BBK 12: ಶನಿವಾರ ಸೂರಜ್, ಇಂದು ಮತ್ತೊಬ್ಬರು ಔಟ್; ಒಬ್ಬರಿಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್?

BBK 12: ಶನಿವಾರ ಸೂರಜ್, ಇಂದು ಮತ್ತೊಬ್ಬರು ಔಟ್; ಒಬ್ಬರಿಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್?

BBK 12: ಶನಿವಾರ ಸೂರಜ್, ಇಂದು ಮತ್ತೊಬ್ಬರು ಔಟ್; ಒಬ್ಬರಿಗೆ ಗ್ರ್ಯಾಂಡ್ ಫಿನಾಲೆ ಟಿಕೆಟ್?
ಈ ವಾರ ಬಿಗ್‌ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಶನಿವಾರ ಸೂರಜ್ ಔಟ್ ಆಗಿದ್ದಾರೆ. ಭಾನುವಾರ ಸ್ಪಂದನಾ ಸೋಮಣ್ಣ ಹೊರಹೋಗುವ ಸಾಧ್ಯತೆಯಿದ್ದು, ಇದೇ ವೇಳೆ ಓರ್ವ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಶನಿವಾರದ ಸಂಚಿಕೆಯಲ್ಲಿ ಮನೆಯ ಹ್ಯಾಂಡ್‌ಸಮ್ ಸ್ಪರ್ಧಿ ಸೂರಜ್ ಎಲಿಮಿನೇಟ್ ಆಗಿದ್ದಾರೆ. ಮೊದಲೇ ಸೂಚಿಸಿದಂತೆ ಈ ವಾರ ಡಬಲ್ ಎಲಿಮಿನೇಷನ್ ಇರಲಿದೆ. ಆದ್ದರಿಂದ ಭಾನುವಾರದ ಸಂಚಿಕೆಯಲ್ಲಿ ಒಬ್ಬರು ಬಿಗ್‌ಬಾಸ್ ಆಟಕ್ಕೆ ವಿದಾಯ ಹೇಳಲಿದ್ದಾರೆ.

ಸೋಶಿಯಲ್ ಮೀಡಿಯಾ ಪ್ರಕಾರ ಇವತ್ತು ಸ್ಪಂದನಾ ಸೋಮಣ್ಣ ಎಲಿಮಿನೇಟ್ ಆಗಲಿದ್ದಾರಂತೆ. ಈ ಎಲ್ಲಾ ಬೆಳವಣಿಗೆ ನಡುವೆ ಇದೇ ಸಂಚಿಕೆಯಲ್ಲಿ ಸ್ಪರ್ಧಿಯೊಬ್ಬರು ನೇರವಾಗಿ ಫಿನಾಲೆಗೆ ಎಂಟ್ರಿ ನೀಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಫಿನಾಲೆ ಟಿಕೆಟ್ ಪಡೆದುಕೊಳ್ಳುವ ಸ್ಪರ್ಧಿ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಈ ವಿಷಯ ಕೇಳುತ್ತಿದ್ದಂತೆ ಬಿಗ್‌ಬಾಸ್ ವೀಕ್ಷಕರು ಗಿಲ್ಲಿ ನಟ ಅವರೇ ಫಿನಾಲೆ ಸ್ಪರ್ಧಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಾಗೆಯೇ ಗಿಲ್ಲಿಯೇ ಈ ಸೀಸನ್ ವಿನ್ನರ್ ಎಂದು ಸಂಭ್ರಮಿಸುತ್ತಿದ್ದಾರೆ. ಮತ್ತೊಂದೆಡೆ ಫಿನಾಲೆ ಟಿಕೆಟ್ ನೀಡುತ್ತಿರೋದು ಬೇಗ ಆಯ್ತು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಶನಿವಾರದ ಸಂಚಿಕೆಯಲ್ಲಿ ಎಲಿಮಿನೇಟ್ ಅಂತಿಮ ಘಟ್ಟದಲ್ಲಿ ಧ್ರುವಂತ್, ಸೂರಜ್, ಸ್ಪಂದನಾ ಮತ್ತು ರಾಶಿಕಾ ನಿಂತಿದ್ದರು. ಸೂರಜ್ ಎಲಿಮಿನೇಟ್ ಆಗಿರುವ ವಿಷಯ ತಿಳಿಯುತ್ತಿದ್ದಂತೆ ರಾಶಿಕಾ ಮತ್ತು ರಕ್ಷಿತಾ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: BBK 12 ಫಿನಾಲೆಗೆ ಕೆಲವೇ ದಿನಗಳು ಬಾಕಿ; ವೀಕ್ಷಕರ ಇಚ್ಛೆಯಂತೆ ಟಾಪ್‌ 3 ರಲ್ಲಿ ಗೆಲ್ಲೋರು ಯಾರು?

ಸುದೀಪ್ ಅನುಪಸ್ಥಿತಿಯಲ್ಲಿ ಬಿಗ್‌ಬಾಸ್ ಮನೆಗೆ ಅತಿಥಿಗಳು ಆಗಮಿಸುತ್ತಿದ್ದಾರೆ. ಶನಿವಾರ ಭಾಗ್ಯಲಕ್ಷ್ಮೀ ಸೀರಿಯಲ್‌ನ ತಾಂಡವ್ ಮತ್ತು ಭಾಗ್ಯ ಆಗಮಿಸಿದ್ದರು. ಇವರ ಬಳಿಕ ಕೆಡಿ ಚಿತ್ರದ ಪ್ರಚಾರಕ್ಕಾಗಿ ನಿರ್ದೇಶಕ ಪ್ರೇಮ್ ಮತ್ತು ನಟಿ ರೀಷ್ಮಾ ನಾಣಯ್ಯ ಆಗಮಿಸಿದ್ದರು. ಇಂದು ಬೆಳಗ್ಗೆ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನಿರೂಪಕಿ , ನಟಿ ಅನುಪಮಾ ಗೌಡ ಬಂದಿರೋದನ್ನು ಗಮನಿಸಬಹುದು.

ಇದನ್ನೂ ಓದಿ: BBK 12: ಮನೆಗೆ ಬಂದಿರೋ ಅಕ್ಕನ ಮುಂದೆ ನಡೆಯಿತು ಸ್ವಯಂವರ: ರಘುನಲ್ಲಿ ಮಗು ಕಂಡ ಅಶ್ವಿನಿ ಗೌಡ

Source link

Leave a Reply

Your email address will not be published. Required fields are marked *