Headlines

ಗುಂಡ್ಲುಪೇಟೆಯಲ್ಲಿ ಡಿಜೆ ವಿವಾದ: ಪೊಲೀಸ್​​ ಠಾಣೆಗೆ ಮುತ್ತಿಗೆ ಹಾಕಿ ಹನುಮ ಭಕ್ತರ ಆಕ್ರೋಶ

ಗುಂಡ್ಲುಪೇಟೆಯಲ್ಲಿ ಡಿಜೆ ವಿವಾದ:  ಪೊಲೀಸ್​​ ಠಾಣೆಗೆ ಮುತ್ತಿಗೆ ಹಾಕಿ ಹನುಮ ಭಕ್ತರ ಆಕ್ರೋಶ


ಚಾಮರಾಜನಗರ, ಡಿಸೆಂಬರ್ 28: ಡಿಜೆ ವಾಹನ ವಶಕ್ಕೆ ಪಡೆದ ಪೊಲೀಸರ ನಡೆಗೆ ಆಕ್ರೋಶಗೊಂಡು ಹನುಮ ಭಕ್ತರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಹನುಮ ಜಯಂತಿ ಹಿನ್ನೆಲೆ ನಿನ್ನೆ ಸಂಜೆ ಶೋಭಾಯಾತ್ರೆ ನಡೆಯಿತು. ಈ ವೇಳೆ ಆಯೋಜಕರು ಅನುಮತಿ ಪಡೆಯದೆ ಡಿಜೆ ಬಳಸಿದ ಕಾರಣ ಟ್ರ್ಯಾಕ್ಟರ್ ಸಮೇತ ಪೊಲೀಸ್ ಡಿಜೆ ವಶಕ್ಕೆ ಪಡೆದಿದ್ದರು. ರಾತ್ರಿ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಮುಂದೆ ರೊಚ್ಚಿಗೆದ್ದ ಪೊಲೀಸರು ವಾಹನ ವಶಕ್ಕೆ ಪಡೆಯುತ್ತಿದ್ದರು. ಮೈಕ್ ಹಾಗೂ ಸೌಂಡ್ ಬಾಕ್ಸ್ ಬಳಸಲು ಅನುಮತಿ ಪಡೆದಿರುವ ಬಗ್ಗೆ ತಿಳಿಸಿದ್ದು, ರಾಜಕೀಯ ದುರುದ್ದೇಶದಿಂದ ಈ ಕೃತ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *