ಚಿಕ್ಕಬಳ್ಳಾಪುರ, ಡಿಸೆಂಬರ್ 25: ಊಟಕ್ಕೆ ನಿಲ್ಲಿಸಿದ್ದ ವೇಳೆ ಬೆಂಗಳೂರು-ಹೈದರಾಬಾದ್ ಕೆ.ಎಸ್.ಆರ್.ಟಿ.ಸಿ ಎಸಿ ಸ್ಲೀಪರ್ ಬಸ್‌ನಲ್ಲಿದ್ದ 55 ಲಕ್ಷ ರೂ. ಹಣ ಕಳವು ಸಂಬಂಧ ಹುಡಿಬಂಡೆ ಪ್ರಕರಣ ಆರೋಪಿಯನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದು, ಹಣವನ್ನ ಬಂಧಿತನಿಂದ ಜಪ್ತಿ ಮಾಡಲಾಯಿತು. ಎಲ್ಲ ಆರೋಪಿಗಳು ಮಧ್ಯಪ್ರದೇಶದ ಮೂಲದವರು ಎಂಬುದು ತನಿಳೆ ವೇಳೆ ಬಯಲಾಗಿದೆ.
ಪ್ರಕರಣ ಸಂಬಂಧ ಮಧ್ಯ ಆರೋಪಿ ಅಸ್ಲಂ ಖಾನ್ ಎಂಬಾತನನ್ನು ಬಂಧಿಸಲಾಗಿದೆ, ಕದ್ದ ಹಣವನ್ನು ರಿಕವರಿ ಮಾಡಲಾಗಿದೆ. ಈತನಿಗೆ ಕೃತ್ಯವೆಸಗಲು ಸಹಕಾರ ನೀಡಿದ್ದ ಮಧ್ಯ ಪ್ರದೇಶ ಮೂಲದವರಾದ ಮನೀರ್ ಖಾನ್, ಅಭ್ಯಾಖಾನ್ ಮತ್ತು ಶೇರು ಪರಾರಿಯಾಗಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಸುವವರ ಬೆಲೆಬಾಳುವ ವಸ್ತು, ಚಿನ್ನಾಭರಣ, ಹಣ ಕಳ್ಳತನ ಮಾಡುವುದೇ ಈ ಗ್ಯಾಂಗ್ ಕಾಯಕವಾಗಿತ್ತು. ಕಳ್ಳತನ ಮಾಡಲು ಅನುಕೂಲವಾಗುವ ಚಿಕ್ಕಬಳ್ಳಾಪುರ ಜಿಲ್ಲೆಯ ಬೀಚಗಾನಹಳ್ಳಿ ಕ್ರಾಸ್ ಬಳಿ ಬಾಡಿಗೆಗೆ ಇವರ ರೂಮ್ ಕೂಡ ಪಡೆದಿದ್ದರು. ಕದ್ದ ಹಣವನ್ನು ಇಲ್ಲೇ ಇಟ್ಟು ಆರೋಪಿಗಳು ಮಧ್ಯಪ್ರದೇಶಕ್ಕೆ ತೆರಳಿದ್ದರು. ಹೀಗಾಗಿ ಹಣ ಸೇಫ್ ಆಗಿ ಇತ್ತು.
ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ನುಗ್ಗಿ ಬ್ಯಾಗ್ ಕದ್ದು ಎಸ್ಕೇಪ್; ಕಳುವಾಗಿದ್ದು ಅರ್ಧಕೋಟಿ ಹಣ!
ಘಟನೆ ಏನು?
ಇದೇ ತಿಂಗಳ 8ನೇ ತಾರೀಕು ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಎಸ್‌ಸಿ ಸ್ಲೀಪರ್ ಐಷಾರಾಮಿ ಬಸ್‌ನಲ್ಲಿ ವೆಂಕಟೇಶ್ವರ್ ರಾವ್ ಎಂಬವರು ಪ್ರಯಾಣಿಸುತ್ತಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಬಳಿ ಇರುವ ಹೋಟೆಲ್ ಪ್ರಯಾಣಿಕರಿಗೆ ಊಟ ಮಾಡಲು ಚಾಲಕ ಬಸ್ ನಿಲ್ಲಿಸಿದ್ದ. ಈ ವೇಳೆ ವೆಂಕಟೇಶ್ವರ್ ರಾವ್ ತಮ್ಮ ಬಳಿ ಇದ್ದ ಹಣದ ಬ್ಯಾಗ್ನ ಬಸ್ ನಲ್ಲೇ ಬಿಟ್ಟು ಊಟಕ್ಕೆ ತೆರಳಿದ್ದರು. ಆದರೆ ಹಿಂದಿರುಗಿ ಬಂದು ನೋಡುವಾಗ ಸೀಟ್‌ನಲ್ಲಿದ್ದ ಬ್ಯಾಗ್ ನಾಪತ್ತೆಯಾಗಿತ್ತು. ಕಾರಲ್ಲಿ ಬಂದ ವ್ಯಕ್ತಿ ಸೀದಾ ಬಸ್‌ಗೆ ನುಗ್ಗಿ ಬ್ಯಾಗ್ ತೆಗೆದುಕೊಂಡು ಹೋಗಿರುವ ಬಗ್ಗೆ ಸಹ ಪ್ರಯಾಣಿಕರು ಮಾಹಿತಿ ನೀಡಿದ್ದರು. ಘಟನೆಯ ಬಗ್ಗೆ ವೆಂಕಟೇಶ್ವರ್ ರಾವ್ ಅವರ ದೂರಿನ ಬೆನ್ನಲ್ಲೇ ತನಿಖೆಗೆ ಇಳಿದಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.