*ನಾಡ ಹಿರಿಮೆಯ ಹೂಗುಚ್ಛ*
ಹಿರಿಮೆ ನೋಡು ನಮ್ಮ ನಾಡು, ನುಡಿ ಗರಿಮೆಯ ಆಸ್ವಾದಿಸಿ ಹಾಡು, ಓ ಒಡನಾಡಿ ಕಣ್ಮಣಿ ಕರುನಾಡ ಮಡಿಲಲ್ಲೇ, ಸೇವೆ ಮಾಡಿ ನೋಡು.! ನಾಡ ತುಂಬಾ ಸಂಪತ್ತು, ಮಧುರ ನುಡಿ ನಮ್ಮ ಸ್ವತ್ತು, ಹಿಂಜರಿಯದೇ ಮುಂದಾಗು, ಸಿರಿನಾಡ ಒಳಿತಿಗೆ ಭೇದ ಮರೆತು ಒಂದಾಗು.! ನಾಡಿಗಾಗಿ ಸವೆದು ಹೋದ, ಮಡಿಲಲ್ಲೇ ಮಡಿದು ಹೋದ, ಕವಿ-ಸಾಹಿತಿ ಸತ್ಪುರುಷರ, ಗುಣಗಾನದ ಹೂಗುಚ್ಛ ಪರಿಮಳವು ಬೀರುತಿದೆ.! ನಾಡ ಸಂಸ್ಕೃತಿಗೆ ನಮಿಸುತ್ತಾ, ಕನ್ನಡಾಂಬೆ ಪಾದಚರಣ ಸವಿಜೇನಿನ ಹೂರಣ, ನಾಡ ಹಿರಿಮೆ ಗುಣಗಾನಕೆ, ಸಮರ್ಪಿಸು ಹೂಗುಚ್ಛ.! …