Sapthami Gowda: ‘ಯಾಕೋ ಯಾಕೋ’ ಸೀರೆಯಲ್ಲಿ ಸಿಕ್ಕಾಪಟ್ಟೆ ಮಿಂಚ್ತಿದ್ದಾರೆ ಸಪ್ತಮಿ ಗೌಡ

Sapthami Gowda: ‘ಯಾಕೋ ಯಾಕೋ’ ಸೀರೆಯಲ್ಲಿ ಸಿಕ್ಕಾಪಟ್ಟೆ ಮಿಂಚ್ತಿದ್ದಾರೆ ಸಪ್ತಮಿ ಗೌಡ

Sapthami Gowda: ‘ಯಾಕೋ ಯಾಕೋ’ ಸೀರೆಯಲ್ಲಿ ಸಿಕ್ಕಾಪಟ್ಟೆ ಮಿಂಚ್ತಿದ್ದಾರೆ ಸಪ್ತಮಿ ಗೌಡ

Sapthami Gowda: ಕಾಂತಾರ ಚೆಲುವೆ ಸಪ್ತಮಿ ಗೌಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಇದೀಗ ಮೂಗುತ್ತಿ ಸುಂದ್ರಿ ಸೀರೆಯುಟ್ಟ ಫೋಟೋ ಹಂಚಿಕೊಂಡಿದ್ದು, ಫ್ಯಾನ್ಸ್ ಎದೆಬಡಿತವನ್ನು ಹೆಚ್ಚಿಸಿದ್ದಾರೆ.

ಕಾಂತಾರದ ಮೂಲಕ ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಪಡೆದ ಬೆಡಗಿ ಸಪ್ತಮಿ ಗೌಡ. ನಟಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಹೊಸ ಹೊಸ ಫೋಟೋ ಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ವರ್ಷ ಕೊನೆಯಾಗುತ್ತಿದ್ದಂತೆ ಮತ್ತೊಂದು ಫೋಟೊ ಶೂಟ್ ಮೂಲಕ ಮಿಂಚುತ್ತಿದ್ದಾರೆ.

ಇದೀಗ ಸಪ್ತಮಿ ಗೌಡ ಐವರಿ ಬಣ್ಣದ ಸೀರೆ ಹಾಗೂ ಡೀಪ್ ನೆಕ್, ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ನಟಿಯ ಮುದ್ದಾದ ಲುಕ್ ಗೆ ಜನ ಮನಸೋತಿದ್ದಾರೆ. ಆ ಮುದ್ದಾದ ನಗು, ಕೊಲ್ಲುವಂತಹ ಕಣ್ಣುಗಳು, ಆ ಸ್ಟೈಲಿಶ್ ಲುಕ್ ನೋಡಿದ್ರೆ ದೇವತೆಯಂತೆ ಕಾಣಿಸುತ್ತಿದ್ದಾರೆ ನಟಿ.

ನಟಿ ಸಪ್ತಮಿ ಗೌಡ ಇದೀಗ ‘ದಿ ರೈಸ್ ಆಫ್ ಅಶೋಕ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸತೀಶ್ ನೀನಾಸಂ ನಾಯಕನಾಗಿ ನಟಿಸುತ್ತಿದ್ದು, ಈ ಸಿನಿಮಾ ಮುಂದಿನ ವರ್ಷ ಜನವರಿ ಅಥವಾ ಫೆಬ್ರುವರಿ ತಿಂಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾಗಾಗಿ ಜನ ಭಾರಿ ಕುತೂಹಲದಿಂದ ಕಾಯುತ್ತಿದ್ದಾರೆ.

ಸಪ್ತಮಿ ಗೌಡ ಇದೀಗ ತಮ್ಮ ಹೊಸ ಫೋಟೊ ಶೂಟಲ್ಲಿ ತಮ್ಮ ‘ದಿ ರೈಸ್ ಆಫ್ ಅಶೋಕ’ ಸಿನಿಮಾದ ಯಾಕೋ ಯಾಕೋ ಎನ್ನುವ ರೊಮ್ಯಾಂಟಿಕ್ ಹಾಡನ್ನು ಹಿನ್ನೆಲೆಯಲ್ಲಿ ಹಾಕಿದ್ದು, ಕ್ಯಾಪ್ಶನ್ ಕೂಡ ‘ಯಾಕೋ ಯಾಕೋ’ ಎಂದು ಶೇರ್ ಮಾಡಿದ್ದಾರೆ.

‘ದ ರೈಸ್ ಆಫ್ ಅಶೋಕ’ ಸಿನಿಮಾ ನಾಲ್ಕು ಭಾಷೆಗಳಲ್ಲಿ ರಿಲೀಸ್ ಆಗಲಿದ್ದು, ಸಿನಿಮಾದಲ್ಲಿ ಸಪ್ತಮಿ ಗೌಡ ಗ್ರಾಮೀಣ ಹುಡುಗಿ ಅಂಬಿಕಾ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ವಿನೋದ್ ವಿ ದೋಂಡಲೇ ನಿರ್ದೇಶನ ಮಾಡಲಿದ್ದಾರೆ.

ಅಂತಾರಾಷ್ಟ್ರೀಯ ಈಜುಪಟುವಾಗಿರುವ ಸಪ್ತಮಿ ಗೌಡ, ನಟಿಸಿದ್ದು, ಕೇವಲ 4 ಸಿನಿಮಾಗಳಲ್ಲಿ. ಕಾಂತಾರ, ವ್ಯಾಕ್ಸಿನ್ ವಾರ್, ತಮ್ಮುಡು, ಯುವ ಸಿನಿಮಾಗಳಲ್ಲಿ ಸಪ್ತಮಿ ಗೌಡ ನಟಿಸಿದ್ದರು. ಇದೀಗ ರೈಸ್ ಆಫ್ ಅಶೋಕದ ಮೂಲಕ ಮತ್ತೆ ಸದ್ದು ಮಾಡ್ತಿದ್ದಾರೆ ಸಪ್ತಮಿ. ಇನ್ನು ಡಾಲಿ ಧನಂಜಯ್ ನಟಿಸಲಿರುವ ‘ಹಲಗಲಿ’ ಸಿನಿಮಾದಲ್ಲೂ ಸಹ ಸಪ್ತಮಿ ನಟಿಸುತ್ತಿದ್ದಾರೆ.

ಯುವ ಸಿನಿಮಾ ಮೂಲಕ ಯುವಕರ ಹೃದಯ ಗೆದ್ದ ಬೆಡಗಿ ಸಪ್ತಮಿ ಗೌಡ, ಯುವ ರಾಜ್ ಕುಮಾರ್ ಜೊತೆಗೆ ಕಾಂಟ್ರಾವರ್ಸಿಗೂ ಒಳಗಾಗಿದ್ದರು. ತಿಂಗಳುಗಳ ಕಾಲ ಈ ಕುರಿತು ಸುದ್ದಿ ಭಾರಿ ಸದ್ದು ಮಾಡಿತ್ತು. ಸದ್ಯ ಆ ವಿಚಾರ ಹಿನ್ನೆಲೆಗೆ ಸರಿದಿದೆ. ನಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Source link

Leave a Reply

Your email address will not be published. Required fields are marked *