Brahmagantu: ಪರಸ್ತ್ರೀ ಜೊತೆ ಚಿರು ರೊಮಾನ್ಸ್​: ನರಸಿಂಹ ಕೆಂಡಾಮಂಡಲ- ಸತ್ಯ ಬ್ಲಾಸ್ಟ್​ ಆಗೋ ಸಮಯವಿದು!

Brahmagantu: ಪರಸ್ತ್ರೀ ಜೊತೆ ಚಿರು ರೊಮಾನ್ಸ್​: ನರಸಿಂಹ ಕೆಂಡಾಮಂಡಲ- ಸತ್ಯ ಬ್ಲಾಸ್ಟ್​ ಆಗೋ ಸಮಯವಿದು!

Brahmagantu: ಪರಸ್ತ್ರೀ ಜೊತೆ ಚಿರು ರೊಮಾನ್ಸ್​: ನರಸಿಂಹ ಕೆಂಡಾಮಂಡಲ- ಸತ್ಯ ಬ್ಲಾಸ್ಟ್​ ಆಗೋ ಸಮಯವಿದು!

ಬ್ರಹ್ಮಗಂಟು ಸೀರಿಯಲ್‌ನಲ್ಲಿ, ತನ್ನ ತಂಗಿ ದೀಪಾಳಿಗೆ ಚಿರಾಗ್ ಮೋಸ ಮಾಡುತ್ತಿದ್ದಾನೆಂದು ನರಸಿಂಹ ತಪ್ಪಾಗಿ ಭಾವಿಸುತ್ತಾನೆ. ದೀಪಾ-ಚಿರಾಗ್ ವಿವಾಹ ವಾರ್ಷಿಕೋತ್ಸವದಂದೇ ಸೌಂದರ್ಯಳ ಕುತಂತ್ರದಿಂದ ನರಸಿಂಹ ಎಲ್ಲರ ಮುಂದೆ ಚಿರಾಗ್‌ನನ್ನು ನಿಂದಿಸುತ್ತಾನೆ.

ಬ್ರಹ್ಮಗಂಟು ಸೀರಿಯಲ್​ (Brahmagantu Serial) ನಲ್ಲಿ ಇದುವರೆಗೆ ದೀಪಾ ಮತ್ತು ದಿಶಾ ಇಬ್ಬರೂ ಒಬ್ಬರೇ ಎನ್ನುವ ಸತ್ಯ ರೂಪಾ ಬಿಟ್ಟರೆ ಯಾರಿಗೂ ತಿಳಿದಿಲ್ಲ. (ಇದು ಸ್ವಲ್ಪ ಹಾಸ್ಯಾಸ್ಪದ ಎನ್ನಿಸಿದರೂ ಸೀರಿಯಲ್​ನಲ್ಲಿ ಎಲ್ಲವೂ ಸಾಧ್ಯ ಎಂದುಕೊಂಡು ವೀಕ್ಷಕರೂ ಸುಮ್ಮನೇ ನೋಡುತ್ತಿದ್ದಾರೆ ಅನ್ನಿ).

ಆದರೆ, ದೀಪಾಳ ಅಣ್ಣ ನರಸಿಂಹ, ಚಿರಾಗ್​ನನ್ನು ಬೇರೆ ಒಬ್ಬಾಕೆಯ ಜೊತೆ ಆತ್ಮೀಯವಾಗಿ ಇರುವುದನ್ನು ನೋಡಿ ಉರಿದು ಹೋಗಿದ್ದಾನೆ. ತನ್ನ ತಂಗಿಗೆ ಮೋಸ ಆಗುತ್ತಿದೆ ಎಂದುಕೊಂಡಿರುವ ಆತ ಸುಮ್ಮನೇ ಬಿಟ್ಟಾನೆಯೆ?

ಅಷ್ಟಕ್ಕೂ ಆಗಿದ್ದೇನೆಂದರೆ, ನರಸಿಂಹ ತಾನೇ ಸ್ವತಃ ದುಡಿಯಬೇಕು ಎನ್ನುವ ಕಾರಣಕ್ಕೆ ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ಆ ಕಟ್ಟಡದ ಮಾಲೀಕ ಚಿರಾಗ್​. ಚಿರಾಗ್​ ಅಲ್ಲಿ ದಿಶಾಳನ್ನು ಕರೆದುಕೊಂಡು ಬಂದಿದ್ದ. ಚಿರುನ ಕಣ್ಣಿಗೆ ಧೂಳು ಹೋದಾಗ ದಿಶಾ ಹತ್ತಿರ ಹೋಗಿ ಸರಿ ಮಾಡಿದ್ದಳು. ಒಟ್ಟಿಗೇ ಆತ್ಮೀಯತೆಯಿಂದ ಇರುವುದನ್ನು ನೋಡಿ ನರಸಿಂಹ ಚಿರು ಬಗ್ಗೆ ತಪ್ಪು ತಿಳಿದುಕೊಂಡು ಬಿಟ್ಟಿದ್ದಾನೆ!ಯಾವುದೋ ಮಾಡೆಲ್​ ಜೊತೆ ಚಿರುಗೆ ಸಂಬಂಧ ಇದೆ ಎಂದುಕೊಂಡು ಬಿಟ್ಟಿದ್ದಾನೆ.

ಅದೇ ಇನ್ನೊಂದೆಡೆ, ದೀಪಾ ಮತ್ತು ಚಿರಾಗ್​ ಮೊದಲ ವಿವಾಹ ವಾರ್ಷಿಕೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ, ನರಸಿಂಹನನ್ನು ಮುಂದಿಟ್ಟುಕೊಂಡು ಕಿಚ್ಚು ಹೊತ್ತಿಸಲು ಸೌಂದರ್ಯ ರೆಡಿಯಾಗಿ ನಿಂತಿದ್ದಾಳೆ. ವಿಶೇಷ ಅತಿಥಿ ಬರ್ತಾನೆ ನೋಡು ಎಂದು ಹೇಳುತ್ತಲೇ ಖುಷಿ ಪಟ್ಟುಕೊಳ್ಳುತ್ತಿದ್ದಾಳೆ.

ಅಷ್ಟೊತ್ತಿಗಾಗಲೇ ದೀಪಾ ಚಿರು ಜೊತೆ ತನ್ನ ಮುದ್ದು ಮುದ್ದು ಮಾತಿನಿಂದ ರೊಮಾನ್ಸ್​ ಶುರು ಮಾಡಿಕೊಂಡಿದ್ದಳು. ಆದರೆ, ದೀಪಾಳೇ ದಿಶಾ ಎನ್ನುವ ಸತ್ಯ ತಿಳಿಯದ ನರಸಿಂಹ, ಕೆಂಡಾಮಂಡಲನಾಗಿ ಬಂದು ಚಿರಾಗ್​ ವಿರುದ್ಧ ಕೆಟ್ಟ ಪದಗಳಿಂದ ನಿಂದಿಸಿದ್ದಾನೆ.

ಅವನಿಗೆ ಬೇರೆಯವರ ಜೊತೆ ಸಂಬಂಧ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾನೆ. ಸೌಂದರ್ಯ ಖುಷಿಪಟ್ಟುಕೊಂಡರೆ ಉಳಿದವರು ಶಾಕ್​ ಆಗಿದ್ದಾರೆ. ಇದೀಗ ದೀಪಾ ಸತ್ಯವನ್ನು ಬಯಲು ಮಾಡಲೇಬೇಕಿದೆ. ಆ ಸತ್ಯ ಬ್ಲಾಸ್ಟ್​ ಆಗುತ್ತಾ?

Source link

Leave a Reply

Your email address will not be published. Required fields are marked *