ಕ್ರಿಸ್ಮಸ್ ಪ್ರಯುಕ್ತ ರಿಲೀಸ್ ಆದ ’45’ ಮತ್ತು ‘ಮಾರ್ಕ್’ ಸಿನಿಮಾಗಳು (ಮಾರ್ಕ್ ಚಲನಚಿತ್ರ) ಮೊದಲ ದಿನವೇ ಅಬ್ಬರದ ಕಲೆಕ್ಷನ್ ಮಾಡಿವೆ. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿವೆ. ಇಂದು ವಾರದ ದಿನ ಆಗಿರುವುದರಿಂದ, ಯಾವುದೇ ರಜೆ ಇಲ್ಲದಿದ್ದರೂ ಕಲೆಕ್ಷನ್ ಕೊಂಚ ತಗ್ಗಬಹುದು. ಆದರೆ, ಶನಿವಾರ, ಭಾನುವಾರ ಮತ್ತು ಹೊಸ ವರ್ಷದಂದು ಈ ಚಿತ್ರ ಅಬ್ಬರದ ಕಲೆಕ್ಷನ್ ಮಾಡೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟಾಗುತ್ತದೆ ಎಂಬ ಕುತೂಹಲ ಮೂಡಿದೆ.
‘ಮಾರ್ಕ್’ ಚಿತ್ರದ ಮೊದಲ ದಿನದ ಗಳಿಕೆ
‘ಮ್ಯಾಕ್ಸ್’ ಆದ ಬಳಿಕ ‘ಮಾರ್ಕ್’ ಸಿನಿಮಾ ರಿಲೀಸ್ ಆಯಿತು. ಕಳೆದ ವರ್ಷ ಡಿಸೆಂಬರ್ 25 ರಂದು ‘ಮ್ಯಾಕ್ಸ್’ ಬಂದಿದ್ದರೆ ಈ ವರ್ಷ ಅದೇ ದಿನಾಂಕದಂದು ‘ಮಾರ್ಕ್’ ಬಂದಿದೆ. ಈ ಚಿತ್ರ ‘ಮ್ಯಾಕ್ಸ್’ ಸಿನಿಮಾ ಶೇಡ್‌ನಲ್ಲಿದೆ ಎಂಬ ಅಭಿಪ್ರಾಯವನ್ನು ಅನೇಕರು ಹೊರ ಹಾಕಿದ್ದಾರೆ. ಎರಡು ದಿನದಲ್ಲಿ ನಡೆಯೋ ಕಥೆ ಆಗದೆ ಸಿನಿಮಾ ವೇಗವಾಗಿ ಸಾಗುತ್ತದೆ. ಈ ಚಿತ್ರ ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದೆ.
‘ಮಾರ್ಕ್’ ಸಿನಿಮಾ ಮೊದಲ ದಿನ 6.28 ಕೋಟಿ ರೂಪಾಯಿ ಗಳಿಸಿದೆ ಎಂದು sacnilk ವರದಿ ಮಾಡಿದೆ. ಮೊದಲ ದಿನವೇ ಸಿನಿಮಾ ಅಬ್ಬರಿಸಿ. ಈ ಚಿತ್ರಕ್ಕೆ ಎಲ್ಲ ಕಡೆಗಳಲ್ಲಿ ಪ್ಯಾಸಿಟಿವ್ ವಿಮರ್ಶೆಗಳು ಸಿಕ್ಕಿದ್ದು ಸಿನಿಮಾಗೆ ಸಹಕಾರಿ ಆಗುತ್ತಿದೆ. ಈ ಚಿತ್ರಕ್ಕೆ ಸುದೀಪ್ ಹೀರೋ. ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ನಿರ್ದೇಶನ ಸಿನಿಮಾ ಇದೆ.
’45’ ಚಿತ್ರದ ಮೊದಲ ದಿನದ ಗಳಿಕೆ
45 ಸಿನಿಮಾ ಕೂಡ ಮೊದಲ ದಿನ ಒಳ್ಳೆಯ ಕಲೆಕ್ಷನ್ ಮಾಡಿದೆ. ಇದು ಮಲ್ಟಿಸ್ಟಾರ್ ಚಿತ್ರ. ಉಪೇಂದ್ರ, ರಾಜ್ ಬಿ ಶೆಟ್ಟಿ, ಶಿವರಾಜ್ ಕುಮಾರ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಕೂಡ ಮೊದಲ ದಿನ ಒಳ್ಳೆಯ ಓಪನಿಂಗ್ ಪಡೆದಿದೆ.
ಇದನ್ನೂ ಓದಿ: ‘ಡೆವಿಲ್’ ನಂತರ ರೇಟಿಂಗ್ ಕೊಡದಂತೆ ಕೋರ್ಟ್ ನಿಂದ ಆರ್ಡರ್ ತಂದ ’45’, ‘ಮಾರ್ಕ್’
ಈ ಸಿನಿಮಾದ ಮೊದಲ ದಿನದ ಗಳಿಕೆ ಬಗ್ಗೆ sacnilk ಲೆಕ್ಕ ಕೊಟ್ಟಿದೆ. ಈ ಮೊದಲ ದಿನದ ಕಲೆಕ್ಷನ್ 4.25 ಕೋಟಿ ರೂಪಾಯಿ ಮೌಲ್ಯ ಚಿತ್ರ. ಪ್ರೀಮಿಯರ್ ಶೋಗಳ ಲೆಕ್ಕವೂ ಸೇರಿದರೆ 5 ಕೋಟಿ ರೂಪಾಯಿ ದಾಟಲಿದೆ. ಈ ಸಿನಿಮಾ ಅಭಿಮಾನಿಗಳು ಕೈ ಹಿಡಿಯುವ ಲಕ್ಷಣ ಗೋಚರವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.