ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಬುದ್ಧಿವಂತಿಕೆ ಮತ್ತು ದೃಷ್ಟಿ ತೀಕ್ಷ್ಣತೆಯನ್ನು ಪರೀಕ್ಷಿಸಲು ನೀವು ಮುಂದಾಗಿದ್ರೆ ಈ ಇಲ್ಯೂಷನ್ ಚಿತ್ರವು ನಿಮ್ಮ ಸಹಾಯಕ್ಕೆ ಬರುತ್ತದೆ. ಈ ಒಗಟಿನ ಆಟಗಳು ಅಥವಾ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಚಿತ್ರಗಳನ್ನು ಬಿಡಿಸಿರುವ ಮಜಾನೇ ಬೇರೆ. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಗಿಳಿಯನ್ನು ಕೇವಲ 7 ಸೆಕೆಂಡುಗಳಲ್ಲಿ ಹುಡುಕುವ ಮೂಲಕ ನಿಮ್ಮ ವೀಕ್ಷಣಾ ಸಾಮರ್ಥ್ಯ ತೀಕ್ಷ್ಣವಾಗಿದೆ ಎಂದು ಪರೀಕ್ಷಿಸಿ.
ಈ ಚಿತ್ರವನ್ನು ಒಮ್ಮೆ ಸೂಕ್ಷ್ಮವಾಗಿ ನೋಡಿ
ನಿಮ್ಮ ಕಣ್ಣು ಸಖತ್ ಶಾರ್ಪ್ ಇದ್ದು, ಹದ್ದಿನ ಕಣ್ಣು ನಿಮ್ಮದಾಗಿದೆ ಎಂದಾದರೆ ಮಾತ್ರ ಈ ಚಿತ್ರದಲ್ಲಿ ಗಿಳಿಯನ್ನು ಹುಡುಕಲು ಸಾಧ್ಯ. ಈ ಚಿತ್ರದಲ್ಲಿ ಒಬ್ಬ ಮಹಿಳೆ ಮನೆಯ ಮುದ್ದಿನ ಶ್ವಾನವನ್ನು ಹಿಡಿದು ಕುಳಿತಿದ್ದಾಳೆ. ಅಲ್ಲೇ ಪಕ್ಕದಲ್ಲಿ ಗಿಳಿಯೊಂದಿದೆ. ಈ ಪಕ್ಷಿಯನ್ನು 7 ಸೆಕೆಂಡುಗಳೊಳಗೆ ಕಂಡು ಹಿಡಿಯುವ ಸವಾಲು ನಿಮ್ಮ ಮುಂದಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ಈ ಒಗಟು ಬಿಡಿಸಲು ಸಾಧ್ಯ.
ಇದನ್ನೂ ಓದಿ: ಈ ಚಿತ್ರದಲ್ಲಿರುವ ಅಣಬೆಯನ್ನು 30 ಸೆಕೆಂಡುಗಳಲ್ಲಿ ಗುರುತಿಸಲಾಗಿದೆ
ಉತ್ತರ ಇಲ್ಲಿದೆ ನೋಡಿ

ಎಷ್ಟು ಸೂಕ್ಷ್ಮವಾಗಿ ಗಮನಿಸಿದರೂ 7 ಸೆಕೆಂಡುಗಳು ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ನಿಮ್ಮ ಕಣ್ಣಿಗೆ ಮುದ್ದಾದ ಗಿಳಿಯೂ ಬಿದ್ದಿಲ್ಲವೇ. ಚಿಂತೆ ಬೇಡ ಇಲ್ಲಿದೆ ಉತ್ತರ. ಹೂವು ಕುಂಡದಲ್ಲಿರುವ ಸಣ್ಣ ಗಿಡದ ಮೇಲೆ ಗಿಳಿಯೊಂದು ಕುಳಿತುಕೊಂಡಿದೆ. ಈ ಮೇಲಿನ ಚಿತ್ರದಲ್ಲಿ ಗಿಳಿ ಎಲ್ಲಿದೆ ಎಂದು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ