ಅಣ್ಣಯ್ಯ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿರುವ ನಟಿ ನಾಗಶ್ರೀಯವರು ಸದ್ಯದಲ್ಲೇ ಒಂದು ಐತಿಹಾಸಿಕ ಪಾತ್ರದ ಮೂಲಕ ಬೆಳ್ಳಿ ತೆರೆ ಮೇಲೆ ಮಿಂಚಲು ತಯಾರಿ ನಡೆಸಿದ್ದಾರೆ.

ಅಣ್ಣಯ್ಯ ಧಾರಾವಾಹಿಯಲ್ಲಿ (Annayya Serial) ಮೂರು ಜನ ತಂಗಿಯರ ಹಿರಿಯಕ್ಕ ರತ್ನ ಪಾತ್ರಕ್ಕೆ ತನ್ನ ಸೌಮ್ಯ ನಟನೆಯಿಂದ ಜೀವತುಂಬುತ್ತಿರುವ ನಟಿ ನಾಗಶ್ರೀ ಬೇಗಾರ್ ಇದೀಗ ಮತ್ತೊಂದು ಚಂದನವನದಲ್ಲಿ ಮಿಂಚಲು ರೆಡಿಯಾಗುತ್ತಿದ್ದಾರೆ.

ಅಣ್ಣಯ್ಯ ಧಾರಾವಾಹಿಯಲ್ಲಿ ನಾಗಾಶ್ರೀಯವರದ್ದು (Nagashree Begar) ತುಂಬಾನೆ ಪ್ರಬುದ್ಧವಾದ ಪಾತ್ರವಾಗಿದೆ. ಟೀಚರ್ ಆಗಿರುವ ರತ್ನ, ತನ್ನ ಮನೆ, ತಂಗಿಯರು , ಅಣ್ಣ, ಅತ್ತಿಗೆ ಎನ್ನುವ ಪುಟ್ಟ ಪ್ರಪಂಚದಲ್ಲಿದ್ದು, ತನ್ನಪ್ರಬುದ್ಧ ಮಾತುಗಳಿಂದಲೇ ಗಮನ ಸೆಳೆಯುವ ಪಾತ್ರ ರತ್ನಳಾದ್ದು.

ಸೀರಿಯಲ್ ನೋಡುತ್ತಿರುವ ಪ್ರತಿಯೊಬ್ಬರಿಗೂ ರತ್ನ ಪಾತ್ರ ತುಂಬಾನೆ ಇಷ್ಟ ಆಗಿರುತ್ತೆ. ಆದರೆ ಈ ಪ್ರತಿಭಾನ್ವಿತ ನಟಿಯ ಹಿನ್ನೆಲೆ ಗೊತ್ತಾ? ಇವರು ಯಾರ ಮಗಳು? ಅಣ್ಣಯ್ಯದಲ್ಲಿ ನಟಿಸೋದಕ್ಕೂ ಮುನ್ನ ಏನು ಮಾಡುತ್ತಿದ್ದರು ನೋಡೋಣ.

ನಾಗಶ್ರೀಯವರು ಮೂಲತಃ ರಂಗಭೂಮಿ ಕಲಾವಿದೆ (drama artist). ಇವರು ಆಗುಂಬೆ ಮತ್ತು ಶೃಂಗೇರಿಯ ಮಧ್ಯೆ ಇರುವ ಬೇಗಾರ್ ನವರು. ಹಾಗಾಗಿ ಇವರ ಹೆಸರಿನ ಜೊತೆಗೆ ನಾಗಶ್ರೀ ಬೇಗಾರ್ ಎನ್ನುವ ಊರಿನ ಹೆಸರು ಕೂಡ ತಳುಕು ಹಾಕಿದೆ.

ನಾಗಶ್ರೀ ಕುಟುಂಬವು ಕಲಾವಿದರಿಂದ ತುಂಬಿರುವ ಕುಟುಂಬ, ಇವರ ಅಜ್ಜ ಸಂಗೀತ ವಿದ್ವಾಂಸರು, ತಂದೆ ರಮೇಶ್ ಬೇಗಾರ್ ಇವರು ಬಹುಮುಖ ಪ್ರತಿಭೆ, ಯಕ್ಷಗಾನ ಭಾಗವತಿಕೆ ಮಾಡುತ್ತಾರೆ, ನಾಟಕ ನಿರ್ದೇಶನ ಮಾಡುತ್ತಾರೆ, ಜೊತೆಗೆ ಸಿನಿಮಾ ನಿರ್ದೇಶನ ಕೂಡ ಮಾಡುತ್ತಾರೆ.

ಈಗಾಗಲೇ ರಮೇಶ್ ಬೇಗಾರ್ ಅವರ ನಿರ್ದೇಶನದ ಎರಡು ಸಿನಿಮಾಗಳಲ್ಲಿ ನಾಗಶ್ರೀ ನಾಯಕಿಯಾಗಿ ನಟಿಸಿದ್ದಾರೆ. ಮೊದಲನೇಯದಾಗಿ ವೈಶಂಪಾಯನ ತೀರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು ನಂತರ ಜಲಪಾತ ಸಿನಿಮಾ ಮೂಲಕ ವೀಕ್ಷಕರ ಮನಸ್ಸು ಗೆದ್ದರು.

ಇದೀಗ ತಂದೆ ರಮೇಶ್ ಬೇಗಾರ್ (Ramesh Begar) ನಿರ್ದೇಶನದ ಹೊಸದೊಂದು ಸಿನಿಮಾದಲ್ಲೂ ನಾಗಶ್ರೀ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಗಶ್ರೀ ಹುಟ್ಟುಹಬ್ಬದ ದಿನ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು, ಇವರು ರಾಣಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋದು ಗೊತ್ತಾಗಿದೆ.

ಇದು ಜಾಣಗೆರೆ ವೆಂಕಟರಾಮಯ್ಯ ಅವರ ಐತಿಹಾಸಿಕ ಕಥೆ ಆಧಾರಿತ ಸಿನಿಮಾವಾಗಿದ್ದು, ಇದು ಪ್ಯಾರೆಲಲ್ ಕಥೆಯಾಗಿದ್ದು, ನಾಗಶ್ರೀ ಎರಡು ಶೇಡ್ ಗಳಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ಪೋಸ್ಟರ್ ನಲ್ಲಿ ಹಳೇ ಕಾಲದ ರಾಣಿಯಂತೆ ನಾಗಶ್ರಿ ಸುಂದರವಾಗಿ ಕಾಣಿಸುತ್ತಿದ್ದಾರೆ.

Source link
ಅಪ್ಪನ ನಿರ್ದೇಶನದಲ್ಲೇ ಮತ್ತೊಮ್ಮೆ ಚಂದನವನಕ್ಕೆ ರೀ ಎಂಟ್ರಿ ಕೊಡ್ತಿದ್ದಾರ ಅಣ್ಣಯ್ಯ ನಟಿ?