ಚಂದನವನದಲ್ಲಿ ಚೆಲುವೆ ಅಮೃತಾ ಪ್ರೇಮ್, ತಮ್ಮ ಫ್ಯಾಮಿಲಿ ಜೊತೆ ಮೈಸೂರಿನಲ್ಲಿ ಜಾಲಿ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ.

ಚಂದನವನಕ್ಕೆ ಈಗಷ್ಟೇ ಕಾಲಿಟ್ಟ ಬೆಡಗಿ ನಟ ಲವ್ಲಿ ಸ್ಟಾರ್ ಪ್ರೇಮ್ (Lovely Star Prem ) ಪುತ್ರಿ ಅಮೃತಾ ಪ್ರೇಮ್ ತಮ್ಮ ತಂದೆ, ತಾಯಿ ಹಾಗೂ ಸಹೋದರನ ಜೊತೆ ಮೈಸೂರಿನಲಿ ಎಂಜಾಯ್ ಮಾಡ್ತಿದ್ದಾರೆ.

ಸದ್ಯ ಒಂದಾದ ನಂತರ ಇನ್ನೊಂದು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಮೃತಾ (Amrutha Prem) , ಶೂಟಿಂಗ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ಅರಮನೆಗಳ ನಗರಿ ಮೈಸೂರನ್ನು ಎಕ್ಸ್ ಪ್ಲೋರ್ ಮಾಡಿದ್ದಾರೆ.

ಮೈಸೂರು ಅರಮನೆ, ಚಾಮುಂಡೇಶ್ವರಿ ದೇವಸ್ಥಾನ ಸೇರಿ ಹಲವು ಜಾಗಗಳಿಗೆ ಅಮೃತಾ ಪ್ರೇಮ್ ಕುಟುಂಬದ ಜೊತೆ ತೆರಳಿದ್ದು, ಜೊತೆಗೆ ಮೈಸೂರಿನಲ್ಲಿ ವಿವಿಧ ಬಗೆಯ ಆಹಾರಗಳನ್ನು ಕೂಡ ಸವಿದಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು, ವಿಡಿಯೋ ಜೊತೆಗೆ ಮಾಹಿತಿಯನ್ನು ಹಂಚಿಕೊಂಡಿರುವ ಅಮೃತಾ ಮೈಸೂರು (Mysore)ನನ್ನ ಎರಡನೇ ಮನೆ ಎಂದಿದ್ದಾರೆ.

ಮೈಸೂರು ಡೈರೀಸ್ ಎಂದು ಸಬ್ ಟೈಟಲ್ ಕೊಟ್ಟು, ಮೈಸೂರು ಯಾವಾಗಲೂ ಎರಡನೇ ಮನೆಯಂತೆ ಭಾಸವಾಗುತ್ತದೆ. ಇದೇ ಮೊದಲ ಬಾರಿಗೆ ಅರಮನೆಗೆ ಭೇಟಿ ಕೊಟ್ಟಿದ್ದು, ಇಲ್ಲಿನ ಶ್ರೀಮಂತ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಸಂಪೂರ್ಣವಾಗಿ ವಿಸ್ಮಯಗೊಂಡಿದ್ದೇನೆ ಎಂದಿದ್ದಾರೆ.

ಜೊತೆಗೆ ಚಾಮುಂಡಿ ಬೆಟ್ಟಕ್ಕೆ (Chamundi Hills) ಭೇಟಿ ನೀಡಿರುವ ಕುರಿತು ಸಹ ನಟಿ ಬರೆದುಕೊಂಡಿದ್ದು, ಅಮ್ಮ, ಈ ಭೇಟಿ ಯಾವಾಗಲೂ ಸಕಾರಾತ್ಮಕತೆಯನ್ನು ತುಂಬುತ್ತದೆ ಮತ್ತು ಒಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಅಷ್ಟೇ ಅಲ್ಲ ಈ ಸ್ಥಳ ಮತ್ತು ಜನರು ಶುದ್ಧ ಪ್ರೀತಿಯಿಂದ ತುಂಬಿದ್ದಾರೆ. ಮೈಸೂರಿನ ತಾಣಗಳನ್ನು ಎಕ್ಸ್ ಪ್ಲೋರ್ ಮಾಡಲು ಬಂದೆ, ಆದರೆ ಇಲ್ಲಿನ ಆಹಾರಗಳನ್ನು ಎಕ್ಸ್ ಪ್ಲೋರ್ ಮಾಡಿದೆ ಎಂದಿದ್ದಾರೆ ಅಮೃತಾ ಪ್ರೇಮ್.

ಅಂದ ಹಾಗೇ ಅಮೃತಾ ಜೊತೆ ತಂದೆ ಪ್ರೇಮ್, ತಾಯಿ ಜ್ಯೋತಿ, ತಮ್ಮ ಏಕನಾಥ್ ಕೂಡ ಸಾತ್ ನೀಡಿದ್ದರು. ಪೂರ್ತಿ ಫ್ಯಾಮಿಲಿ ಮೈಸೂರಿನಲ್ಲಿ ಎಂಜಾಯ್ ಮಾಡಿದ್ದಾರೆ.

ಟಗರು ಪಲ್ಯ (Tagaru Palya) ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಅಮೃತಾ, ಇದೀಗ ಅಮ್ಮು ಎನ್ನುವ ಟ್ರೈ ಆಂಗಲ್ ಲವ್ ಸ್ಟೋರಿ ಹಾಗೂ ದಿರೇನ್ ರಾಮ್ ಕುಮಾರ್ ಜೊತೆ ಪಬ್ಬಾರ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

Source link
ಫ್ಯಾಮಿಲಿ ಜೊತೆ ಮೈಸೂರಿಗೆ ಅಮೃತಾ ಪ್ರೇಮ್ ಜಾಲಿ ಟ್ರಿಪ್