಕೂಡ ಕ್ರೇಜ್ ಇದೆ’ ಎಂದು ಕೆ.ಪಿ. ಶ್ರೀಕಾಂತ್.

ಇದನ್ನೂ ಓದಿ: ’45’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ..

ಕಿಚ್ಚ ಸುದೀಪ್ ಅಭಿನಯದ ‘ಮಾರ್ಕ್’ ಸಿನಿಮಾ ಕೂಡ ಡಿಸೆಂಬರ್ 25 ರಂದು ಬಿಡುಗಡೆ ಆಗುತ್ತಿದೆ. ಸ್ಟಾರ್ ಸಿನಿಮಾಗಳು ಹೀಗೆ ಒಂದೇ ದಿನ ಬಿಡುಗಡೆ ಆಗಿದ್ದು ಪೈಪೋಟಿ ಜೋರಾಗಿದೆ. ಎರಡೂ ಸಿನಿಮಾಗಳನ್ನು ವೀಕ್ಷಿಸುತ್ತಿದ್ದಾರೆ. ‘ಮಾರ್ಕ್’ ಸಿನಿಮಾದ ಶೋಗಳು ಡಿ.25ರ ಬೆಳಗ್ಗೆ 6 ಗಂಟೆಯಿಂದ ಆರಂಭ ಆಗುತ್ತಿದೆ. ಕ್ರಿಸ್ಮಸ್ ಕಾರಣ ಎರಡೂ ಸಿನಿಮಾಗಳಿಗೆ ಹೆಚ್ಚಿನ ಸಂಖ್ಯೆಯ ರಜೆ ಇರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *