ಬಿಗ್ ಬಾಸ್ ಕನ್ನಡ ಸೀಸನ್ 12 ಶೋಗೆ ಫ್ಯಾಮಿಲಿ ರೌಂಡ್ ಇದ್ದು, ಈಗಾಗಲೇ ಮನೆಗೆ ಎಲ್ಲ ಸ್ಪರ್ಧಿಗಳ ಮನೆಯವರು ಎಂಟ್ರಿ ಕೊಟ್ಟಿದ್ದಾರೆ. ಈಗ ಮಾಳು ನಿಪನಾಳ ಅವರ ಕುಟುಂಬ ಕೂಡ ದೊಡ್ಮನೆಗೆ ಬಂದಿದೆ.

ಮಾಳು ನಿಪನಾಳ ಅವರು ಟಾಸ್ಕ್ ಸಲುವಾಗಿ ಡ್ರ್ಯಾಗನ್ ಹೇರ್‌ಸ್ಟೈಲ್ ಮಾಡಿಕೊಂಡಿದ್ದರು. ಅಂತೆಯೇ ಅವರ ಇಬ್ಬರು ಗಂಡು ಮಕ್ಕಳು ಕೂಡ ಈ ಸ್ಟೈಲ್ ಮಾಡಿಸಿಕೊಂಡಿದ್ದಾರೆ. ಇದನ್ನು ನೋಡಿ ಮಾಳು ಅವರು ಫುಲ್ ಖುಷಿಯಾಗಿದ್ದಾರೆ.

ಮಾಳು ನಿಪನಾಳ ಅವರು ಈ ಮನೆಯಲ್ಲಿ ಸ್ಟ್ಯಾಂಡ್ ತಗೋಳಲ್ಲ, ಮಾತು ಆಡಲ್ಲ, ಕಾಣಿಸಿಕೊಳ್ಳೋದಿಲ್ಲ ಎಂಬ ಆರೋಪ ಇದೆ. ಉತ್ತರ ಕರ್ನಾಟಕದಲ್ಲಿ ಇವರಿಗೆ ಬೆಂಬಲ ಇದೆ ಎಂದು ದೊಡ್ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂಬ ಮಾತು ಕೂಡ ಇದೆ.

ಮಾಳು ನಿಪನಾಳ ಅವರ ಮಕ್ಕಳು ದೊಡ್ಮನೆಯಲ್ಲಿ ಬಿಂದಾಸ್ ಆಗಿ ಆಟ ಆಡಿದ್ದಾರೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಆಡಿದ್ದಾರೆ, ಬಾಲ್ ಹಿಡಿದುಕೊಂಡು ಓಡಾಡಿದ್ದಾರೆ. ಗಿಲ್ಲಿ ನಟ ಅವರಂತೂ ಮಕ್ಕಳನ್ನು ಆಡಿಸಿದ್ದಾರೆ. ಅಂದಹಾಗೆ ಮಾಳು ಪತ್ನಿ ಕೂಡ ಗಾಯಕಿ, ಹೀಗಾಗಿ ಅವರು ಕೂಡ ಮಾಳು ಜೊತೆ ಹಾಡು ಹಾಡಿದ್ದಾರೆ.

ಮಾಳು ಮಕ್ಕಳು ಬಿಂದಾಸ್ ಆಗಿ ಆಟ ಆಡಿದ್ದಾರೆ, ಅವರು ಯಾವುದಕ್ಕೂ ಹೆದರಿಲ್ಲ. ಇದನ್ನು ಕಂಡು ಗಿಲ್ಲಿ ನಟ ಕೂಡ ಸರ್ಪ್ರೈಸ್ ಆಗಿದ್ದಾರೆ. ಏನಣ್ಣಾ, ಇವರು ಯಾವುದಕ್ಕೂ ಹೆದರೋದಿಲ್ಲ ಎಂದು ಗಿಲ್ಲಿಯೇ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ, ಗಿಲ್ಲಿ ನಟ, ಕಾವ್ಯ ಶೈವ, ಅಶ್ವಿನಿ ಗೌಡ, ಧನುಷ್ ಗೌಡ, ಧ್ರುವಂತ್, ಸೂರಜ್, ರಘು ಅವರು ಕುಟುಂಬಸ್ಥರು ಆಗಮಿಸಿದ್ದರು. ಆ ವೇಳೆ ಗಿಲ್ಲಿ ನಟನ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ, ಗಿಫ್ಟ್ ಕೂಡ ನೀಡಿದ್ದಾರೆ. ಅಂದಹಾಗೆ ಇನ್ನು ಫಿನಾಲೆಗೆ 20 ದಿನಗಳು ಬಾಕಿ ಉಳಿದಿವೆ. ಹೀಗಾಗಿ ಯಾರು ವಿನ್ ಆಗ್ತಾರೆ ಎಂದು ಕಾದು ನೋಡಬೇಕಿದೆ.

Source link
BBK 12: ಮಾಳು ನಿಪನಾಳ ಮಕ್ಕಳ ಅಬ್ಬರಕ್ಕೆ ಬೆರಗಾದ ಗಿಲ್ಲಿ ನಟ; ಅಂಥದ್ದೇನು ಮಾಡಿದ್ರು?