BBK 12: ಗಿಲ್ಲಿ ನಟನ ಮದುವೆ ವಿಷಯ; ಸೀಕ್ರೇಟ್‌ ರಿವೀಲ್‌ ಮಾಡಿಯೇ ಬಿಟ್ರು ತಂದೆ-ತಾಯಿ!

BBK 12: ಗಿಲ್ಲಿ ನಟನ ಮದುವೆ ವಿಷಯ; ಸೀಕ್ರೇಟ್‌ ರಿವೀಲ್‌ ಮಾಡಿಯೇ ಬಿಟ್ರು ತಂದೆ-ತಾಯಿ!

BBK 12: ಗಿಲ್ಲಿ ನಟನ ಮದುವೆ ವಿಷಯ; ಸೀಕ್ರೇಟ್‌ ರಿವೀಲ್‌ ಮಾಡಿಯೇ ಬಿಟ್ರು ತಂದೆ-ತಾಯಿ!

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಅವರು ಸಖತ್‌ ಆಗಿ ಆಡುತ್ತಿದ್ದಾರೆ. ಈಗ ಗಿಲ್ಲಿ ನಟನ ತಂದೆ-ತಾಯಿ ಮನೆಗೆ ಬಂದಿದ್ದು, ಮದುವೆ ವಿಚಾರ ಚರ್ಚೆ ಆಗಿದೆ. ಅಂದಹಾಗೆ ಅಶ್ವಿನಿ ಗೌಡ ಅವರು ಗಿಲ್ಲಿ ನಟನ ಮದುವೆ ಬಗ್ಗೆ ಮಾತನಾಡಿದ್ದಾರೆ.

ಇವನನ್ನು ಮನೆಯಲ್ಲಿ ಹೇಗೆ ತಡೆದುಕೊಳ್ತೀರಿ? ಇವನ ಮದುವೆ ಯಾವಾಗ ಎಂದು ಅಶ್ವಿನಿ ಗೌಡ ಅವರು ಗಿಲ್ಲಿ ನಟ, ಕುಳ್ಳಯ್ಯ, ಸವಿತಾಗೆ ಪ್ರಶ್ನೆ ಮಾಡಿದ್ದಾರೆ. ಆಗ ತಂದೆ-ತಾಯಿ ಇಬ್ಬರೂ ಉತ್ತರ ಕೊಟ್ಟಿದ್ದಾರೆ.

“ಇವನನ್ನು ಕಟ್ಟಿ ಹಾಕೋದು ತುಂಬ ಕಷ್ಟ. ಎಷ್ಟು ನೋವು ಕೊಟ್ಟಿದ್ದಾನೋ ಆಗ, ಅಷ್ಟೇ ಖುಷಿ ಕೊಡುತ್ತಿದ್ದಾನೆ. ಮೂರು ವರ್ಷದ ಮಗು ಇದ್ದಾಗಿನಿಂದಲೂ ಹೀಗೆ ಇವನು. ಗಿಲ್ಲಿ ನಟನೇ ಹುಡುಗಿಯನ್ನು ನೋಡು ಎಂದು ಹೇಳೋವರೆಗೂ ನಾವು ನೋಡೋದಿಲ್ಲ” ಎಂದು ಕುಳ್ಳಯ್ಯ ಎಂದು ಹೇಳಿದ್ದಾರೆ.

“ಆರು ತಿಂಗಳ ಹಿಂದೆ ನಿನಗ್ಯಾಕೆ ಇಷ್ಟು ಬೇಗ ಮದುವೆ ಎಂದು ಹೇಳಿದೆ. ಈಗ ಅವನು ಒಪ್ಪಿದ್ರೆ ಮದುವೆ ಅಂತ ಉಲ್ಟಾ ಹೊಡಿತಿದ್ಯಾ? ನೀವು ಹುಡುಗಿ ನೋಡಿ, ಇಲ್ಲಿಂದ ಬಂದು 3-4 ಮದುವೆ ಆಗ್ತೀನಿ ಎಂದು ಗಿಲ್ಲಿ ನಟ ಅವರು ತಮಾಷೆ ಮಾಡಿದ್ದಾರೆ.

ಗಿಲ್ಲಿ ನಟ ಹಾಗೂ ಅವರ ತಾಯಿ ಬಾತ್‌ರೂಮ್‌ ಏರಿಯಾದಲ್ಲಿ ಮಾತನಾಡಿದ್ದಾರೆ. “ನಿಮ್ಮ ಅಪ್ಪ ತುಂಬ ಖುಷಿಪಡ್ತಿದ್ದಾರೆ. ಟಿವಿಯಲ್ಲಿ ಬೇರೆ ಏನಾದರೂ ಹಾಕಿದ್ರೆ ಸಾಕು, ಬರ್ತಾನೆ, ಹಾಕು, ಬೇರೆ ಏನೂ ಹಾಕಬೇಡ ಎಂದು ಹೇಳುತ್ತಾರೆ. ನಿಮ್ಮ ಅಪ್ಪನಿಗೆ ರಿಮೋಟ್‌ ಚೇಂಜ್‌ ಮಾಡೋಕೆ ಬರೋದಿಲ್ವಲ್ಲ, ಹಾಕು ಅಂತ ನನಗೆ ರಿಮೋಟ್‌ ಕೊಡ್ತಾನೆ” ಎಂದು ಸವಿತಾ ಅವರು ಮಗನಿಗೆ ಹೇಳಿದ್ದಾರೆ.

ಗಿಲ್ಲಿ ನಟ ಅವರ ಬಳಿ ಸವಿತಾ ಮಾತನಾಡಿದ್ದು, “ನೀನು ಮಾವ ಆದೆ, ಚಿಕ್ಕಪ್ಪ ಕೂಡ ಆದೆ. ಇನ್ನು ನೀನು ಮದುವೆ ಆಗಿ ಮಗು ಮಾಡಿಕೊಳ್ಳಬೇಕು, ಅದನ್ನು ನಾನು ನೋಡಬೇಕು” ಎಂದು ಹೇಳಿದ್ದಾರೆ. ಆಮೇಲೆ ಮಗನಿಗೆ ಎಣ್ಣೆ ಹಚ್ಚಿ, ಮಸಾಜ್‌ ಮಾಡಿ ಸ್ನಾನ ಮಾಡಿಸಿದ್ದಾರೆ. ಮನೆಯಲ್ಲಿದ್ದ ಹಾಗೆ ನೀನು ಇಲ್ಲಿದ್ಯಾ, ನೀಟ್‌ ಆಗಿ ಕೂದಲು ಬಾಚಿಕೋ ಎಂದು ಕೂಡ ಹೇಳಿದ್ದಾರೆ.

ಅನೇಕರು ಗಿಲ್ಲಿ ನಟ ಅವರೇ ವಿನ್ನರ್‌ ಎಂದು ಹೇಳಲಾಗುತ್ತಿದೆ. ಫಿನಾಲೆಗೆ 20 ದಿನಗಳು ಬಾಕಿ ಉಳಿದಿವೆ. ಗಿಲ್ಲಿ ನಟನ ಕಾಮಿಡಿ, ತಂತ್ರಗಳು ಎಲ್ಲವೂ ವೀಕ್ಷಕರಿಗೆ ಇಷ್ಟ ಆಗಿದೆ. ಹೀಗಾಗಿ ಯಾರು ವಿನ್ನರ್‌ ಆಗ್ತಾರೆ ಎಂದು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *