ಚಿತ್ರದುರ್ಗ ಬಸ್ ಅಪಘಾತ: ಬಸ್ ಹೊತ್ತಿ ಉರಿದ ಭಯಾನಕ ಘಟನೆ ಬಗ್ಗೆ ವಿವರಿಸಿದ ಕ್ಲೀನರ್

ಚಿತ್ರದುರ್ಗ ಬಸ್ ಅಪಘಾತ: ಬಸ್ ಹೊತ್ತಿ ಉರಿದ ಭಯಾನಕ ಘಟನೆ ಬಗ್ಗೆ ವಿವರಿಸಿದ ಕ್ಲೀನರ್


ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಭೀಕರ ಬಸ್ ಅಪಘಾತದ ಭಯಾನಕ ಕ್ಷಣಗಳ ಬಗ್ಗೆ ಬಸ್ ಕ್ಲೀನರ್ ಸಾಧಿಕ್ ಮಾಹಿತಿ ನೀಡಿದ್ದಾರೆ. ಈ ದುರ್ಘಟನೆ ತಡರಾತ್ರಿಯವರೆಗೆ 1.30 ರಿಂದ 2 ಗಂಟೆಯ ನಡುವೆ ಸಂಭವಿಸಿದೆ ಎಂದು ಅವರು ಪ್ರಾರಂಭಿಸಿದರು. ‘ರಾತ್ರಿ ನಾನು ಬಸ್‌ನಲ್ಲಿ ಮಲಗಿದ್ದೆ. ಅಷ್ಟರಲ್ಲಿ ಭಾರೀ ಡಿಕ್ಕಿ ಹೊಡೆದ ರಭಸಕ್ಕೆ ನಾನು ಬಸ್‌ನಿಂದ ಹೊರ ಬಿದ್ದೆ. ಏನಾಗಿದೆ ಎಂಬುದೇ ತಿಳಿಯದ ಸ್ಥಿತಿಯಲ್ಲಿ ಇದ್ದೆ. ನೋಡ ನೋಡದಂತೆ ಬಸ್ ಧಗಧಗನೆ ಹೊತ್ತಿ ಉರಿಯತೊಡಗಿತು’ ಎಂದು ಸಾಧಿಕ್ ಆತಂಕದಿಂದ ಹೇಳಿದರು.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಧಾವಿಸಿ ಬಂದು ನಮ್ಮ ಸಹಾಯಕ್ಕೆ ನಿಂತರು. ಆದರೆ ಅಪಘಾತವಾದ ಕ್ಷಣದಲ್ಲೇ ಎಲ್ಲರೂ ಶಾಕ್‌ಗೆ ಒಳಗಾಗಿದ್ದೆವು. ಏನಾಗಿದೆ, ಏನು ಮಾಡಬೇಕು ಎಂಬುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾಧಿಕ್ ವಿವರಿಸಿದ್ದಾರೆ. ಅಪಘಾತದ ವೇಳೆ ಬಸ್ ಚಾಲಕ ಕೂಡ ಹೊರ ಬಿದ್ದಿದ್ದು, ಆತನಿಗೆ ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ.

ವಿವರಗಳಿಗೆ ಓದಿ: ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ರಸ್ತೆಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್, 9ಕ್ಕೂ ಹೆಚ್ಚು ಜನ ಸಜೀವ ದಹನ

ಚಿತ್ರದುರ್ಗ ಭೀಕರ ಬಸ್ ಅಪಘಾತ: ಪ್ರಯಾಣಿಕರಲ್ಲಿ ಗೋಕರ್ಣದವರೇ ಹೆಚ್ಚು

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *