Headlines

Dhanush and Mrunal Thakur dating ಮರಾಠಿ ಚೆಲುವೆ ಜೊತೆ ಧನುಷ್ ಡೇಂಟಿಂಗ್? ಸಿಂಗಲ್ ಧನುಷ್ ಮತ್ತೆ ಪ್ರೀತಿಯಲ್ಲಿ ಬಿದ್ರಾ..? | Are Dhanush And Mrunal Thakur Dating Here Is What We Know So Far Gow

Dhanush and Mrunal Thakur dating ಮರಾಠಿ ಚೆಲುವೆ ಜೊತೆ ಧನುಷ್ ಡೇಂಟಿಂಗ್? ಸಿಂಗಲ್ ಧನುಷ್ ಮತ್ತೆ ಪ್ರೀತಿಯಲ್ಲಿ ಬಿದ್ರಾ..? | Are Dhanush And Mrunal Thakur Dating Here Is What We Know So Far Gow


 ಸದ್ಯ ಸಿನಿಲೋಕದಲ್ಲಿ ಹರಿದಾಡ್ತಾ ಇರೋ ಹಸಿ ಬಿಸಿ ಗಾಸಿಪ್ ಇದು. ಕಾಲಿವುಡ್ ಸ್ಟಾರ್ ನಟ ಧನುಷ್, ಮರಾಠಿ ಚೆಲುವೆ ಬಹುಭಾಷಾ ನಟಿ ಮೃಣಾಲ್ ಠಾಕೂರ್ ಜೊತೆಗೆ ಡೇಟ್ ಮಾಡ್ತಾ ಇದ್ದಾರೆ ಅನ್ನೋದು. ಈ ಜೋಡಿ ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ತಾ ಇದ್ದು, ಒಬ್ಬರ ನಡುವೆ ಕುಚ್ ಕುಚ್ ನಡೀತಾ ಇದೆ ಅನ್ನೋ ವದಂತಿ ಹರಿದಾಡ್ತಾ ಇದೆ.  ಕಳೆದ ವರ್ಷವಷ್ಟೇ ಧನುಷ್, ಐಶ್ವರ್ಯ ರಜನಿಕಾಂತ್​ರಿಂದ ವಿಚ್ಛೇದನ ಪಡೆದಿದ್ರು. 2 ದಶಕಗಳ ದಾಂಪತ್ಯ ಜೀವನ ಮುರಿದು ಬಿದ್ದ ಮೇಲೆ ಧನುಷ್ ಸಿಂಗಲ್ ಆಗಿದ್ದಾರೆ. ಸೋ ಈ ಸಿಂಗಲ್  ಹೀರೋಗೆ ಈ ಮೃಣಾಲ್ ಮೇಲೆ ಕಣ್ಣು ಬಿದ್ದಿದೆ ಅನ್ನೋ ಸುದ್ದಿ ಸಿನಿಲೋಕದಲ್ಲಿ ಸದ್ದು ಮಾಡ್ತಾ ಇದೆ.

ಇದೇ ಆಗಸ್ಟ್ 1ನೇ ತಾರೀಖು ಮೃಣಾಲ್ ತಮ್ಮ 33ನೇ ಬರ್ತ್​ಡೇನ ಸೆಲೆಬ್ರೇಟ್ ಮಾಡಿಕೊಂಡ್ರು. ಆ ಪಾರ್ಟಿನಲ್ಲಿ ಧನುಷ್ ಹಾಜರಾಗಿದ್ರು. ಧನುಷ್ ಮತ್ತು ಮೃಣಾಲ್ ಒಟ್ಟಿಗೆ ಸಿನಿಮಾ ಮಾಡಿಲ್ಲ. ಆದ್ರೂ ಇವರಿಬ್ಬರ ದೋಸ್ತಿ ಎಲ್ಲರ ಗಮನ ಸೆಳೆಯುವಂತೆ ಮಾಡ್ತು. ಅದ್ರಲ್ಲೂ ಪಾರ್ಟಿನಲ್ಲಿ ಈ ಇಬ್ಬರೂ ಕೈ ಹಿಡಿಕೊಂಡು ಮಾತನಾಡ್ತಾ ಇರೋದನ್ನ ನೋಡಿ ಇವರಿಬ್ಬರ ನಡುವೆ ಏನೋ ನಡೀತಾ ಇದೆ ಅಂತ ಗುಸು ಗುಸು ಶುರುವಾಯ್ತು. ಇನ್ನೂ ಕಳೆದ ತಿಂಗಳು ‘ತೇರೆ ಇಷ್ಕ್ ಮೇ’ ಬಾಲಿವುಡ್ ಸಿನಿಮಾದ ಪಾರ್ಟಿನಲ್ಲೂ ಧನುಷ್ ಮತ್ತು ಮೃಣಾಲ್ ಒಟ್ಟಿಗೆ ಕಾಣಿಸಿಕೊಂಡಿದ್ರು. ಅಲ್ಲಿಗೆ ಈ ಜೋಡಿ ಪದೇ ಪದೇ ಪಾರ್ಟಿನಲ್ಲಿ ಕ್ಲೋಸ್ ಆಗಿ ಕಾಣಿಸಿಕೊಂಡಿರೋದನ್ನ ನೋಡಿ ಈ ಡೇಟಿಂಗ್ ರೂಮರ್ ಹುಟ್ಟಿಕೊಂಡಿದೆ. ಈ ವಿಷ್ಯದ ಬಗ್ಗೆ ಧನುಷ್ ಆಗಲಿ ಮೃಣಾಲ್ ಆಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದ್ರೆ ಗಾಸಿಪ್ ರೂಪರ್ ಸುಳ್ಳು ಅಂತಲೂ ಹೇಳಿಲ್ಲ. ಸೋ ಈ ಗಾಸಿಪ್ ಬರೀ ಗಾಸಿಪ್ ಗಲ್ಲಿಯಲ್ಲೇ ಉಳಿಯುತ್ತಾ,.? ಅಥವಾ ಇಬ್ಬರ ರಿಲೇಷನ್ ಶಿಪ್ ಮುಂದಕ್ಕೆ ಹೋಗುತ್ತಾ ಕಾದುನೋಡಬೇಕಿದೆ.



Source link

Leave a Reply

Your email address will not be published. Required fields are marked *