ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪತ್ನಿಯ ಸಾವಿನ ನಂತರ ಪತಿ ಸೂರಜ್ ಕೂಡ ನಾಗಪುರದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದು, ಅವರ ತಾಯಿ ಜಯಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ನವವಿವಾಹಿತೆ ಗಾನವಿ ಆತ್ಮ*ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಪತ್ನಿ ಸೂಸೈ*ಡ್ ಬೆನ್ನಲ್ಲೇ ಗಂಡ ಸೂರಜ್ ಸಹ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮಗನ ಜೊತೆಯಲ್ಲಿಯೇ ಆತ್ಮ*ಹತ್ಯೆಗೆ ಯತ್ನಿಸಿದ್ದ ಸೂರಜ್ ತಾಯಿ ಜಯಂತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಗಾನವಿ ನಿಧನದ ಬಳಿಕ ಅವಮಾನಿತರಾಗಿದ್ದ ಸೂರಜ್ ತಾಯಿ ಜಯಂತಿ ಮತ್ತು ಸೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದರು. ಇದೀಗ ನಾಗಪುರದಲ್ಲಿಯೇ ಸೂರಜ್ ಆತ್ಮ*ಹತ್ಯೆ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಪತ್ನಿ ಗಾನವಿ ಸಂಬಂಧಿ ಮತ್ತು ಪೋಷಕರಿಂದ ಅವಮಾನ ತಾಳಲಾರದೇ ಈ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆಗಳಿವೆ.

ಆತ್ಮ*ಹತ್ಯೆಗೆ ಯತ್ನಿಸಿದ್ದ ಗಾನವಿ ಅತ್ತೆ ಜಯಂತಿ ನಾಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗಾನವಿ ಮತ್ತು ಸೂರಜ್ ಮನಸ್ತಾಪಕ್ಕೆ ಕಾರಣ ಏನು? ಹನಿಮೂನ್ ಅರ್ಧಕ್ಕೆ ಮೊಟಕುಗೊಳಿಸಿ ಇಬ್ಬರು ಶ್ರೀಲಂಕಾದಿಂದ ಬಂದಿದ್ಯಾಕೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಕ್ಟೋಬರ್ 29 ರಂದು ಗಾನವಿ – ಸೂರಜ್ ಮದುವೆ ಆಗಿತ್ತು. ವಿವಾಹವಾದ ಒಂದು ತಿಂಗಳ ನಂತರ ಬೀಗರ ಒತ್ತಾಯಕ್ಕೆ ಮಣಿದು ಅರಮನೆ ಮೈದಾನದಲ್ಲಿ ಮದುವೆ ಆರತಾಕ್ಷತೆಯನ್ನು ಗಾನವಿ ಕುಟುಂಬದವರು ನಡೆಸಿದ್ದರು. ಶ್ರೀಲಂಕಾಕ್ಕೆ 10 ದಿನಗಳು ಹನಿಮೂನ್‌ಗೆ ಗಾನವಿ – ಸೂರಜ್ ಇಬ್ಬರನ್ನು ಕಳುಹಿಸಿದ್ದರು. ಹೀಗಿದ್ದರೂ ಹಣಕ್ಕಾಗಿ ಗಾನವಿಗೆ ಸೂರಜ್ ಹಾಗೂ ಆತನ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಟೊರೆಂಟೋ ವಿವಿ ಆವರಣದಲ್ಲಿ ಭಾರತೀಯ ಸಂಶೋಧನಾ ವಿದ್ಯಾರ್ಥಿಯ ಗುಂಡಿಕ್ಕಿ ಹ*ತ್ಯೆ

ಈ ಸಂಬಂಧ ಗಾನವಿ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಹಾಗೂ ಕುಟುಂಬದವರ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: online betting app tragedy: ಆನ್ಲೈನ್ ಬೆಟ್ಟಿಂಗ್‌ನಲ್ಲಿ ಒಂದು ಲಕ್ಷ ಕಳೆದುಕೊಂಡ ವಿದ್ಯಾರ್ಥಿ ಸಾವಿಗೆ ಶರಣು

Source link
ಗಾನವಿ ನಿಧನದ ಬಳಿಕ ಆತ್ಮ*ಹತ್ಯೆಗೆ ಶರಣಾದ ಗಂಡ ಸೂರಜ್; ಅತ್ತೆ ಜಯಂತಿ ಗಂಭೀರ