ರಣವೀರ್ ಸಿಂಗ್ ನಟನೆಯ ‘ಧುರಂಧರ’ (ಧುರಂಧರ) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಿದೆ. ಸಿನಿಮಾ ಬಿಡುಗಡೆ ಆದ ಕೇವಲ 21 ದಿವಸಗಳಲ್ಲಿ 1000 ಕೋಟಿ ಕಲೆಕ್ಷನ್ ದಾಟಿದೆ. ಗಮನಿಸಬೇಕಾದ ಅಂಶವೆಂದರೆ ‘ಧುರಂಧರ’ ಪ್ಯಾನ್ ಇಂಡಿಯಾ ಸಿನಿಮಾ ಸಹ ಅಲ್ಲ. ಹಿಂದಿ ಹೊರತಾಗಿ ಬೇರೆ ಯಾವ ಭಾಷೆಯಲ್ಲಿಯೂ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಸಹ ಗಳಿಕೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ದಾಟುತ್ತಾ ಸಾಗುತ್ತಿದೆ. ಸಿನಿಮಾದಲ್ಲಿ ನಟಿಸಿರುವ ನಟ-ನಟಿಯರು, ಕೆಲಸ ಮಾಡಿರುವ ತಂತ್ರಜ್ಞರಿಗೆ ಒಳ್ಳೆಯ ಗುರುತು, ಗೌರವ ಸಿಗುತ್ತಿದೆ. ಅಂದಹಾಗೆ ನಟಿ ತಮನ್ನಾ ಭಾಟಿಯಾ ಸಹ ‘ಧುರಂಧರ’ ಸಿನಿಮಾದಲ್ಲಿ ನಟಿಸಬೇಕಿತ್ತು, ಆದರೆ ನಿರ್ದೇಶಕ ಆದಿತ್ಯ ಧರ್ ಕಡ್ಡಾಯವಾಗಿ ತಮನ್ನಾ ಬೇಡವೇ ಬೇಡ ಎಂದುಬಿಟ್ಟರಂತೆ. ಕಾರಣ ಏನು?
‘ಧುರಂಧರ’ ಸಿನಿಮಾದಲ್ಲಿ ‘ಶರಾರತ್’ ಹೆಸರಿನ ಹಾಡಿದೆ. ಆ ಹಾಡಿಗೆ ವಿಜಯ್ ಗಂಗೂಲಿ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ‘ಶರಾರತ್’ ಹಾಡು ಕೇಳಿದ ಕೂಡಲೇ ಈ ಹಾಡಿಗೆ ತಮನ್ನಾ ಭಾಟಿಯಾ ಡ್ಯಾನ್ಸ್ ಮಾಡಿದರೆ ತುಂಬಾ ಚೆನ್ನಾಗಿ ಇರುತ್ತದೆ ಎಂದು ವಿಜಯ್ ಗಂಗೂಲಿ ಅವರಿಗೆ ಅನಿಸಿತಂತೆ. ಇದೆ ವಿಷಯವನ್ನು ನಿರ್ದೇಶಕ ಆದಿತ್ಯ ಧರ್ ಬಳಿ ವಿಜಯ್ ಹೇಳಿದ್ದಾರೆ. ಆದರೆ ಆದಿತ್ಯ ಅವರು ಕೂಡಲೇ ‘ತಮನ್ನಾ ಬೇಡ’ ಎಂದರಂತೆ.
ಆದಿತ್ಯ ಅವರು ತಮನ್ನಾ ಅವರನ್ನು ನಿರಾಕರಿಸಲು ಯಾವುದೇ ವೈಯಕ್ತಿಕ ಕಾರಣವಿಲ್ಲ. ಆದಿತ್ಯ ಅವರ ಅಭಿಪ್ರಾಯ, ತಮನ್ನಾ ಭಾಟಿಯಾ ಬಹಳ ಜನಪ್ರಿಯ ನಟಿ, ಅವರು ಸಿನಿಮಾದ ಹಾಡೊಂದರಲ್ಲಿ ನಟಿಸಿದರೆ ಆ ಹಾಡು ಹಿಟ್ ಆಗುತ್ತದೆ, ಆ ಹಾಡಿಗಾಗಿ ಜನ ಸಿನಿಮಾಕ್ಕೆ ಬರುವುದು ಸಹ ಇದೆ, ಆದರೆ ಹಾಗೆ ಆಗುವುದು ಆದಿತ್ಯಗೆ ಇಷ್ಟವಿರಲಿಲ್ಲ. ‘ಶರಾರತ್’ ಹಾಡು ಸಿನಿಮಾದಿಂದ ಪ್ರತ್ಯೇಕವಾಗಿದೆ ಅದೊಂದು ‘ಸೇರಿಸಿರುವ ಐಟಂ, ಹಾಡು’ ಎನಿಸಬಾರದು ಎಂಬುದು ಅವರ ಆಲೋಚನೆ ಆಗಿತ್ತಂತೆ.
ಇದನ್ನೂ ಓದಿ:’ಧುರಂಧರ’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
ತಮನ್ನಾ ಹಾಡಿನಲ್ಲಿ ನಟಿಸಿದರೆ ಜನ ಕತೆಗಿಂತ ಹಾಡಿಗೆ ಪ್ರತ್ಯೇಕ ಪ್ರಾಮುಖ್ಯತೆ ಇದೆ. ಹಾಡಿನ ಸುತ್ತ ನಡೆಯುತ್ತಿರುವ ಕತೆಗೇ ಜನ ಮಹತ್ವ, ಹಾಡು ಕತೆಯಿಂದ ಪ್ರತ್ಯೇಕವಾಗಬಾರದು ಎಂಬ ಕಾರಣಕ್ಕೆ ತಮನ್ನಾರನ್ನು ಹಾಕಿಕೊಳ್ಳಲಿಲ್ಲವಂತೆ, ಬದಲಾಗಿ ‘ಶರಾರತ್’ ಹಾಡಿನಲ್ಲಿ ಇಬ್ಬರು ನಟಿಯರನ್ನು ಹಾಕಿದ್ದಾರೆ. ಅದು ಸಹ ಆದಿತ್ಯ ಅವರದ್ದೇ ಐಡಿಯಾ ಅಂತೆ, ಇಬ್ಬರು ನಟಿಯರು ಇದ್ದರೆ ಒಬ್ಬರ ಮೇಲೆ ಕಣ್ಣಿಗೆ ಬೀಳುವುದಿಲ್ಲ ಎಂಬುದು ಅವರ ಆಲೋಚನೆ ಆಗಿತ್ತಂತೆ.
‘ಧುರಂಧರ’ ಸಿನಿಮಾದಲ್ಲಿ ರಣ್ವೀರ್ ಸಿಂಗ್, ಗೂಢಚಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಅರ್ಜುನ್ ರಾಮ್ ಪಾಲ್, ಸಂಜಯ್ ದತ್, ಮಾಧವನ್ ಅವರು ನಟಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಸಾರಾ ಅರ್ಜುನ್ ನಟಿಸಿದ್ದಾರೆ. ಸಿನಿಮಾದ ಸೀಕ್ವೆಲ್ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.