ಭಾರತ ವಿರೋಧಿ ಬಾಂಗ್ಲಾದೇಶದಲ್ಲೀಗ ಕಾಂಡೋಮ್‌ ಬರಗಾಲ, ಕೇವಲ 38 ದಿನಗಳಲ್ಲಿ ಖಾಲಿಯಾಗಲಿದೆ ಸ್ಟಾಕ್‌ | Bangladesh Condom Shortage Contraceptives Crisis Fertility Rate Rise San

ಭಾರತ ವಿರೋಧಿ ಬಾಂಗ್ಲಾದೇಶದಲ್ಲೀಗ ಕಾಂಡೋಮ್‌ ಬರಗಾಲ, ಕೇವಲ 38 ದಿನಗಳಲ್ಲಿ ಖಾಲಿಯಾಗಲಿದೆ ಸ್ಟಾಕ್‌ | Bangladesh Condom Shortage Contraceptives Crisis Fertility Rate Rise San



ಭಾರತ ವಿರೋಧಿ ಬಾಂಗ್ಲಾದೇಶದಲ್ಲೀಗ ಕಾಂಡೋಮ್‌ ಬರಗಾಲ, ಕೇವಲ 38 ದಿನಗಳಲ್ಲಿ ಖಾಲಿಯಾಗಲಿದೆ ಸ್ಟಾಕ್‌ | Bangladesh Condom Shortage Contraceptives Crisis Fertility Rate Rise San

Bangladesh Contraceptives Shortage: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಪ್ರತಿಭಟನೆಗಳಿಂದಾಗಿ ಪ್ರಸ್ತುತ ವಿಶ್ವಾದ್ಯಂತ ಸುದ್ದಿಯಲ್ಲಿದೆ. ಅಲ್ಲಿ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ. ಇದರ ನಡುವೆ ದೇಶದಲ್ಲಿ ಕಾಂಡೋಮ್‌ ಬಿಕ್ಕಟ್ಟು ಶುರುವಾಗಿದೆ. 

ಢಾಕಾ (ಡಿ.27): ಬಾಂಗ್ಲಾದೇಶ ಪ್ರಸ್ತುತ ಹಲವು ರೀತಿಯಲ್ಲಿ ತೊಂದರೆಗಳನ್ನು ಎದುರಿಸುತ್ತಿದೆ. ವಿದ್ಯಾರ್ಥಿ ನಾಯಕ ಷರೀಫ್ ಉಸ್ಲಾಮ್ ಹಾದಿ ಹತ್ಯೆಯ ನಂತರ, ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತು. ರಾಜಕೀಯ ಅಶಾಂತಿ ಕಂಡುಬಂದಿದೆ. ಈಗ ಮತ್ತೊಂದು ಗಂಭೀರ ಬಿಕ್ಕಟ್ಟು ಉದ್ಭವಿಸಿದೆ. ಇತ್ತೀಚಿನ ವರದಿಯ ಪ್ರಕಾರ, ಮುಂದಿನ ವರ್ಷದ ಆರಂಭದಲ್ಲಿ ಕನಿಷ್ಠ ಒಂದು ತಿಂಗಳ ಕಾಲ ಬಾಂಗ್ಲಾದೇಶದಲ್ಲಿ ಕಾಂಡೋಮ್‌ಗಳ ಪೂರೈಕೆಯಲ್ಲಿ ಅಡಚಣೆ ಉಂಟಾಗಬಹುದು. ಬಾಂಗ್ಲಾದೇಶದಲ್ಲಿ ಜನನ ಪ್ರಮಾಣ ಹೆಚ್ಚುತ್ತಿರುವ ಸೂಚನೆಗಳಿರುವ ಸಮಯದಲ್ಲಿ ಈ ಪರಿಸ್ಥಿತಿ ಬಂದಿದೆ. ಸ್ಥಳೀಯ ಪತ್ರಿಕೆ ದಿ ಡೈಲಿ ಸ್ಟಾರ್ ವರದಿಯ ಪ್ರಕಾರ, ಹಣ ಮತ್ತು ಸಿಬ್ಬಂದಿ ಕೊರತೆಯಿಂದಾಗಿ, ಬಾಂಗ್ಲಾದೇಶವು ಪ್ರಸ್ತುತ 38 ದಿನಗಳ ಕಾಂಡೋಮ್‌ಗಳನ್ನು ಮಾತ್ರ ಸ್ಟಾಕ್‌ನಲ್ಲಿ ಹೊಂದಿದೆ. 38 ದಿನಗಳ ಈ ಸ್ಟಾಕ್‌ ಖಾಲಿಯಾದ ಬಳಿಕ ಕನಿಷ್ಠ ಒಂದು ತಿಂಗಳಾದರೂ ಕಾಂಡೋಮ್‌ಗಳು ಲಭ್ಯವಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಂಗ್ಲಾದೇಶವು 50 ವರ್ಷಗಳಲ್ಲಿ ಮೊದಲ ಬಾರಿಗೆ ಒಟ್ಟು ಫಲವತ್ತತೆ ದರದಲ್ಲಿ (TFR) ಹೆಚ್ಚಳ ದಾಖಲಿಸಿರುವ ಸಮಯದಲ್ಲಿ ಕಾಂಡೋಮ್ ಬಿಕ್ಕಟ್ಟು ಬಂದಿದೆ. ಮಲ್ಟಿಪಲ್ ಇಂಡಿಕೇಟರ್ ಕ್ಲಸ್ಟರ್ ಸಮೀಕ್ಷೆ 2025 ರ ಪ್ರಕಾರ, ದೇಶದ TFR 2.4 ಕ್ಕೆ ಏರಿದೆ, ಕಳೆದ ವರ್ಷ 2.3 ರಷ್ಟಿತ್ತು. ಇತ್ತೀಚಿನ ವರ್ಷಗಳಲ್ಲಿ, ಅನೇಕ ದಂಪತಿಗಳು ಕುಟುಂಬ ಯೋಜನೆಯಿಂದ ದೂರ ಸರಿಯುತ್ತಿದ್ದಾರೆ. ಎರಡಕ್ಕಿಂತ ಹೆಚ್ಚು ಜನಿಸುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಗರ್ಭನಿರೋಧಕಗಳ ಕೊರತೆಯಿಂದಾಗಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು.

ಆರು ವರ್ಷಗಳಲ್ಲಿ ಕಾಂಡೋಮ್ ಪೂರೈಕೆಯಲ್ಲಿ ಶೇಕಡಾವಾರು ಕುಸಿತ ಎಷ್ಟು?

ಕುಟುಂಬ ಯೋಜನಾ ನಿರ್ದೇಶನಾಲಯ (DGFP) ದೇಶದಲ್ಲಿ ಕುಟುಂಬ ಯೋಜನಾ ಕಾರ್ಯಕ್ರಮದಡಿಯಲ್ಲಿ ಜನರಿಗೆ ಉಚಿತ ಗರ್ಭನಿರೋಧಕಗಳನ್ನು ಒದಗಿಸುತ್ತದೆ. ಇದರಲ್ಲಿ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು, IUDಗಳು, ಇಂಜೆಕ್ಷನ್‌ಗಳು ಮತ್ತು ಇಂಪ್ಲಾಂಟ್‌ಗಳು ಸೇರಿವೆ. ಆದರೆ ಈಗ ಈ ವ್ಯವಸ್ಥೆಯು ಗಂಭೀರ ಬಿಕ್ಕಟ್ಟಿನಲ್ಲಿದೆ.

ರಾಷ್ಟ್ರೀಯ ಗರ್ಭನಿರೋಧಕ ಸಾರಾಂಶ ವರದಿಯ ಪ್ರಕಾರ, ಕಳೆದ ಆರು ವರ್ಷಗಳಲ್ಲಿ ಕಾಂಡೋಮ್‌ಗಳ ಪೂರೈಕೆ ಶೇಕಡಾ 57 ರಷ್ಟು ಕಡಿಮೆಯಾಗಿದೆ. ಕಾಂಡೋಮ್‌ಗಳು ಮಾತ್ರವಲ್ಲದೆ, ಇತರ ಗರ್ಭನಿರೋಧಕಗಳ ಲಭ್ಯತೆಯೂ ಕಡಿಮೆಯಾಗುತ್ತಿದೆ. ಅಂಕಿಅಂಶಗಳ ಪ್ರಕಾರ, ಗರ್ಭನಿರೋಧಕ ಮಾತ್ರೆಗಳ ಪೂರೈಕೆ ಶೇಕಡಾ 63 ರಷ್ಟು ಕಡಿಮೆಯಾಗಿದೆ. IUDಗಳ ಲಭ್ಯತೆ ಶೇಕಡಾ 64 ರಷ್ಟು ಕಡಿಮೆಯಾಗಿದೆ. ಇಂಜೆಕ್ಷನ್‌ಗಳು ಶೇಕಡಾ 41 ರಷ್ಟು ಕಡಿಮೆಯಾಗಿದೆ. ಇಂಪ್ಲಾಂಟ್‌ಗಳ ಪೂರೈಕೆ ಶೇಕಡಾ 37 ರಷ್ಟು ಕಡಿಮೆಯಾಗಿದೆ.

ಅಧಿಕಾರಿ ಹೇಳೋದೇನು?

“ಖರೀದಿಗೆ ಸಂಬಂಧಿಸಿದ ಕಾನೂನು ವಿವಾದ ಬಗೆಹರಿದರೆ, ಕೆಲವು ಗರ್ಭನಿರೋಧಕಗಳ ಪೂರೈಕೆ ಶೀಘ್ರದಲ್ಲೇ ಪ್ರಾರಂಭವಾಗಬಹುದು” ಎಂದು ಡಿಜಿಎಫ್‌ಪಿಯ ಲಾಜಿಸ್ಟಿಕ್ಸ್ ಮತ್ತು ಸರಬರಾಜು ಘಟಕದ ನಿರ್ದೇಶಕ ಅಬ್ದುರ್ ರಝಾಕ್ ಹೇಳಿದರು.ಇಲ್ಲದೇ ಇದ್ದಲ್ಲಿ ಕಾಂಡೋಮ್‌ಗಳ ಕೊರತೆ ಉಂಟಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು. ಕನಿಷ್ಠ ಒಂದು ತಿಂಗಳಾದರೂ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಕ್ಷೇತ್ರ ಮಟ್ಟದ ಸಿಬ್ಬಂದಿ ಕೊರತೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಕಾನೂನು ಸಮಸ್ಯೆಗಳಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಸಿಬ್ಬಂದಿ ಗರ್ಭನಿರೋಧಕಗಳನ್ನು ವಿತರಿಸಲು ಮನೆ ಮನೆಗೆ ಹೋಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.



Source link

Leave a Reply

Your email address will not be published. Required fields are marked *