Headlines

ವಿದೇಶದಲ್ಲಿ ವಿಜಯ್ ಅದ್ಧೂರಿ ಆಡಿಯೋ ಲಾಂಚ್: ಕಠಿಣ ನಿಯಮ ಹೇರಿದ ಪೊಲೀಸರು

ವಿದೇಶದಲ್ಲಿ ವಿಜಯ್ ಅದ್ಧೂರಿ ಆಡಿಯೋ ಲಾಂಚ್: ಕಠಿಣ ನಿಯಮ ಹೇರಿದ ಪೊಲೀಸರು


ದಳಪತಿ ವಿಜಯ್ (ತಲಪತಿ ವಿಜಯ್), ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಜೊತೆಯಾಗಿ ಸಾಗುತ್ತಿದ್ದಾರೆ. ಆದರೆ ತಾವು ಸಿನಿಮಾ ಪಯಣವನ್ನು ಮುಗಿಸುವುದಾಗಿ ಘೋಷಿಸಲಾಗಿದೆ. ಈಗ ಚಿತ್ರಗೊಳ್ಳುತ್ತಿರುವ ‘ಜನ ನಾಯಕನ್’ ಅವರ ಕೊನೆಯ ಸಿನಿಮಾ ಆಗಲಿದೆಯಂತೆ. ‘ಜನ ನಾಯಕನ್’ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಅದ್ಧೂರಿ ಪ್ರಚಾರಕ್ಕೆ ವಿಜಯ್ ಚಾಲನೆ ನೀಡಲಿದ್ದಾರೆ, ಸಿನಿಮಾದ ಆಡಿಯೋ ಲಾಂಚ್ ಇವೆಂಟ್ ಅನ್ನು ವಿದೇಶದಲ್ಲಿ ನಡೆಸಲಾಗುತ್ತಿದೆ. ಆದರೆ ಕೆಲವು ನಿಬಂಧನೆಗಳು ಸ್ಥಳೀಯ ಪೊಲೀಸರು ಹೇರಿದ್ದಾರೆ.

ನೆರೆಯ ರಾಷ್ಟ್ರವಾದ ಮಲೇಷ್ಯಾನಲ್ಲಿ ವಿಜಯ್ ಅವರ ‘ಜನ ನಾಯಕನ್’ ಸಿನಿಮಾದ ಅದ್ಧೂರಿ ಪ್ರೀ ರಿಲೀಸ್ ಇವೆ. ಮಲೇಷ್ಯಾನಲ್ಲಿ ಸಾಕಷ್ಟು ತಮಿಳು ಜನರಿದ್ದು, ಮಲೇಷ್ಯಾ, ತಮಿಳರಿಗೆ ಎರಡನೇ ತಮಿಳುನಾಡು ಎಂಬಂತೆ ಆಗಿದೆ. ಇದೇ ಕಾರಣಕ್ಕೆ ವಿಜಯ್ ಅವರು ಇಲ್ಲಿ ಆಡಿಯೋ ಲಾಂಚ್ ನಡೆಸುತ್ತಿದ್ದಾರೆ. ಈ ಹಿಂದೆ ಸಹ ಕೆಲವಾರು ತಮಿಳು ಸಿನಿಮಾಗಳ ಕಾರ್ಯಕ್ರಮಗಳು ಮಲೇಷ್ಯಾನಲ್ಲಿ ನಡೆದಿವೆ. ಆದರೆ ಈ ಬಾರಿ ವಿಜಯ್ ಗೆ ಕೆಲವು ಕಠಿಣ ನಿಯಮಗಳು ಸ್ಥಳೀಯ ಪೊಲೀಸರು ಹೇರಿದ್ದಾರೆ.

ಮಲೇಷ್ಯಾದ ರಾಜಧಾನಿ ಕೌಲಾಲಂಪುರದಲ್ಲಿ ‘ಜನ ನಾಯಕನ್’ ಸಿನಿಮಾದ ಆಡಿಯೋ ಲಾಂಚ್ ನಡೆಯಲಿದೆ, ಸ್ಥಳೀಯ ಪೊಲೀಸ್ ಆಯುಕ್ತ ಮಾಧ್ಯಮಗಳೊಟ್ಟಿಗೆ ಮಾತನಾಡಿ, ‘ಮನೋರಂಜನಾ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದು, ಇದು ರಾಜಕೀಯ ಗೋಷ್ಠಿ ಆಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ವಿಜಯ್ ಅವರು ಆಡಿಯೋ ಲಾಂಚ್‌ನಲ್ಲಿ ಯಾವುದೇ ರಾಜಕೀಯ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ, ಕಾರ್ಯಕ್ರಮಕ್ಕೆ ಹಾಜರಾಗುವ ಜನರ ಸಂಖ್ಯೆಗೂ ಮಿತಿ ಇರಬೇಕು ಎಂದು ಸಹ ಹೇಳಲಾಗಿದೆ.

ಇದನ್ನೂ ಓದಿ:ಕರೂರು ಘಟನೆಯಿಂದ ‘ಜನ ನಾಯಕನ್’ ರಿಲೀಸ್ ಮುಂದಕ್ಕೆ? ಇಲ್ಲಿದೆ ಹೊಸ ಅಪ್ಡೇಟ್

‘ಜನ ನಾಯಕನ್’ ಸಿನಿಮಾ ವಿಜಯ್ ಕೊನೆಯ ಸಿನಿಮಾ ಎನ್ನಲಾಗುತ್ತಿದ್ದು, ಅದರ ಬಳಿಕ ಸಂಪೂರ್ಣವಾಗಿ ಅವರು ರಾಜಕೀಯದಲ್ಲಿ ತೊಡಗಿಕೊಳ್ಳುತ್ತಿದ್ದಾರಂತೆ. ವಿಜಯ್ ಅವರ ರಾಜಕೀಯಕ್ಕೆ ನೆರವಾಗಲು ಈ ಸಿನಿಮಾ ನಿರ್ಮಿಸಲಾಗುತ್ತಿದೆ, ವಿಜಯ್ ಅವರ ರಾಜಕೀಯ ಅಜೆಂಡಾಗಳನ್ನು ಸಿನಿಮಾ ಮೂಲಕ ತೋರಿಸಲಾಗುತ್ತಿದೆ ಎಂಬುದು ಗುಟ್ಟೇನೂ ಅಲ್ಲ. ಸಿನಿಮಾದ ಪ್ರಚಾರದಲ್ಲೂ ವಿಜಯ್ ತಮ್ಮ ಅಜೆಂಡ ಪ್ರಚಾರ ಮಾಡಲಿದ್ದಾರೆ, ಆದರೆ ಮಲೇಷ್ಯಾ ಪೊಲೀಸರಿಗೆ ತಡೆ ಒಡ್ಡಿದ್ದಾರೆ.

‘ಜನ ನಾಯಕನ್’ ಸಿನಿಮಾವನ್ನು ಕೆವಿಎನ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಇವರು ಕನ್ನಡದ ಕೆಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿರುವ ಎಚ್ ವಿನೋದ್. ಸಿನಿಮಾದ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಮಲಯಾಳಂ ನಟಿ ಮಮಿತಾ ಬಿಜು, ಪ್ರಿಯಾಮಣಿ, ಪ್ರಕಾಶ್ ರೈ, ಗೌತಮ್ ವಾಸುದೇವ್ ಮೆನನ್ ಅವರು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *