ಬಾಕ್ಸಿಂಗ್ ಡೇ ಟೆಸ್ಟ್​ಗೆ 12 ಆಟಗಾರರನ್ನು ಹೆಸರಿಸಿದ ಆಸ್ಟ್ರೇಲಿಯಾ

ಬಾಕ್ಸಿಂಗ್ ಡೇ ಟೆಸ್ಟ್​ಗೆ 12 ಆಟಗಾರರನ್ನು ಹೆಸರಿಸಿದ ಆಸ್ಟ್ರೇಲಿಯಾ


26 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ಡಿಸೆಂಬರ್ 12 ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಹನ್ನೆರಡು ಆಟಗಾರರಲ್ಲಿ 11 ಮಂದಿ ಕಣಕ್ಕಿಳಿಯುವುದು ಖಚಿತ. ಅದರಂತೆ ಈ ಬಾರಿ ಕೂಡ ಇನಿಂಗ್ಸ್ ಆರಂಭಿಕರಾಗಿ ಟ್ರಾವಿಸ್ ಹೆಡ್ ಹಾಗೂ ಜೇಕ್ ವೆದರಾಲ್ಡ್ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಮಾರ್ನಸ್ ಲಾಬುಶೇನ್ ಬ್ಯಾಟ್ ಬೀಸಲಿದ್ದಾರೆ.

ಇನ್ನು ಪ್ಯಾಟ್ ಕಮಿನ್ಸ್ ಅವರ ಅನುಪಸ್ಥಿತಿಯಲ್ಲಿ ನಾಯಕನಾಗಿ ಸ್ಟೀವ್ ಸ್ಮಿತ್ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಐದನೇ ಕ್ರಮಾಂಕದಲ್ಲಿ ಉಸ್ಮಾನ್ ಖ್ವಾಜಾ ಕಾಣಿಸಿಕೊಂಡರೆ, ಕೀಪರ್ ಬ್ಯಾಟರ್ ಅಲೆಕ್ಸ್ ಕ್ಯಾರಿ ಆರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹಾಗೆಯೇ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

ವೇಗಿಗಳಾಗಿ ಮಿಚೆಲ್ ಸ್ಟಾರ್ಕ್ ಹಾಗೂ ಸ್ಕಾಟ್ ಬೋಲ್ಯಾಂಡ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಕಾಣಿಸಿಕೊಳ್ಳುವುದು ಖಚಿತ. ಇನ್ನು ಮತ್ತೋರ್ವ ವೇಗಿಯಾಗಿ ಬ್ರೆಂಡನ್ ಡಾಗೆಟ್‌ಗೆ ಸ್ಥಾನ ಸಿಗುವ ನಿರೀಕ್ಷೆಯಿದೆ. ಆದರೆ ಹನ್ನೊಂದನೇ ಆಟಗಾರನ ಸ್ಥಾನಕ್ಕೆ ಮೈಕೆಲ್ ನೇಸರ್ ಹಾಗೂ ಜ್ಯೆ ರಿಚರ್ಡ್ಸನ್ ನಡುವೆ ನೇರ ಪೈಪೋಟಿ ಇದೆ. ಹೀಗಾಗಿ ಇವರಿಬ್ಬರಲ್ಲಿ ಯಾರಾದರೂ ಪ್ಲೇಯಿಂಗ್ ಇಲೆವೆನ್ ನ ಭಾಗವಾಗಲಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್ ಗೆ ಆಸ್ಟ್ರೇಲಿಯಾದ 12 ಆಟಗಾರರು: ಟ್ರಾವಿಸ್ ಹೆಡ್, ಜೆಕ್ ವೆದರಾಲ್ಡ್, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮರಾನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ಬ್ರೆಂಡನ್ ಡಾಗೆಟ್, ಮೈಕೆಲ್ ನೇಸರ್, ಜ್ಯೆ ರಿಚರ್ಡ್ಸನ್.

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿಬೆನ್ ಡಕೆಟ್, ಜೇಕಬ್ ಬೆಥೆಲ್ಜೋ ರೂಟ್, ಹ್ಯಾರಿ ಬ್ರೂಕ್ಬೆನ್ ಸ್ಟೋಕ್ಸ್ (ನಾಯಕ), ಜೆಮಿ ಸ್ಮಿತ್ (ಮತ್ತು ಕೀಪರ್), ವಿಲ್ ಜ್ಯಾಕ್ಸ್, ಅನಿಲ ಅಟ್ಕಿನ್ಸನ್, ಬ್ರೈಡನ್ ಕಾರ್ಸ್, ಜೋಶ್ ಟಂಗ್.

ಆಸ್ಟ್ರೇಲಿಯಾ ಪರೀಕ್ಷೆತಂಡ: ಸ್ಟೀವ್ ಸ್ಮಿತ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ , ಬ್ರೆಂಡನ್ ಡಾಗೆಟ್, ಕ್ಯಾಮರಾನ್ ಹಸಿರು, ಟ್ರಾವಿಸ್ ಹೆಡ್, ಜೋಶ್ ಇಂಗ್ಲೀಷ್, ಉಸ್ಮಾನ್ ಖ್ವಾಜಾ , ಮಾರ್ನಸ್ ಲ್ಯಾಬುಶೇನ್, ಟಾಡ್ ಮರ್ಫಿ, ಮೈಕೆಲ್ ನೇಸರ್, ಜ್ಯೆ ರಿಚರ್ಡ್ಸನ್, ಮಿಚೆಲ್ ಸ್ಟಾರ್ಕ್, ಜೆಕ್ ವೆದರಾಲ್ಡ್, ಬ್ಯೂ ವೆಬ್ಸ್ಟರ್.

ಇದನ್ನೂ ಓದಿ: ಒಂದೇ ಒಂದು ರನ್‌ನೊಂದಿಗೆ ವರ್ಲ್ಡ್ ರೆಕಾರ್ಡ್ ಮುರಿದ ವಿರಾಟ್ ಕೊಹ್ಲಿ

ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಹ್ಯಾರಿ ಬ್ರೂಕ್ (ಉಪನಾಯಕ), ಜೋಫ್ರಾ ಆರ್ಚರ್, ಅನಿಲ ಅಟ್ಕಿನ್ಸನ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಬ್ರೈಡನ್ ಕಾರ್ಸ್, ಝಾಕ್ ಕ್ರಾಲಿಬೆನ್ ಡಕೆಟ್ವಿಲ್ ಜ್ಯಾಕ್ಸ್ಓಲಿ ಪಾಪ್, ಮ್ಯಾಥ್ಯೂ ಪಾಟ್ಸ್ಜೋ ರೂಟ್, ಜೆಮಿ ಸ್ಮಿತ್, ಜೋಶ್ ಟಂಗ್.



Source link

Leave a Reply

Your email address will not be published. Required fields are marked *