Bengaluru Air Quality Alert: ಬಳ್ಳಾರಿ ಜನರಿಗೆ ಹೈ ಅಲರ್ಟ್​​​ ನೀಡಿದ ತಜ್ಞರು, ರಾಜ್ಯದಲ್ಲಿ ಗಾಳಿಯ ಮಟ್ಟ ಕಳಪೆ

Bengaluru Air Quality Alert: ಬಳ್ಳಾರಿ ಜನರಿಗೆ ಹೈ ಅಲರ್ಟ್​​​ ನೀಡಿದ ತಜ್ಞರು, ರಾಜ್ಯದಲ್ಲಿ ಗಾಳಿಯ ಮಟ್ಟ ಕಳಪೆ


ಬೆಂಗಳೂರು, ಡಿ.25: ಇಂದು ಬೆಂಗಳೂರು (ಬೆಂಗಳೂರು ವಾಯು ಗುಣಮಟ್ಟ) ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಕಳಪೆಯಾಗಿದೆ ಎಂದು ಹೇಳಲಾಗಿದೆ. ಮುಂದಿನ 7 ದಿನ ಚಳಿ ಮತ್ತು ಮಂಜು ವಾತಾವರಣ ಇರುವ ಕಾರಣ, ಗಾಳಿಯ ಗುಣಮಟ್ಟದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಬೆಂಗಳೂರಿನ ಗಾಳಿಯ ಗುಣಮಟ್ಟ ಅನಾರೋಗ್ಯಕರವಾಗಿದೆ, ವಾಯು ಗುಣಮಟ್ಟ ಸೂಚ್ಯಂಕ (AQI) ಪ್ರಕಾರ, ಇಂದು ಗಾಳಿಯ ಗುಣಮಟ್ಟದಲ್ಲಿ ಕೆಟ್ಟ ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ನಗರದ ಸರಾಸರಿ AQI 184 (ಅನಾರೋಗ್ಯಕರ) ಮತ್ತು 221 (ತುಂಬಾ ಅನಾರೋಗ್ಯಕರ/ತೀವ್ರ) ನಡುವೆ ವರದಿಯಾಗಿದೆ . ಇನ್ನು PM2.5 ಮತ್ತು PM10 . PM2.5 ಮಟ್ಟಗಳು 96 µg/m³ ವರೆಗೆ ದಾಖಲಾಗಿದೆ. PM10 ಮಟ್ಟಗಳು ಸುಮಾರು 132 µg/m³ ರಷ್ಟಿವೆ .

ಇನ್ನು ಈ ಗಾಳಿಯ ಗುಣಮಟ್ಟದಲ್ಲಿ ವಾತಾವರಣಕ್ಕೆ ತಕ್ಕಂತೆ ಬದಲಾವಣೆ ಆಗುವ ಸಾಧ್ಯತೆ ಇದೆ. ಇನ್ನು ಬೆಂಗಳೂರಿನ ಭೋಗನಹಳ್ಳಿಯಲ್ಲಿ ಗಾಳಿಗುಣ ಮಟ್ಟ 225 ಇದೆ. ಇನ್ನು ಪಾಮ್ ಮೆಡೋಸ್‌ನಲ್ಲಿ 202, ಮತ್ತು ಬೆಳತ್ತೂರುನಲ್ಲಿ 204, ಅರೆಕೆರೆಯಲ್ಲಿ 194, ಕೃಷ್ಣರಾಜಪುರದಲ್ಲಿ 19 ಹಾಗೂ ಬೊಮ್ಮನಹಳ್ಳಿಯಲ್ಲಿ 187 ಗಾಳಿಯಮಟ್ಟ ಇದೆ. ಪ್ರಸ್ತುತ ಬೆಂಗಳೂರಿನ ಗಾಳಿಯ ಗುಣಮಟ್ಟದ ಸ್ಥಿತಿ ಕೆಟ್ಟದಾಗಿದ್ದರೆ, ಆರೋಗ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗುವ ಸಾಧ್ಯತೆ ಇದೆ. ಅದಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಆಯ್ಕೆ ಮಾಡಲು ಸಲಹೆ ಸೂಚನೆಗಳು.

ಮಕ್ಕಳು, ವೃದ್ಧರು ಮತ್ತು ಸಮಸ್ಯೆಗಳಿರುವ ಜನರು ಹೊರಗೆ ಬರದಂತೆ ಎಚ್ಚರಿಕೆ ನೀಡಲಾಗಿದೆ. ಆರೋಗ್ಯವಂತ ವ್ಯಕ್ತಿಗಳು ಗಂಟಲಿನಲ್ಲಿ ಕಿರಿಕಿರಿ ಅಥವಾ ತೊಂದರೆ ಅನುಭವಿಸಬಹುದು. ಹೆಚ್ಚಿನ ಸಂಚಾರ ಅಥವಾ ಹೆಚ್ಚಿನ ಮಾಲಿನ್ಯ ಪ್ರದೇಶಗಳಲ್ಲಿ ಹೋಗುವ ಮುನ್ನ N95 ಮಾಸ್ಕ್ ಬಳಸಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದೆ

ರಾಜ್ಯದಲ್ಲಿ ಗಾಳಿಯ ಗುಣಮಟ್ಟ:

ಬೆಂಗಳೂರು: 186

ಮಂಗಳೂರು: 140

ಮೈಸೂರು: 130

ಬೆಳಗಾವಿ: 156

ಕಲಬುರ್ಗಿ: 97

ಶಿವಮೊಗ್ಗ: 68

ಬಳ್ಳಾರಿ : 210

ಹುಬ್ಬಳ್ಳಿ : 112

ಉಡುಪಿ :108

ವಿಜಯಪುರ: 88

ಗಾಳಿಯ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:51 am, ಗುರು, 25 ಡಿಸೆಂಬರ್ 25



Source link

Leave a Reply

Your email address will not be published. Required fields are marked *