ಚಿಕ್ಕಬಳ್ಳಾಪುರ, (ಡಿಸೆಂಬರ್ 27): ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ (ಆತ್ಮಹತ್ಯೆ) ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (ಚಿಕ್ಕಬಳ್ಳಾಪುರ) ಜಿಲ್ಲೆ ಗುಡಿಬಂಡೆ ಪಟ್ಟಣದ ಬಾಪೂಜಿ ನಡೆದಿದೆ. ಬಾಲಾಜಿ ಸಿಂಗ್ (30) ಮೃತ ದುರ್ದೈವಿ. ಬಾಲಾಜಿ ಸಿಂಗ್ ಗೆ ಮದುವೆಯಾಗಿ 8 ವರ್ಷ ಆಗಿದ್ದು, ಆರು ವರ್ಷದ ಮಗಳು ಇದ್ದಾಳೆ. ಆರ್ಥಿಕವಾಗಿ ಚನ್ನಾಗಿದ್ದ ಬಾಲಾಜಿ ಸಿಂಗ್, ತನ್ನ ಕಾರುಗಳನ್ನು ಬಾಡಿಗೆಗೆ ಬಿಟ್ಟು ಬರುವ ಹಣದಲ್ಲಿ ಪತ್ನಿ ಮಕ್ಕಳ ಜೊತೆ ಚನ್ನಾಗಿದ್ದಾಳೆ, ಆದರೆ ಇದೀಗ ಮಹಿಳೆಯ ಸಹವಾಸ ಮಾಡಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಅನೈತಿಕ ಸಂಬಂಧವೇ ಪ್ರಾಣ ಬಲಿ ಪಡೆಯಿತಾ?
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿ ಇಂದು (ಡಿಸೆಂಬರ್ 27) ಬೆಳ್ಳಂಬೆಳಗ್ಗೆ ಬಾಲಾಜಿ ಸಿಂಗ್ ಎಂಬ ವ್ಯಕ್ತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಬಾಲಾಜಿಗೆ ಮದುವೆಯಾಗಿ, ಮಗು ಸಹ ಇದೆ. ಹೀಗಿದ್ದೂ ಶಿಡ್ಲಘಟ್ಟ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂಧವಿತ್ತು. ಈ ವಿಷಯ ಬಾಲಾಜಿ ಸಿಂಗ್ ಪತ್ನಿಗೆ ಗೊತ್ತಾಗಿ ಗಲಾಟೆಗಳು ಆಗಿವೆ. ಇದರಿಂದ ಬಾಲಾಜಿ ಮಹಿಳೆಯಿಂದ ದೂರವಾಗಿ ಪತ್ನಿ ಮಕ್ಕಳ ಜತೆ ಅರಾಮ್ ಇರಲು ಮುಂದಾಗಿದ್ದ. ಆದರೆ, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಮಾತ್ರ ಬಾಲಾಜಿಯನ್ನು ಬಿಡಲು ತಯಾರಿಲ್ಲ.ಬಾಲಾಜಿ ಸಿಂಗ್ ಗನ ಹನಿಟ್ರಾಪ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದಳು. ಇದೆ ವಿಚಾರಕ್ಕೆ ಬಾಲಾಕಿ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ.
ಇದನ್ನೂ ಓದಿ: 40 ವರ್ಷದ ಅಂಕಲ್, 19ರ ಯುವತಿಯ ಪ್ರೀತಿ ಪ್ರೇಮ: ಪ್ರೇಮಲೋಕದಲ್ಲಿ ತೇಲಾಡುವಾಗಲೇ ಘನಘೋರ!
ಬಾಲಾಜಿ ಸಾವಿನ ಸುತ್ತ ಅನುಮಾನದ ಹುತ್ತ
ಬಾಲಾಜಿ ಸಿಂಗ್ ಜೊತೆ ಕೆಲವು ವರ್ಷಗಳಿಂದ ಆಕೆ ಪ್ರೀತಿ ಪ್ರೇಮ ಅಂತ ಇಬ್ಬರು ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ವಿಷಯ ಬಾಲಾಜಿ ಸಿಂಗ್ ಪತ್ನಿ, ತಾಯಿಗೆ ಗೊತ್ತಾಗಿದೆ. ಬಳಿಕ ಬಾಲಾಜಿ ಸಿಂಗ್‌ಗೆ ಬೈದು ಬುದ್ಧಿವಾದ ಹೇಳಿದ್ದಾರೆ. ಪತ್ನಿ ಮಕ್ಕಳು ಬೇಕಾ? ಇಲ್ಲಾ ಇಟ್ಟುಕೊಂಡವಳು ಬೇಕಾ? ಎಂದು ಪತ್ನಿ ಗಲಾಟೆ ಮಾಡಿದ್ದಳು. ಇದರಿಂದ ಬಾಲಾಜಿ ಸಿಂಗ್ ಪತ್ನಿ ಮಕ್ಕಳ ಜೊತೆ ಇರುತ್ತೇನೆಂದು ಹೇಳಿದ್ದ. ಆದರೆ, ಕಡೆ ಪ್ರಿಯತಮೆ ಮಾತ್ರ ಬಾಲಾಜಿಯನ್ನು ಬಿಡಲು ಸಿದ್ಧಳಿಲ್ಲ. ಪದೇ ಪದೇ ಫೋನ್ ಮಾಡಿ ಕಿರುಕುಳ, ಬ್ಲ್ಯಾಕ್ ಮೇಲ್ ಮಾಡುವುದನ್ನು ಶುರುಮಾಡಿದ್ದಳು. ಇದರಿಂದ ಬೇಸತ್ತು ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಆದರೆ, ಸ್ವಲ್ಪ ಹೊತ್ತಿನ ಬಳಿಕ ಬಾಲಾಜಿ ಸಿಂಗ್ ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ ಎಂದು ಉಲ್ಟಾ ಹೇಳಿಕೆ ನೀಡಿದೆ. ಇದರಿಂದ ಬಾಲಾಜಿ ಸಾವಿನ ಸುತ್ತ ಹಲವು ಅನುಮಾನಗಳನ್ನು ತೋರಿಸಿದ್ದು, ಈ ಸಂಬಂಧ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ