Video: ಬೆಂಗಳೂರು ಜೀವನ ಇಷ್ಟೊಂದು ದುಬಾರಿ ಏಕೆ? ಎಂದು ಪ್ರಶ್ನಿಸಿದ ಮಹಿಳೆ

Video: ಬೆಂಗಳೂರು ಜೀವನ ಇಷ್ಟೊಂದು ದುಬಾರಿ ಏಕೆ? ಎಂದು ಪ್ರಶ್ನಿಸಿದ ಮಹಿಳೆ


ಬೆಂಗಳೂರು, ಡಿಸೆಂಬರ್ 28: ಈಗಿನ ದುಬಾರಿ ದುನಿಯಾದಲ್ಲಿ ಎಷ್ಟು ದುಡಿದರೂ ಕೂಡ ಕಡಿಮೆಯೇ. ತಿಂಗಳ ಪ್ರಾರಂಭದಲ್ಲಿ ಕೈ ತುಂಬಾ ಸಂಬಳ ಬಂದ್ರೂ ತಿಂಗಳ ಕೊನೆಯಲ್ಲಿ ಕೈಯಲ್ಲಿ ದುಡ್ಡೆಲ್ಲಾ ಖಾಲಿ. ಅದಲ್ಲದೇ ಸ್ವಲ್ಪ ಸಂಬಳದಲ್ಲಿ ದಿನನಿತ್ಯದ ವೆಚ್ಚಗಳನ್ನು ತೂಗಿಸಿಕೊಂಡು ಹೋಗುವುದು ಹೇಳುವಷ್ಟು ಸುಲಭವಲ್ಲ. ಎಲ್ಲಾ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿದೆ. ಬೆಂಗಳೂರಿನಲ್ಲಿ (ಬೆಂಗಳೂರು) 500 ರೂ 50ಕ್ಕೆ ಸಮಾನ ಎಂದೆಣಿಸುತ್ತಿದೆ ಎಂದು ಮಹಿಳೆಯೊಬ್ಬರು ಹೇಳಿದ್ದು, ಖರ್ಚು ವೆಚ್ಚಗಳು ಹೆಚ್ಚಾಗುತ್ತಿದೆ ಎಂದಿರುವ ವಿಡಿಯೋ ಚರ್ಚೆಗೆ ಕಾರಣವಾಗಿದೆ.

ದೀಪಾ ಗುಪ್ತಾ (its.me.dipaaa) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ದೀಪಾ ಗುಪ್ತಾ ಎಂಬ ಮಹಿಳೆ ಬೆಂಗಳೂರಿನಲ್ಲಿ ಹಣ ಎಷ್ಟು ಬೇಗನೆ ಖಾಲಿಯಾಗುತ್ತದೆ. ಸಣ್ಣ ಪ್ರವಾಸಗಳು ಸಹ ದುಬಾರಿಯಾಗಲು ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ 500 ರೂ 50 ರೂಪಾಯಿಗಳಂತೆ ಭಾಸವಾಗುವುದು ಏಕೆ. ನಾನು 500 ರೂಪಾಯಿಗಳನ್ನು ಖರ್ಚು ಮಾಡುತ್ತೇನೆ. ನಾನು 50 ರೂಪಾಯಿ ಖರ್ಚು ಮಾಡುತ್ತಿರುವಂತೆ ಭಾಸವಾಗುತ್ತದೆ. ನೀವು ಮನೆಯಿಂದ ಹೊರಗೆ ಹೊರಟರೆ ನಿಮ್ಮ ಕೈಯಲ್ಲಿ 500 ರೂ ಯಾವುದಕ್ಕೂ ಸಾಕಾಗುವುದಿಲ್ಲ. ನೀವು 50 ರೂಪಾಯಿಗೆ ತಿನ್ನುತ್ತಿದ್ದೀರಿ ಎಂದು ನೀವು ಭಾವಿಸುತ್ತೀರಿ, ಆದರೆ ನೀವು ನಿಜವಾಗಿಯೂ ಖರ್ಚು ಮಾಡುತ್ತಿರುವುದು 500 ರೂಪಾಯಿಗಳು. ಈ ನಗರ ಯಾಕೆ ಇಷ್ಟೊಂದು ದುಬಾರಿ ಎಂದು ಮಹಿಳೆ ಹೇಳಿದ್ದಾಳೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ದೆಹಲಕ್ಕಿಂತ ಬೆಂಗಳೂರು ಬೆಸ್ಟ್, ಈ ನಗರವನ್ನೇ ರಾಷ್ಟ್ರ ರಾಜಧಾನಿ ಮಾಡಿ ಎಂದ ಯುವತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಮಾಡಲಾಗಿದೆ. ಒಬ್ಬ ಬಳಕೆದಾರ ನನಗೂ ಹೀಗೆ ಅನಿಸುತ್ತದೆ. ಮತ್ತೊಬ್ಬರು ನಿಮ್ಮ ಮಾತು ನೂರಕ್ಕೆ ನೂರು ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇತರರು, ಇದು ನನಗೂ ಅನ್ವಯಿಸುತ್ತದೆ ಎಂದು ಹೇಳಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *