ನಟ ಧ್ರುವ ಸರ್ಜಾ ಅಭಿನಯದ ಚಿತ್ರ ‘ಕೆಡಿ’. ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ಇತ್ತೀಚೆಗೆ ಚಿತ್ರತಂಡ ಅಧಿಕೃತ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿತು.

ಜೋಗಿ ಪ್ರೇಮ್ ನಿರ್ದೇಶನದ, ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾ ಕೊನೆಗೂ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಏಪ್ರಿಲ್ 30ಕ್ಕೆ ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

ಇದೇ ಸಂದರ್ಭದಲ್ಲಿ ಚಿತ್ರತಂಡ ಅರ್ಜುನ್ ಜನ್ಯಾ ಸಂಗೀತ ನೀಡಿರುವ ‘ಅಣ್ತಮ್ಮ ಜೋಡೆತ್ತು ಕಣೋ’ ಎಂಬ ಹಾಡು ಬಿಡುಗಡೆ ಮಾಡಿದ್ದು, ಈ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಕೇಳಬಹುದು.

ಕನ್ನಡದಲ್ಲಿ ಈ ಹಾಡನ್ನು ನಿರ್ದೇಶಕ ಪ್ರೇಮ್ ಹಾಡಿದ್ದು, ಮಂಜು ಗೌಡ ಸಾಹಿತ್ಯ ರಚಿಸಿದ್ದಾರೆ. ಜೋಗಿ ಪ್ರೇಮ್ ಕಂಚಿನ ಕಂಠದಲ್ಲಿ ಬಂದಿರುವ ಹಾಡು ಸಹೋದರ ಭಾಂದವ್ಯವನ್ನು ಹೇಳಿದಂತಿದೆ.

ತಂದಾನಿ ತಾನೇ ಬಿಜಿಎಂನಿಂದ ಪ್ರಾರಂಭವಾದ ಹಾಡು ಧ್ರುವ ಹಾಗೂ ರವಿಚಂದ್ರನ್, ರಮೇಶ್, ಸಂಜಯ್ ದತ್, ಮಳೆಯಲ್ಲಿ ಡಾನ್ಸ್, ಸಿನಿಮಾದ ಕೆಲ ದೃಶ್ಯಗಳಿಂದ ಕೂಡಿದೆ. ಹಾಡಿನಲ್ಲಿ ಧ್ರುವ ಕಂಪ್ಲೀಟ್ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರದಲ್ಲಿ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ನಟಿಸಿದ್ದಾರೆ.

Source link
'ಕೆಡಿ' ರಿಲೀಸ್ ಡೇಟ್ ಫಿಕ್ಸ್: ಬಹುಭಾಷೆಯಲ್ಲಿ ಈ ದಿನದಂದು ಎಂಟ್ರಿ ಕೊಡಲಿದ್ದಾರೆ ಧ್ರುವ ಸರ್ಜಾ!