ಆರೆಸ್ಸೆಸ್ ಬಗ್ಗೆ ದಿಗ್ವಿಜಯ ಸಿಂಗ್ ಅವರ ಪೋಸ್ಟ್
ಜುಲೈ, ಡಿಸೆಂಬರ್ 27: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಾಲಿ ರಾಜ್ಯಸಭಾ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ದಿಗ್ವಿಜಯ ಸಿಂಗ್ (ದಿಗ್ವಿಜಯ ಸಿಂಗ್) ಬಹಳ ಅಪರೂಪಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ ಅವರು ಹೊಗಳುವ ಕೆಲಸ ಮಾಡಿದ್ದಾರೆ. ಹೆಚ್ಚಿನವರು ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹೀಗಳೆಯುವ ದಿಗ್ವಿಜಯ ಸಿಂಗ್, ಈಗ ವರಸೆ ಬದಲಿಸಿದ್ದು ಬಿಜೆಪಿಗೆ ಅಚ್ಚರಿಯ ಶಾಕ್ ಕೊಟ್ಟಿದೆ. ಸ್ವಲ್ಪವೂ ತಡ ಮಾಡದ ಬಿಜೆಪಿ ಈಗ ದಿಗ್ವಿಜಯರ ಅಸ್ತ್ರ ಬಳಸಿ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯನ್ನು ಕಿಚಾಯಿಸುವ ಕೆಲಸ ಮಾಡಿದೆ.
ದಿಗ್ವಿಜಯ ಸಿಂಗ್ ಹೇಳಿದ್ದೇನು?
ನರೇಂದ್ರ ಮೋದಿ ಅವರು ಗುಜರಾತ್ ಸಿಎಂ ಆಗುವುದಕ್ಕೂ ಮುನ್ನ ಸಾರ್ವಜನಿಕ ಸಮಾವೇಶದಲ್ಲಿ ಎಲ್ ಕೆ ಆಡ್ವಾಣಿ ಹಿರಿಯ ಮುಖಂಡರ ಮುಂದೆ ನೆಲದ ಮೇಲೆ ಕುಳಿತುಕೊಂಡಿರುವ ಒಂದು ಬ್ಲಾಕ್ ಆಂಡ್ ವೈಟ್ ಚಿತ್ರವನ್ನು ದಿಗ್ವಿಜಯ ಸಿಂಗ್ ಅವರು ಹಂಚಿಕೊಂಡಿದ್ದಾರೆ. ಅವರು ಪೋಸ್ಟ್‌ನಲ್ಲಿ ಬರೆದಿರುವ ವಿಚಾರ ಈಗ ವೈರಲ್ ಆಗಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಸಂಘಟನೆಗಳಲ್ಲಿ ತಳಮಟ್ಟದಲ್ಲಿರುವ ಕಾರ್ಯಕರ್ತರು ಹೇಗೆ ಬೆಳೆಯುತ್ತಾ ಹೋಗುತ್ತಾರೆ ಮುಖ್ಯಮಂತ್ರಿ, ಮತ್ತು ಪ್ರಧಾನಿ ಮಂತ್ರಿಯೂ ಆಗಬಹುದು ಈ ಚಿತ್ರ. ಈ ಸಂಘಟನೆಯ ಶಕ್ತಿ ಎಂದು ದಿಗ್ವಿಜಯ ಸಿಂಗ್ ಅವರ ಫೋಟೋಗೆ ವಿವರಣೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ
ಕೋರಾ ಪ್ಲಾಟ್‌ಫಾರ್ಮ್‌ನಲ್ಲಿ ಅವರಿಗೆ ಸಿಕ್ಕ ಆ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ, ತಮ್ಮ ಅನಿಸಿಕೆ ಬರೆಯಲು ಕಾರಣವೂ ಇದೆ. ಕಾಂಗ್ರೆಸ್ ಪಕ್ಷವು ತೀರಾ ಕೇಂದ್ರೀಕೃತವಾಗಿದೆ. ತಳಮಟ್ಟದಲ್ಲಿ ಬಲವರ್ಧನೆ ಆಗಬೇಕು ಎಂದು ದಿಗ್ವಿಜಯ ಸಿಂಗ್ ಪದೇ ಪದೇ ಹೇಳುತ್ತಾ ಬರುತ್ತಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಅವರು ಈ ಸಲಹೆ ನೀಡಿದ್ದರು. ತಮ್ಮ ಅನಿಸಿಕೆಗೆ ಪೂರಕವಾಗಿ ಅವರು ನರೇಂದ್ರ ಮೋದಿ ಅವರ ಹಳೆಯ ಫೋಟೋ ಹಂಚಿಕೊಂಡಿದ್ದಿರಬಹುದು.
ಬಿಜೆಪಿಗರ ಮಿಂಚಿನ ಪ್ರತಿಕ್ರಿಯೆ…
ದಿಗ್ವಿಜಯ ಸಿಂಗ್ ಅವರ ಈ ಮೋದಿ ಅಡ್ವಾಣಿ ಪೋಸ್ಟ್ ಅನ್ನು ಇಟ್ಟುಕೊಂಡು ಬಿಜೆಪಿಗರು ಕಾಂಗ್ರೆಸ್ಸನ್ನು ಕಿಚಾಯಿಸುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಬಗ್ಗೆ ದಿಗ್ವಿಜಯ್ ಸಿಂಗ್ ಅವರ ಪೋಸ್ಟ್ ಕನ್ನಡಿ ಹಿಡಿದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತ 2025: ಹೊಸ ಭದ್ರತಾ ನೀತಿ, ಆಪರೇಷನ್ ಸಿಂದೂರ್ ಶಕ್ತಿ ಮತ್ತು ಭಯೋತ್ಪಾದನೆಗೆ ಖಡಕ್ ಉತ್ತರ
‘ದಿಗ್ವಿಜಯ್ ಸಿಂಗ್ ಅವರು ಬಹಿರಂಗವಾಗಿ ರಾಹುಲ್ ಗಾಂಧಿ ಎದುರು ಭಿನ್ನಮತ ತೋರಿದ್ದಾರೆ. ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಸಂಘಟನೆ ಕುಸಿದಿದೆ. ಈಗ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ತೋರುತ್ತಿದೆ’ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಹೇಳಿದ್ದಾರೆ.
ಇದೇ ವೇಳೆ, ತಮ್ಮ ಪೋಸ್ಟ್ ಅನ್ನು ಬಿಜೆಪಿಗರು ಬಳಸುತ್ತಿರುವಂತೆಯೇ ದಿಗ್ವಿಜಯ ಸಿಂಗ್ ಸ್ಪಷ್ಟೀಕರಣ ಕೂಡ ಕೊಟ್ಟಿದ್ದಾರೆ. ತಾನು ಸಂಘಟನೆಯನ್ನು ಮಾತ್ರವೇ ಹೊಗಳಿರುವುದು. ಆರೆಸ್ಸೆಸ್ ಮತ್ತು ಪ್ರಧಾನಿ ಮೋದಿಯನ್ನು ಯಾವಾಗಲೂ ವಿರೋಧಿಸಿದ್ದಾರೆ. ಆರೆಸ್ಸೆ ಮತ್ತು ಮೋದಿ ಅವರ ನೀತಿಗಳಿಗೆ ನನ್ನದು ವಿರೋಧ ಇದ್ದೇ ಇರುತ್ತದೆ ಎಂದೂ ಹಿರಿಯ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ