
ಇದೀಗ ಹೊಸ ವಿಷ್ಯವೊಂದು ರಿವೀಲ್ ಆಗಿದೆ. ಅದೇನೆಂದರೆ, ಶುರಾ ಖಾನ್ ಈಗ ಗರ್ಭಿಣಿ ಎನ್ನುವ ಸುದ್ದಿ. ಶುರಾ ಖಾನ್ ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಪತ್ನಿಯನ್ನು ಅರ್ಬಾಜ್ ಖಾನ್ ಹೆರಿಗೆ ಚಿಕಿತ್ಸಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದ್ದ ವಿಡಿಯೋ ಕೂಡ ಹರಿದಾಡುತ್ತಿತ್ತು. ಆ ಸಮಯದಲ್ಲಿ, ಅರ್ಬಾಜ್ ಖಾನ್ ಮತ್ತು ಶುರಾ ಹೋಗುವ ಸಂದರ್ಭದಲ್ಲಿ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಾಗ, ಕೋಪಗೊಂಡ ಅರ್ಬಾಜ್, ಪತ್ನಿಯನ್ನು ಪಕ್ಕಕ್ಕೆ ಸರಿಸಿ ಆಕೆ ಕಾಣದಂತೆ ತಡೆದಿದ್ದರು. ಆದ್ದರಿಂದ ಶುರಾ ಖಾನ್ ಗರ್ಭಿಣಿ ಇದ್ದಿರಬಹುದು ಎನ್ನುವ ಗಾಳಿಸುದ್ದಿ ಹರಿದಾಡಿತ್ತು.