ಇಂದು, 25 ಜುಲೈ 2025 ರಂದು ಇತ್ತೀಚೆಗೆ ನಮ್ಮನ್ನಗಲಿರುವ ಹಿರಿಯ ನಟಿ ಬಿ. ಸರೋಜಾದೇವಿ ವೈಕುಂಠ ಸಮಾರಾಧನೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕರು ಕಲಾವಿದರು ಸೇರಿದಂತೆ, ಸರೋಜಾದೇವಿ ಬಂಧು-ಬಾಂಧವರು, ರಾಜಕೀಯ ನಾಯಕರು, ಹಲವು ಗಣ್ಯರು ವೈಕುಂಠ ಸಮಾರಾಧನೆಯಲ್ಲಿ ಭಾಗಿ ಆಗಿದ್ದಾರೆ.
ಇಂದು, 25 ಜುಲೈ 2025 ರಂದು ಇತ್ತೀಚೆಗೆ ನಮ್ಮನ್ನಗಲಿರುವ ಹಿರಿಯ ನಟಿ ಬಿ. ಸರೋಜಾದೇವಿ (B Saroja Devi) ವೈಕುಂಠ ಸಮಾರಾಧನೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕರು ಕಲಾವಿದರು ಸೇರಿದಂತೆ, ಸರೋಜಾದೇವಿ ಬಂಧು-ಬಾಂಧವರು, ರಾಜಕೀಯ ನಾಯಕರು, ಹಲವು ಗಣ್ಯರು ವೈಕುಂಠ ಸಮಾರಾಧನೆಯಲ್ಲಿ ಭಾಗಿ ಆಗಿದ್ದಾರೆ. ಮಾಜಿ ಉಪ ಮುಖ್ಯ ಮಂತ್ರಿ ಸಿ ಅಶ್ವಥ್ ನಾರಾಯಣ ಸಹ ಭಾಗಿಯಾಗಿದ್ದಾರೆ. ಇದರಲ್ಲಿ ಭಾಗಿಯಾಗಿರುವ ನಟ-ನಿರ್ದೇಶಕ ಉಪೇಂದ್ರ ಅವರು, ಅಲ್ಲಿ ಒಂದು ಮಾತು ಹೇಳಿದ್ದಾರೆ. ಅದೀಗ ವೈರಲ್ ಆಗುತ್ತಿದೆ.
ಹಾಗಿದ್ದರೆ ನಟ ಉಪೇಂದ್ರ ಅವರು ಹೇಳಿದ್ದೇನು? ಈ ಬಗ್ಗೆ ‘ಸರೋಜಾದೇವಿ ಇಲ್ಲದಿದ್ರೆ ನಾನು ಹೀರೋ ಆಗುತಿರಲಿಲ್ಲ.. A ಸಿನಿಮಾ ಬಿಡುಗಡೆ ಆಗೋದಕ್ಕೆ ಅವರೇ ಕಾರಣ. ‘ಎ’ ಸಿನಿಮಾ ಸೆನ್ಸಾರ್ ಆಗೋದಿಲ್ಲ ಅನ್ನೋ ಟೈಂನಲ್ಲಿ ಸಪೋರ್ಟ್ ಮಾಡಿದವರು ಅವರು. ‘ಎ’ ಸಿನಿಮಾನ ಮೆಚ್ಚಿ ಹೊಗಳಿದ ಮೊದಲಿಗರು ಸರೋಜಮ್ಮ, ಎ ಪಿಚ್ಚರ್ ಗೆ ಪ್ರೊತ್ಸಾಹ ನೀಡದೇ ಇದ್ದಿದ್ದರೆ ಇವತ್ತು ನಾನು ಹೀರೋ ಆಗಿರೋಕೆ ಅವಕಾಶ ಇರ್ತಿರಲಿಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲ, ವಿಷ್ಣುವರ್ಧನ್ ಪ್ರಶಸ್ತಿ, ಡಾ.ರಾಜ್ ಕುಮಾರ್ ಪ್ರಶಸ್ತಿ ಹಾಗೆ ಬಿ ಸರೋಜಾದೇವಿ ಅವ್ರ ಹೆಸರಲ್ಲಿ ಪ್ರಶಸ್ತಿ ಆಗಬೇಕು’ ಎಂದು ಕೂಡ ಹೇಳಿದ್ದಾರೆ ಉಪೇಂದ್ರ.
ಇನ್ನು, ಸಿ. ಅಶ್ವಥ್ ನಾರಾಯಣ ಅವರು ‘ಸರೋಜದೇವಿ ಮಾಡಿರುವ ಚಿತ್ರರಂಗದ ಸೇವೆ ಹಲವರಿಗೆ ಮಾಧರಿ ಆಗಲಿ ಎಂದ ಅಶ್ವಥ್ ನಾರಾಯಣ್ ಅವರು ‘ಮಲ್ಲೇಶ್ವರಂ 11 ನೇ ಮುಖ್ಯ ರಸ್ತೆಗೆ ಬಿ ಸರೋಜದೇವಿ ಹೆಸರು ನಾಮಕರಣ ಮಾಡುತ್ತೆವೆ’ ಎಂದಿದ್ದಾರೆ. ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಹಿರಿಯ ನಟಿ ಹೇಮಾ ಚೌಧರಿ ಕೂಡ ಸರೋಜಾದೇವಿ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಂಡು ಹಿರಿಯ ನಟಿಯನ್ನು ಸ್ಮರಿಸಿ ಮಾತನ್ನಾಡಿದ್ದಾರೆ.