Weekly Horoscope: ಡಿಸೆಂಬರ್ ತಿಂಗಳ ಕೊನೆಯ ವಾರ ನಿಮ್ಮ ರಾಶಿಗನುಗುಣವಾಗಿ ಭವಿಷ್ಯ ತಿಳಿಯಿರಿ

Weekly Horoscope: ಡಿಸೆಂಬರ್ ತಿಂಗಳ ಕೊನೆಯ ವಾರ ನಿಮ್ಮ ರಾಶಿಗನುಗುಣವಾಗಿ ಭವಿಷ್ಯ ತಿಳಿಯಿರಿ


ಮೇಷ ರಾಶಿ :

ಉದ್ಯೋಗದಲ್ಲಿ ಒತ್ತಡ, ಮಾತಿನಿಂದ ಸಂಘರ್ಷ ಸಾಧ್ಯ. ವಿಶ್ವಾಸ ಉಳಿಯುತ್ತದೆ. ವಸ್ತುಗಳ ಉತ್ಪನ್ನ ಮಾಡುವವರಿಗೆ ನೌಕರರ ಕೊರತೆ ಕಾಣಿಸಬಹುದು. ಹಠಾತ್ ಬದಲಾವಣೆಯನ್ನು ಕುಟುಂಬ ನಿಮ್ಮಿಂದ ನಿರೀಕ್ಷಿಸುತ್ತದೆ. ಗುರು ಹಿರಿಯರಿಂದ ಸಿಕ್ಕ ಉಪದೇಶವು ಪ್ರಯೋಜನಕಾರಿಯಾಗುವುದು. ಪ್ರಯಾಣದಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮ್ಮನ್ನು ಅಳೆಯುವ ಜನರ ಸಂಖ್ಯೆ ಅಧಿಕವಾಗಿದೆ. ಎಲ್ಲರೂ ನಾನಾ ಪ್ರಶ್ನೆಗಳನ್ನು ಕೇಳುತ್ತಾರೆ. ಸ್ನೇಹಿತರಿಂದ ಅಸಹಕಾರದಿಂದ ಅವರ ಮೇಲೆ ಪ್ರೀತಿ ಕಡಿಮೆ ಆಗಬಹುದು. ಆರ್ಥಿಕತೆಯ ದೃಷ್ಟಿಯಿಂದ ಕಳೆದ ಕೆಲವು ದಿನಗಳಿಂದ ಉತ್ತಮವಾಗಿದೆ. ಕಾರ್ಯಕ್ಷೇತ್ರದಿಂದ ಹೆಚ್ಚುವರಿ ಆದಾಯ ಬರುವುದು. ನಿಮ್ಮ ಬದ್ಧತೆಯನ್ನು ಉಳಿಸಿಕೊಳ್ಳಿ. ಮಂಗಳ ವಾರ ಹನುಮಾನ್ ಚಾಲೀಸ್ ನ್ನು ಪ್ರಾತಃಕಾಲದಲ್ಲಿ ಪಠಿಸಿ.

ವೃಷಭ ರಾಶಿ :

ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ ತಪ್ಪಲಿದೆ. ಕುಟುಂಬದಲ್ಲಿ ಭಾವನಾತ್ಮಕತೆಗೆ ಚರ್ಚೆ. ಉದ್ಯೋಗದಲ್ಲಿ ಗೊತ್ತಾಗದೇ ನಿಮ್ಮ ಮೇಲೆ ಅಪವಾದ ಬರಬಹುದು. ಅದನ್ನು ತಾಳ್ಮೆ ತಿಳಿಸಿ, ಸರಿ ಮಾಡಿಕೊಳ್ಳುವಿರಿ. ಆರೋಗ್ಯದ ವ್ಯತ್ಯಾಸದಿಂದ ನಿಮ್ಮ ಮುಖ್ಯ ಕಾರ್ಯಗಳನ್ನು ಮಾಡಲು ಆಗದು. ಉದ್ಯೋಗದಲ್ಲಿನ ಒತ್ತಡಗಳು ಮನೆಯವರ ಮೇಲೆ ಸಿಟ್ಟಾಗುವಂತೆ ಮಾಡಬಹುದು. ಸಂಗಾತಿಯಿಂದ ನಿಮ್ಮ ಅಭಿಮಾನಕ್ಕೆ ತೊಂದರೆ ಆಗಬಹುದು. ಆರೋಗ್ಯವು ಸಾಮಾನ್ಯವಾಗಿ ಇರಲಿದೆ. ವ್ಯವಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಿದ ಅನಂತರವೂ ಕೆಲಸ ತಡವಾಗಿ ಪೂರ್ಣವಾಗುವುದಿಲ್ಲ. ಅನೇಕ ಲಾಭದ ಅವಕಾಶಗಳು ಸಿಗುತ್ತವೆ. ನೀವು ಧನಾಗಮನಕ್ಕಾಗಿ ಸ್ವಲ್ಪ ಕಾಯಬೇಕಾಗಬಹುದು. ಹೊಸ ಸಂಬಂಧದ ಮೂಲಕ ಅದೃಷ್ಟ ಬರಬಹುದು. ಲಕ್ಷ್ಮೀ ಅಷ್ಟೋತ್ತರ ಪಠನ.

ಮಿಥುನ ರಾಶಿ:

ನಿಮ್ಮ ಸಂಪರ್ಕ ಸೇತು ತುಂಡಾಗಬಹುದು. ನಿರ್ಧಾರಗಳಲ್ಲಿ ಗೊಂದಲವನ್ನು ಮೀರಲಾಗದು. ಉನ್ನತ ವಿದ್ಯಾಭ್ಯಾಸಕ್ಕೆ ಹಿರಿಯರಿಂದ ಆಶೀರ್ವಾದವನ್ನು ಪಡೆದುಕೊಳ್ಳಿ. ಅದರಲ್ಲಿ ಪ್ರೀತಿ ಮೂಡುವ ಸಾಧ್ಯತೆ ಇದೆ. ಹಳೆಯ ಗೆಳೆಯರು ನಿಮಗೆ ಆಕಸ್ಮಿಕವಾಗಿ ಸಿಕ್ಕರು. ಈ ವಾರದ ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯವರಾಗುವಿರಿ. ಇತರರ ಭಾವಕ್ಕೆ ಸ್ಪಂದಿಸುವ ಗುಣವಿರುವುದು. ನಾನಾ ಪ್ರಕಾರದ ಖರ್ಚುಗಳಿಂದ ದುಬಾರಿ ಎನಿಸಬಹುದು. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಮಕ್ಕಳನ್ನು ಹಿಡೆತಕ್ಕೆ ತರಲು ಪ್ರಯತ್ನಿಸುವಿರಿ. ಪ್ರಮುಖ ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬೇಡಿ. ಸಹೋದರಿಯ ಮತ್ತು ಸಂಗಾತಿಯ ಬೆಂಬಲವನ್ನು ಪಡೆದುಕೊಳ್ಳಿ. ಮಹಾವಿಷ್ಣುವಿನ ಸ್ತೋತ್ರ ಮಾಡಿ.

ಕರ್ಕಾಟಕ ರಾಶಿ:

ಈ ವಾರ ನಿಮ್ಮ ಕಾರ್ಯಗಳಲ್ಲಿ ಉತ್ಸಾಹವಿದ್ದರೂ ಹಿತಶತ್ರುಗಳು ನಿಮ್ಮ ಕಾರ್ಯವನ್ನು ಕಾಳು ಮಾಡುತ್ತಾರೆ. ಅಧಿಕಾರಿ ವರ್ಗದಿಂದ ನಿಮ್ಮ ಮೇಲೆ ಒತ್ತಡ ಬರಬಹುದು. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಆರ್ಥಿಕ ಚಿಂತೆಗಳು ಸಕಾರಾತ್ಮಕ ಮಾರ್ಗದಲ್ಲಿ ಇರಲಿ. ನಷ್ಟದ ಪ್ರಮಾಣವು ಅಧಿಕವಾಗುವುದು. ಮರೆವಿಂದ ನಿಮ್ಮ ವಸ್ತುಗಳು ನಷ್ಟವಾಗಬಹುದು. ಅಪರಿಚಿತ ವ್ಯವಹಾರವನ್ನು ಕಡಿಮೆ ಮಾಡಿ. ನಿಮ್ಮನ್ನು ನೀವೇ ಬೈದುಕೊಳ್ಳುವ ಸ್ಥಿತಿ ಬರಬಹುದು. ಅದನ್ನು ಕೂಡಲೇ ಪ್ರಕಟಿಸದೇ ನಿಯಂತ್ರಿಸಲು ಪ್ರಯತ್ನಿಸಿ. ವೈವಾಹಿಕ ಜೀವನದಲ್ಲಿ ವಿಶ್ವಾಸವು ಹೆಚ್ಚಾಗುವುದು. ದೈನಂದಿನ ವ್ಯಾಪಾರಿಗಳು ಹೆಚ್ಚು ಶ್ರಮಿಸಬೇಕು. ನಿಮ್ಮ ಮನೋವಿಕಾರದಿಂದ ಇತರರಿಗೂ ಕಷ್ಟವಾದೀತು. ದುರ್ಗಾಸ್ತೋತ್ರವನ್ನು ಮಾಡಿ.

ಸಿಂಹ ರಾಶಿ:

ಕೊನೆಯ ವಾರ ನಿಮಗೆ ಗೊತ್ತಿಲ್ಲ, ಅನುಭವವಿಲ್ಲದ ಕೆಲಸಗಳನ್ನು ಮಾಡಲು ಹೋಗಬೇಕಾಗುವುದು. ನಿಮಗೆ ಇದರಿಂದ ಆತಂಕ ಉಂಟಾಗಬಹುದು. ಕೆಲವನ್ನು ಅನುಭವಿಗಳ ಜೊತೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು. ಸಮಯಕ್ಕಾಗಿ ನೀವು ಕಾಯುವುದು ಅನಿವಾರ್ಯವಾದೀತು. ನಿಮ್ಮ ಸಹಕಾರದ ಗುಣವು ಎಲ್ಲರಿಗೂ ಮೆಚ್ಚುಗೆಯಾದೀತು. ಸ್ವಯಂಕೃತ ಅಪರಾಧದಿಂದ ನಿಮಗೆ ಕಿಂಚಿತ್ತೂ ಬೇಸರವಾಗದು. ಸೋಮಾರಿತನವೇ ನಿಮ್ಮ ದೊಡ್ಡ ಶತ್ರು. ಒಂಟಿತನದ ಆಲೋಚನೆಯು ಪೂರ್ಣವಾಗದು. ಅನಾರೋಗ್ಯದ ಕಾರಣದಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಆಗುವುದು. ಆರ್ಥಿಕತೆಯು ನಿಮಗೆ ತೃಪ್ತಿ ಕೊಡುವುದು. ವ್ಯಕ್ತಿತ್ವದ ಬೆಳವಣಿಗೆಯ ಜೊತೆಗೆ ಸಾಮಾಜಿಕ ಚಿತ್ರಣವನ್ನು ಬದಲಿಸಿ. ಹಣವು ಒಮ್ಮೆ ಕೈಗೆ ಬಂದರೆ, ಸಾಹಸ ಕಾರ್ಯಗಳಿಗೆ ವಿಯೋಗ. ಶಿವಕಾರುಣ್ಯಕ್ಕೆ ಪಾತ್ರರಾಗಿ.

ಕನ್ಯಾ ರಾಶಿ:

ರಾಶಿಯ ಅಧಿಪತಿ ಚತುರ್ಥದಲ್ಲಿ ಇರುವ ಕಾರಣ ಇಷ್ಟವಿಲ್ಲದಿದ್ದರೂ ಜವಾಬ್ದಾರಿಯನ್ನು ನಿರ್ವಹಿಸಬೇಕಾದೀತು. ನಿಮ್ಮ ಮಾತುಗಳನ್ನು ಉಳಿಸಿಕೊಳ್ಳಲು ಶ್ರಮದ ಅವಶ್ಯಕತೆ ಇದೆ. ತಾಯಿಯಿಂದ ಆರ್ಥಿಕ ಸಹಾಯವನ್ನೂ ಸಿಗಲಿದೆ ತೃಪ್ತಿದಾಯಕ ವಸ್ತು. ಈ ವಾರ ನೀವು ವಾಹನವನ್ನು ಖರೀದಿಸುವ ಯೋಜನೆಯನ್ನು ಮುಂದೂಡುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಅಸ್ಥಿರತೆಯನ್ನು ನಿಯಂತ್ರಿಸಿ. ನಿಮ್ಮ ಮಾತಿಗೆ ಆಕ್ಷೇಪಗಳು ಬರಬಹುದು. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ಕಾರಣದಿಂದ ಕುಟುಂಬವು ಸಂಕಷ್ಟದಲ್ಲಿ ಸಿಲುಕಿಕೊಳ್ಳಬಹುದು. ಎಲ್ಲಾ ಕೆಲಸಗಳನ್ನು ಮಾಡಿದರೂ ಯಶಸ್ಸಿನಲ್ಲಿ ವಿಳಂಬವಾಗಬಹುದು. ಮನಸ್ಸಿನ ನಕಾರಾತ್ಮಕ ಭಾವನೆಗಳು ನಿಮ್ಮನ್ನು ಮಾನಸಿಕವಾಗಿ ವಿಚಲಿತಗೊಳಿಸುತ್ತವೆ. ದಾನದಿಂದ ವಿಘ್ನ ದೂರ.

ತುಲಾ ರಾಶಿ:

ಶುಕ್ರನು ತೃತೀಯದಲ್ಲಿ ಇದ್ದು ಹಣಕಾಸಿನ ಕ್ರಮಬದ್ದ ಹೂಡಿಕೆ ಮತ್ತು ಖರ್ಚುಗಳ ಬಗ್ಗೆ ಸಂಗಾತಿಯ ಜೊತೆ ಚಿಂತನೆ ನಡೆಸುವಿರಿ. ನಿಮ್ಮ ವೃತ್ತಿಯಲ್ಲಿ ಅನಿರೀಕ್ಷಿತ ಪ್ರಶಂಸೆ ಮತ್ತು ಗೌರವಗಳು ಸಿಗಲಿವೆ. ಆಲಸ್ಯದಿಂದ ಹೊರಬರುವ ಮನಸ್ಸಾಗುವುದು. ಭಾವನಾತ್ಮಕ ಚಿಂತನೆಗಳು ನಿಮ್ಮ ಮೇಲೆ ಸಕಾರಾತ್ಮಕ ಪರಿಣಾಮವನ್ನು ನೀಡಬಹುದು. ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಿರಿ. ನಿಮ್ಮ ಬಗ್ಗೆ ಇರುವ ಆಕ್ಷೇಪಗಳು ಎಲ್ಲವು ಮುರಿದು ಬೀಳಬಹುದು. ನ್ಯಾಯ ನೀತಿಯ ವಿರುದ್ಧ ನಡೆಯುವುದು ಬೇಡ. ಈ ವಾರ ನಿಮ್ಮ ಸ್ಥಿರಾಸ್ತಿಯ ನಷ್ಟದಿಂದ ಬೇಸರವಾಗುವುದು. ಸ್ನೇಹಿತರ ಜೊತೆ ಸಣ್ಣ ಕಾರಣಕ್ಕೆ ಕಲಹವಾಗುವುದು. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸುವುದು. ನಿಮಗೆ ಸಾಮಾಜಿಕವಾಗಿ ಗೌರವವನ್ನು ಪಡೆಯಿರಿ. ಭೋಜನದಿಂದ ಸಂತೃಪ್ತಿಪಡಿಸಿ.

ವೃಶ್ಚಿಕ ರಾಶಿ:

ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದು ನಿಮ್ಮ ಯೋಜನೆಯ ಮುಖ್ಯ ಕೆಲಸಗಳು ಅಂತಿಮ ಹಂತಕ್ಕೆ ಬಂದು ತಲುಪಿದ್ದು ನಿರಾಳವೆನಿಸಬಹುದು. ಪರಸ್ಥಳ ವಾಸದಿಂದ ನಿಮಗೆ ಕಸಿವಿಸಿಯಾಗುವ ಸಾಧ್ಯತೆ ಇದೆ. ಮನೆಯ ಹಿರಿಯರ ಮಾತುಗಳು ನಿಮ್ಮನ್ನು ಕಾಡಬಹುದು. ದುಃಸ್ವಪ್ನಗಳಿಂದ ನಿಮ್ಮ ಮನಸ್ಸು ವಿಕಾರವಾಗುವುದು. ಈ ವಾರ ಉನ್ನತ ವಿದ್ಯಾಭ್ಯಾಸದ ಚಿಂತೆ ಕಾಡಬಹುದು. ಶತ್ರುಗಳು ನಿಮ್ಮ ನೆಮ್ಮದಿಯನ್ನು ಹಾಳುಮಾಡುವರು. ಎಂದೋ ಮಾಡಿದ ಕಾರ್ಯಕ್ಕೆ ಪಶ್ಚಾತ್ತಾಪಪಡಬೇಕಾದೀತು. ಪ್ರತಿಯೊಂದು ಕ್ರಿಯೆಯನ್ನು ನಿಧಾನಗತಿಯಲ್ಲಿ ಇರುವುದು. ಈ ಜನರಿಂದ ಟೀಕೆ ಬರುವುದು. ನೀವು ವಾಸ್ತವಕ್ಕಿಂತ ಕಾಲ್ಪನಿಕತೆಯಲ್ಲಿ ಹೆಚ್ಚು ಇರುತ್ತೀರಿ. ಸುಬ್ರಹ್ಮಣ್ಯ ಸ್ತೋತ್ರವನ್ನು ಬಿಡುವುದು ಬೇಡ.

ಧನು ರಾಶಿ:

ಗುರುವಿನ ಆಧಿಪತ್ಯವಿರುವ ಕಾರಣ ಕಾರ್ಯದ ಒತ್ತಡವು ನಿಮಗೆ ಏನು ಮಾಡಬೇಕೆಂದು ತೋಚದೆ ಹೋದಂತೆ ದಾರಿ ತೆರೆಯುತ್ತದೆ. ಆಪ್ತರ ಮಾತಿನಿಂದ ನೀವುಪಡುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಧಿಕ ಖರ್ಚನ್ನು ನೀವು ಮಾಡಬೇಕಾಗುವುದು. ಅನಾರೋಗ್ಯದಿಂದ ಇದ್ದರೂ ನಿಮ್ಮ ಕರ್ತವ್ಯವನ್ನು ಮಾಡಿರಿ. ಉದ್ಯೋಗದಲ್ಲಿ ಒತ್ತಡಗಳು ಇರುವುದರಿಂದ ಕುಟುಂಬಕ್ಕೆ ಸಮಯವನ್ನು ಕೊಡಲಾಗದು. ವಾರದಲ್ಲಿ ಅನ್ಯರನ್ನು ನೋಡಿ ವೈವಾಹಿಕ ಜೀವನದ ಚಿಂತೆ ಅತಿಯಾಗಿ ಕಾಡಬಹುದು. ಪಾಲುದಾರಿಕೆಯಲ್ಲಿ ಉಂಟಾದ ವಿವಾದವನ್ನು ದೊಡ್ಡ ಮಾಡಿಕೊಳ್ಳುವಿರಿ. ಆಲಸ್ಯದಿಂದ ಎಲ್ಲ ಕಾರ್ಯದಲ್ಲಿಯೂ ನಿರಾಸಕ್ತಿ ಇರಲಿದೆ. ವಿದ್ಯಾಭ್ಯಾಸದ ಹಿನ್ನಡೆಯು ನಿಮಗೆ ಅವಮಾನ ಎನಿಸುವುದು. ಅಸಭ್ಯ ಮಾತುಗಳು ಕೆಲವರಿಂದ ಕೇಳಬಹುದು. ಗುರುಸೇವೆಗೆ ನಿಮ್ಮ ಸ್ವಲ್ಪ ಸಮಯ ಮೀಸಲಿಡಿ.

ಮಕರ ರಾಶಿ:

ರಾಶಿಯ ಅಧಿಪತಿ ತೃತೀಯದಲ್ಲಿ ಇರುವ ತುರ್ತು ಹಣಕಾಸಿನ ಸಮಸ್ಯೆಯು ಎದುರಾದ ಸ್ನೇಹಿತರಿಂದ ಸಂಪತ್ತನ್ನು ಪಡೆದುಕೊಳ್ಳಿ. ನ್ಯಾಯಾಲಯದಲ್ಲಿ ಜಯ ಸಿಗುವ ಸಂಭವವು ನಿಮಗೆ ಅಸಾಧ್ಯ. ವ್ಯಾಪಾರದಲ್ಲಿ ಹಿನ್ನಡೆಯನ್ನು ಪಡೆಯಬೇಕಾಗುವುದು. ವಿದ್ಯಾಭ್ಯಾಸದ ಗಮನವು ಬೇರೆ ಕಡೆಗೆ ಹೋಗಬಹುದು. ಶತ್ರುಗಳ ಕಾಟಗಳು ನಿಮ್ಮ ಉತ್ಸಾಹವನ್ನು ಭಂಗ ಮಾಡಬಹುದು. ದೈವದ ಭೀತಿಯಿಂದ ಭಕ್ತಿ ಹೆಚ್ಚಾಗಲಿದೆ. ರಾಜಕಾರಣಿಗಳಿಂದ ನಿಮ್ಮ ಕೆಲಸವು ಪೂರ್ಣ ಕೆಲಸ. ದುಃಸ್ವಪ್ನಗಳು ಬೀಳಬಹುದು. ನೀವು ಶಾರೀರಿಕ ಕಾಳಜಿಯನ್ನು ಹೆಚ್ಚು ಮಾಡಬೇಕಾದೀತು. ವ್ಯವಹಾರದಲ್ಲಿ, ಮಾತುಗಳು ಹೆಚ್ಚು ತೀವ್ರವಾಗಿರುತ್ತದೆ, ಅದರ ಸರಿಯಾದ ಪ್ರಯೋಜನ ವಿಳಂಬವಾಗುತ್ತದೆ. ಶಿವಕವಚವನ್ನು ಪಾರಾಯಣ ಮಾಡಿ.

ಕುಂಭ ರಾಶಿ:

ಕೊನೆಯ ವಾರದಲ್ಲಿ ನಿಮಗೆ ಬಟ್ಟೆ ಮತ್ತು ಅಗತ್ಯ ವಸ್ತುಗಳ ವ್ಯಾಪಾರಿಗಳಿಗೆ ಸಂತಸವಾಗಿರುವುದು. ಹೆಚ್ಚು ಖರೀದಿಯ ಆರ್ಡರ್ ಗಳು ಬರಲಿದೆ. ದೈನಂದಿನ ಕೆಲಸದಲ್ಲಿ ಬದಲಾವಣೆಯನ್ನು ನೀವು ಅಪೇಕ್ಷಿಸುವಿರಿ. ಕಾರ್ಯ ಕ್ಷೇತ್ರದಲ್ಲಿ ಒತ್ತಡವಿರುವ ಕಾರಣ ಮನಸ್ಸಿಗೆ ಸಿಗಬೇಕಾದ ಶಾಂತಿಯ ಕೊರೆತೆಯೂ ಇರಲಿದೆ. ಮಾತಿನ ಕಾರಣದಿಂದ ಈ ವಾರ ದಾಂಪತ್ಯದಲ್ಲಿ ನಿರಾಸಕ್ತಿ ಉಂಟಾಗಬಹುದು. ಪಾಲುದಾರಿಕೆಯಲ್ಲಿ ಸಮಸ್ಯೆ ಕಾಣಿಸುವುದು. ಉದ್ಯಮದಲ್ಲಿ ಪ್ರಗತಿಯನ್ನು ಕಂಡು ಖುಷಿಯಾಗುವುದು. ನಿಮಗೆ ಯಾರಿಂದಲೋ ರಕ್ಷಣೆ ಇದೆ ಎನ್ನಬಹುದು. ಮನೆಯಲ್ಲೂ ತಾಳ್ಮೆಯನ್ನು ಇಟ್ಟುಕೊಳ್ಳಿ. ಯಾರೊಬ್ಬರ ಮಾತುಗಳಿಗೆ ತ್ವರಿತ ಪ್ರತಿಕ್ರಿಯೆ ಕೊಡುವುದು ಬೇಡ. ಶುಭ ಸುದ್ದಿಯು ನಿಮ್ಮನ್ನು ಪ್ರೋತ್ಸಾಹಿಸಬಹುದು. ಹರಿಹರಸುತನಿಗೆ ಶರಣಾಗುವ ಕಾಲ.

ಮೀನ ರಾಶಿ:

ಈ ವಾರ ಯಂತ್ರೋಪಕರಣಗಳ ಮಾರಾಟದಿಂದ ಹೆಚ್ಚಿನ ಲಾಭವನ್ನು ನೀವು ಕಾಣಬಹುದು. ನಿಮ್ಮದೇ ಸ್ಥಿರಾಸ್ತಿ ವ್ಯವಹಾರದಲ್ಲಿ ನಿಮಗೆ ಅನುಕೂಲವಾಗುವಂತೆ ಆಗುವುದು. ಮಾನಸಿಕ ನೆಮ್ಮದಿಯು ನಿಮ್ಮ ಹಲವು ಕೆಲಸಗಳನ್ನು ಮಾಡಲು ಸಹಾಯಕವಾಗುವುದು. ವಾಹನದ ತೊಂದರೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಸ್ವಂತ ವ್ಯಾಪಾರದಲ್ಲಿ ಹಿನ್ನಡೆಯಾಗುವುದು. ಮರಣ ಭಯವು ಕಾಡಬಹುದು. ತೆಗಳಿಕೆಯನ್ನು ಛಲವಾಗಿ ತೆಗೆದುಕೊಳ್ಳಿರಿ. ಯಾರ ಮೇಲೂ ಅವಮಾನ ಬೇಡ. ಈ ವಾರ ವಾಣಿಜ್ಯದಲ್ಲೂ ಕೆಲಸ ಸುಗಮವಾಗಿ ನಡೆಯುವುದು. ಹಿಂದಿನ ತಪ್ಪುಗಳು ಪಾಠವಾಗುವುದು. ಹಳೆಯ ಸಾಲವನ್ನು ಮರುಪಡೆಯಲು ಸಾಧ್ಯವಾಗಲಿಲ್ಲ. ತಂದೆಯ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಕೆಲವು ವಿಷಯಗಳ ಬಗ್ಗೆ ಮನೆಯ ಹಿರಿಯರಿಂದ ಮಾರ್ಗದರ್ಶನ. ತಿಲದಾನವನ್ನು ಮಾಡಿ, ಕಷ್ಟಪರಿಹಾರದ ಸಂಕಲ್ಪದಿಂದ ಭಾರತೀಯ ಗೋವುಗಳಿಗೆ ಗೋಗ್ರಾಸ ನೀಡಿ.

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)

ರಂದು ಪ್ರಕಟಿಸಲಾಗಿದೆ – 11:02 am, ಭಾನುವಾರ, 28 ಡಿಸೆಂಬರ್ 25



Source link

Leave a Reply

Your email address will not be published. Required fields are marked *