ಬಿಜೆಪಿ ಸೇರಿದ ನಟಿ ಕಸ್ತೂರಿಗೆ ಚೆನ್ನೈನಲ್ಲಿ 100 ಕೋಟಿ ಬೆಲೆಬಾಳುವ ಮನೆಯಿದೆ. ಇದರ ಬಗ್ಗೆ ಇನ್ನಷ್ಟು ತಿಳಿಯೋಣ.

90ರ ದಶಕದಲ್ಲಿ ಕಾಲಿವುಡ್‌ನಲ್ಲಿ ಫೇಮಸ್ ನಟಿಯಾಗಿದ್ದವರು ಕಸ್ತೂರಿ. ಎತ್ರಾಜ್ ಕಾಲೇಜಿನಲ್ಲಿ ಓದುತ್ತಿರುವಾಗಲೇ 1991ರಲ್ಲಿ ‘ಆತ್ತಾ ಉನ್ ಕೋಯಿಲಿಲೆ’ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಈ ಪಾತ್ರಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ನಂತರ ‘ರಾಸಾತ್ತಿ ವರುಮ್ ನಾಳ್’, ‘ಚಿನ್ನವರ್’, ‘ಗೌರ್ಮೆಂಟ್ ಮಾಪಿಳ್ಳೆ’ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದರು.

ಕಾಲೇಜಿನಲ್ಲಿದ್ದಾಗಲೇ ಮಾಡೆಲಿಂಗ್‌ನಲ್ಲಿ ಆಸಕ್ತಿ ಹೊಂದಿದ್ದ ಕಸ್ತೂರಿ 1992ರಲ್ಲಿ ಮಿಸ್ ಚೆನ್ನೈ ಸ್ಪರ್ಧೆಯಲ್ಲಿ ಗೆದ್ದರು. ನಂತರ ಫೆಮಿನಾ ಮಿಸ್ ಮೆಡ್ರಾಸ್ ಸ್ಪರ್ಧೆಯಲ್ಲೂ ಗೆಲುವು ಸಾಧಿಸಿದರು. ಕಸ್ತೂರಿಯವರ ಸಿನಿ ಜರ್ನಿಯಲ್ಲಿ ಅವರ ಅಪ್ಪ-ಅಮ್ಮ ಬೆನ್ನೆಲುಬಾಗಿದ್ದರು. ಶ್ರೀಮಂತ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಕಸ್ತೂರಿಗೆ ಹುಟ್ಟಿನಿಂದಲೇ ಐಶಾರಾಮದ ಬದುಕಿತ್ತು.

ಕಸ್ತೂರಿಯವರ ತಾಯಿ ಸುಮತಿ ವಕೀಲರು, ತಂದೆ ಶಂಕರ್ ಎಂಜಿನಿಯರ್. ಓದಿನಲ್ಲಿ ಬುದ್ಧಿವಂತೆಯಾಗಿದ್ದರೂ ಕಸ್ತೂರಿಗೆ ಮಾಡೆಲಿಂಗ್‌ನಲ್ಲಿ ಆಸಕ್ತಿ ಹೆಚ್ಚಿತ್ತು. ಹಾಗಾಗಿಯೇ ನಟಿಯಾದರು. ವಕೀಲರಾದ ತಾಯಿ ಕಸ್ತೂರಿಯವರನ್ನು ಚಿಕ್ಕಂದಿನಿಂದಲೂ ಧೈರ್ಯವಂತೆಯಾಗಿ ಬೆಳೆಸಿದ್ದರು. ತಮ್ಮ ಮನಸ್ಸಿನಲ್ಲಿರುವುದನ್ನು ಧೈರ್ಯವಾಗಿ ಹೇಳುತ್ತಿದ್ದ ಕಸ್ತೂರಿ ಹಲವು ಬಾರಿ ವಿವಾದಕ್ಕೀಡಾಗಿದ್ದಾರೆ.

51 ವರ್ಷದ ಕಸ್ತೂರಿ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿದ್ದರು. ಯಾವ ಪಕ್ಷಕ್ಕೂ ಸೇರದೆ ಇದ್ದ ಕಸ್ತೂರಿ ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಕಸ್ತೂರಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಪತಿ ರವಿಕುಮಾರ್ ವೈದ್ಯರು. ಮಗ ಸಂಕಲ್ಪ್, ಮಗಳು ಸೋಭಿನಿ.

ಕಸ್ತೂರಿಯವರ ಪತಿಯೂ ಶ್ರೀಮಂತ ಕುಟುಂಬದಿಂದ ಬಂದವರು. ಚೆನ್ನೈನಲ್ಲಿ ಕಸ್ತೂರಿಗೆ ಒಂದು ದೊಡ್ಡ ಮನೆಯಿದ್ದು, ಅದರ ಬೆಲೆ 108 ಕೋಟಿ ರೂ. ಎನ್ನಲಾಗಿದೆ. ಈ ಮನೆ ಆಳ್ವಾರ್‌ಪೇಟೆಯ ಕಸ್ತೂರಿ ರಂಗನ್ ರಸ್ತೆಯಲ್ಲಿದೆ. ಕಸ್ತೂರಿ ಚಿತ್ರಗಳಿಗೆ 15 ರಿಂದ 20 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಧಾರಾವಾಹಿಗಳಿಗೆ ಪ್ರತಿ ಎಪಿಸೋಡ್‌ಗೆ 30 ಸಾವಿರ ರೂ. ಪಡೆಯುತ್ತಾರೆ ಎನ್ನಲಾಗಿದೆ.

Source link
ನಟಿ ಕಸ್ತೂರಿ100 ಕೋಟಿ ಬೆಲೆಬಾಳುವ ಮನೆ ಸೇರಿ ಒಟ್ಟೂ ಆಸ್ತಿ ಇಷ್ಟಿದೆ ನೋಡಿ!