’ಅಮೃತಧಾರೆ’ ಧಾರಾವಾಹಿಯಲ್ಲಿ ಅನಾಥಾಶ್ರಮದಲ್ಲಿರುವ ಪುಟಾಣಿ ಕಂದಮ್ಮ ತನ್ನ ಮಗಳು ಅಂತ ಸುಳಿವು ಸಿಕ್ಕಿದ್ದು, ಆತ ಅನಾಥಾಶ್ರಮಕ್ಕೆ ಹೋಗಿ ಮಗಳನ್ನು ಮುದ್ದಾಡಿದ್ದಾನೆ. ಆದರೆ ಕಾನೂನಿನ ಪ್ರಕಾರ ಆ ಪುಟಾಣಿಯೇ ಗೌತಮ್ ಮಗಳು ಎನ್ನೋದು ಸಾಬೀತಾಗಬೇಕು. ಹೀಗಾಗಿ ಇನ್ನೂ ಒಂದು ವಾರ ಬೇಕು.

ಇನ್ನೊಂದು ಕಡೆ ಭೂಮಿಕಾ ಹಾಗೂ ಭಾಗ್ಯಳನ್ನು ಮುಗಿಸಲು ಶಕುಂತಲಾ-ಜಯದೇವ್ ರೆಡಿಯಾಗಿದ್ದಾರೆ. ಮನೆಯಲ್ಲಿರುವ ಶಕುಂತಲಾ, ಮನೆಯಿಂದ ಹೊರಗಡೆ ಇರೋ ಜಯದೇವ್ ಇಬ್ಬರೂ ಸೇರಿಕೊಂಡು ಒಂದಿಲ್ಲೊಂದು ಪ್ಲ್ಯಾನ್ ಮಾಡುತ್ತಿದ್ದಾರೆ. ಇದರ ವಿರುದ್ಧ ಭೂಮಿ, ಸೃಜನ್ ಹೋರಾಡಬೇಕಿದೆ.

ಯಾರು ಏನೇ ಹೇಳಿದರೂ ಕೂಡ ಶಕುಂತಲಾ ಕೆಟ್ಟವಳು, ಹಣದ ಆಸೆಗೆ ಮೋಸ ಮಾಡಿದ್ದಾಳೆ, ಕುತಂತ್ರ ಮಾಡಿದ್ದಾಳೆ ಅಂದರೆ ಗೌತಮ್ ನಂಬೋದಿಲ್ಲ. ಗೌತಮ್ನನ್ನು ಶಕುಂತಲಾ ನಾಯಿ ಅಂತ ಕೂಡ ಕರೆದಿದ್ದಳು. ಅದಕ್ಕೆ ಭೂಮಿ ಧರ್ಮದೇಟು ಕೊಟ್ಟಿದ್ದಳು. ಶಕುಂತಲಾಳಿಂದ ಭೂಮಿ-ಗೌತಮ್ ಮಧ್ಯೆ ಸಮಸ್ಯೆ ಬರದಿದ್ರೆ ಸಾಕು.

ಭೂಮಿಕಾಗೆ ತಾನು ಅವಳಿ ಮಕ್ಕಳಿಗೆ ಜನ್ಮ ಕೊಟ್ಟಿರೋದು ಗೊತ್ತಿಲ್ಲ. ಇದೇ ವಿಷಯ ಇಟ್ಕೊಂಡು ಭೂಮಿಕಾ-ಗೌತಮ್ ಮಧ್ಯೆ ಶಕುಂತಲಾ ಬಿರುಕು ತರುತ್ತಾಳಾ ಎನ್ನೋದು ದೊಡ್ಡ ಪ್ರಶ್ನೆಯಾಗಿದೆ. ಮಗಳ ವಿಷಯ ಏನಾಗಲಿದೆಯೋ ಏನೋ!

ಇನ್ನೂ ಒಂದು ವಾರಗಳ ಕಾಲ ಆ ಮಗು ಅನಾಥಾಶ್ರಮದಲ್ಲಿ ಇರುತ್ತದೆ. ಡಿಎನ್ಎ ರಿಪೋರ್ಟ್ನಲ್ಲಿ ಗೌತಮ್ ಮಗಳು ಆ ಪುಟಾಣಿ ಎನ್ನೋದು ಪಕ್ಕಾ ಆದರೆ ಮಾತ್ರ ಆ ಮಗು ಗೌತಮ್ ಮನೆ ಸೇರುವುದು. ಮಗಳು ಬದುಕಿರೋದು ಶಕುಂತಲಾ-ಜಯದೇವ್ಗೆ ಗೊತ್ತಾದರೆ ಅವರು ಸುಮ್ಮನಿರೋದು ಡೌಟ್. ಏನಾದರೂ ಮಾಡಿ ಗೌತಮ್ನಿಂದ ಆ ಮಗುವನ್ನು ದೂರ ಮಾಡಬಹುದು.

ಮಗಳು ಪತ್ತೆ ಆದಳು ಅಂತ ಅದು ಇಷ್ಟು ಬೇಗ ಗೌತಮ್ ಮನೆ ಸೇರುವುದು ಎಂದು ಹೇಳಲಾಗದು. ಒಟ್ಟಿನಲ್ಲಿ ಈ ಧಾರಾವಾಹಿಯಲ್ಲಿ ಸಾಕಷ್ಟು ಟ್ವಿಸ್ಟ್ಗಳು ಬರೋದು ಬಾಕಿ ಇದೆ. ಈ ಧಾರಾವಾಹಿಯಲ್ಲಿ ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿ ಪಾತ್ರದಲ್ಲಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು, ಜಯದೇವ್ ಪಾತ್ರದಲ್ಲಿ ರಾಣವ್ ಅವರು ನಟಿಸುತ್ತಿದ್ದಾರೆ.

Source link
Amruthadhaare Serial: ಮಗಳು ಸಿಕ್ಕರೂ ಗೌತಮ್ ಮನೆ ಸೇರೋಕಿದೆ ನೂರಾರು ಸವಾಲು! ಮುಂದಾಗೋದೆಲ್ಲ ಖುಷಿ ವಿಷ್ಯವಲ್ಲ!