Amruthadhaare ರೋಚಕ ಟ್ವಿಸ್ಟ್​: ಜೈದೇವನಿಂದ ಆಕಾಶ್​ ಕಿಡ್ನಾಪ್​- ಮುಂದಾದದ್ದು ಭಯಾನಕ!

Amruthadhaare ರೋಚಕ ಟ್ವಿಸ್ಟ್​: ಜೈದೇವನಿಂದ ಆಕಾಶ್​ ಕಿಡ್ನಾಪ್​- ಮುಂದಾದದ್ದು ಭಯಾನಕ!

Amruthadhaare ರೋಚಕ ಟ್ವಿಸ್ಟ್​: ಜೈದೇವನಿಂದ ಆಕಾಶ್​ ಕಿಡ್ನಾಪ್​- ಮುಂದಾದದ್ದು ಭಯಾನಕ!
ಆಕಾಶ್, ಭೂಮಿಕಾ ಮತ್ತು ಗೌತಮ್ ಮಗ ಎಂಬ ಸತ್ಯ ತಿಳಿದ ಜೈದೇವ್ ಆತನನ್ನು ಅಪಹರಿಸಿದ್ದಾನೆ. ಮಿಂಚು ಬಿಡಿಸಿದ ಚಿತ್ರದ ಮೂಲಕ ಭೂಮಿಕಾಗೆ ಜೈದೇವನ ಕುತಂತ್ರದ ಬಗ್ಗೆ ಸುಳಿವು ಸಿಕ್ಕಿದ್ದು, ಆಸ್ತಿಗಾಗಿ ಜೈದೇವ್ ಏನು ಬೇಕಾದರೂ ಮಾಡುವ ಆತಂಕ ಎದುರಾಗಿದೆ.
ಅಮೃತಧಾರೆ (Amruthadhaare Serial) ಸೀರಿಯಲ್​ ರೋಚಕ ತಿರುವು ಪಡೆದುಕೊಂಡಿದೆ. ಈ ಹಿಂದೆ ಜೈದೇವ್​ ಆಕಾಶ್​ನನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ, ಅವನಿಗೇ ಚಳ್ಳೆಹಣ್ಣು ತಿನ್ನಿಸಿದ್ದ. ಮಲ್ಲಿ ಫೋಟೋ ತೋರಿಸಿದಾಗ ತನಗೆ ಗೊತ್ತೇ ಇಲ್ಲ ಎಂದಿದ್ದ.

ಆದರೆ, ಇದೀಗ ಫೋಟೋಶೂಟ್​ ಸಂದರ್ಭದಲ್ಲಿ ಮಲ್ಲಿ, ಭೂಮಿಕಾ ಮತ್ತು ಆಕಾಶ್​ ಇರುವ ಫೋಟೋ ಅನ್ನು ಮಿಂಚು ಅಲ್ಲಿಯೇ ಬೀಳಿಸಿ ಹೋಗಿದ್ದಳು. ಎಲ್ಲವೂ ಕೈಮೀರಿ ತನ್ನ ಪಾಲಿಗೆ ಏನೂ ಸಿಗದೇ ಹತಾಶನಾಗಿದ್ದ ಜೈದೇವನಿಗೆ ಈ ಫೋಟೋ ಸಿಕ್ಕಿತ್ತು.

ಅಲ್ಲಿಗೆ ಆಕಾಶ್​ ತನಗೆ ಮೋಸ ಮಾಡಿದ್ದು ತಿಳಿಯಿತು ಮಾತ್ರವಲ್ಲದೇ ಆಕಾಶ್​ ಭೂಮಿಕಾ ಮತ್ತು ಗೌತಮ್​ ಮಗ ಎನ್ನುವ ಸತ್ಯವೂ ತಿಳಿಯಿತು. ಇನ್ನೇನು ತಡ?

ಆಕಾಶ್​ ಶಾಲೆಗೆ ಹೋಗಿ ಆತನನ್ನು ಕಿಡ್​ನ್ಯಾಪ್​ ಮಾಡಿದ್ದಾನೆ ಜೈದೇವ್​. ಭೂಮಿಕಾ ಆತನಿಗಾಗಿ ಹುಡುಕಾಟ ನಡೆಸಿದಾಗ, ಮಿಂಚುಗೆ ಜೈದೇವನೇ ಇವನನ್ನು ಕರೆದುಕೊಂಡು ಹೋಗಿರಬಹುದು ಎನ್ನುವ ಡೌಟ್​ ಬಂದು, ಅವನ ಚಿತ್ರ ಬಿಡಿಸಿ ಭೂಮಿಕಾಗೆ ತೋರಿಸಿದ್ದಾಳೆ.

ಅದನ್ನು ನೋಡಿ ಭೂಮಿಕಾ ಶಾಕ್ ಆಗಿದ್ದಾಳೆ. ಕೊನೆಗೆ, ಅವರು ಜೈದೇವನ ಬಳಿಗೆ ಬಂದಿದ್ದಾರೆ. ಇಲ್ಲಿ ಜೈದೇವ ತನ್ನ ಆಟ ಶುರುವಿಟ್ಟುಕೊಂಡಿದ್ದಾನೆ. ಏನು ಅನಾಹುತ ಮಾಡುತ್ತಾನೆಯೋ ಕಾದು ನೋಡಬೇಕಿದೆ.

ಅಷ್ಟಕ್ಕೂ ಅಜ್ಜಿ ಎಲ್ಲಾ ಆಸ್ತಿಗಳನ್ನು ಗೌತಮ್​ ಹೆಸರಿಗೆ ಮಾಡಿರುವ ಹಿನ್ನೆಲೆಯಲ್ಲಿ, ಆಕಾಶ್​ನನ್ನು ಮುಂದಿಟ್ಟುಕೊಂಡು ಆ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡರೂ ಏನೂಆಶ್ಚರ್ಯವಿಲ್ಲ. ಸದ್ಯ ಆಕಾಶ್​ಗೆ ಆತ ಏನು ಮಾಡಿಲ್ಲ ಎನ್ನುವುದೇ ಸಮಾಧಾನ.

Source link

Leave a Reply

Your email address will not be published. Required fields are marked *