Headlines

ಅವ್ರಿಗೆ ಬಾಯಿಮುಚ್ಕೊಂಡು ಮನೆಯಲ್ಲಿ ಬಿದ್ದಿರೋಕೆ ಹೇಳಿ… ಯಶ್​ ಅಮ್ಮ ಕೆಂಡಾಮಂಡಲವಾಗಿದ್ದೇಕೆ? | Yash Mother Pushpa Arunkumar Angry Over People Talking About Family Suc

ಅವ್ರಿಗೆ ಬಾಯಿಮುಚ್ಕೊಂಡು ಮನೆಯಲ್ಲಿ ಬಿದ್ದಿರೋಕೆ ಹೇಳಿ… ಯಶ್​ ಅಮ್ಮ ಕೆಂಡಾಮಂಡಲವಾಗಿದ್ದೇಕೆ? | Yash Mother Pushpa Arunkumar Angry Over People Talking About Family Suc



ಅವ್ರಿಗೆ ಬಾಯಿಮುಚ್ಕೊಂಡು ಮನೆಯಲ್ಲಿ ಬಿದ್ದಿರೋಕೆ ಹೇಳಿ… ಯಶ್​ ಅಮ್ಮ ಕೆಂಡಾಮಂಡಲವಾಗಿದ್ದೇಕೆ? | Yash Mother Pushpa Arunkumar Angry Over People Talking About Family Suc

ನಟ ಯಶ್​ ಅವರ ಅಮ್ಮ ಪುಷ್ಪಾ ಅರುಣ್ ಕುಮಾರ್ ಅವರ ಕೊತ್ತಲವಾಡಿ ಚಿತ್ರ ಬಿಡುಗಡೆ ಬೆನ್ನಲ್ಲೇ ಅವರು ಸಕತ್​ ಗರಂ ಆಗಿದ್ದಾರೆ. ಉಗಿದು ಉಪ್ಪಿನಕಾಯಿ ಹಾಕಿದ್ದು ಯಾರಿಗೆ ನೋಡಿ! 

ಕೆಜಿಎಫ್​ ಸ್ಟಾರ್ ಯಶ್ (Yash) ಅವರ ತಾಯಿ ಪುಷ್ಪ ಅರುಣ್ ಕುಮಾರ್ ಅವರ ಬಹುನಿರೀಕ್ಷಿತ ಕೊತ್ತಲವಾಡಿ ಚಿತ್ರ ಕೊನೆಗೂ ಆಗಸ್ಟ್​1ರಂದು ತೆರೆ ಕಂಡಿದ್ದು, ಬಾಕ್ಸ್​ ಆಫೀಸ್​​​ ನಿರೀಕ್ಷೆಗಳನ್ನು ತಲುಪುವಲ್ಲಿ ಹಿನ್ನೆಡೆ ಕಂಡಿದೆ ಎಂದು ಹೇಳಲಾಗುತ್ತಿದೆ. ಯಶ್​ ಅವರ ಅಮ್ಮನಾಗಿರುವ ಕಾರಣ, ಜನರು ಸಹಜವಾಗಿ ಚಿತ್ರಮಂದಿರಕ್ಕೆ ಬರುತ್ತಾರೆ ಎಂದುಕೊಳ್ಳಲಾಗಿತ್ತು. ‘ಕೊತ್ತಲವಾಡಿ’ ಬಿಡುಗಡೆಗೂ ಮುನ್ನ ಕ್ರೇಜ್​​ ಕ್ರಿಯೇಟ್​ ಮಾಡಿತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಸಕ್ಸಸ್​ ಕಂಡಿಲ್ಲ ಎಂದು ತಿಳಿದುಬಂದಿದೆ. ಇಲ್ಲಿಯವರೆಗೆ, ಇಂಡಿಯಾ ನೆಟ್​ ಕಲೆಕ್ಷನ್​​ 15 ಲಕ್ಷ ರೂಪಾಯಿ ಆಗಿದ್ದು, ವಿಶ್ವಾದ್ಯಂತ ಒಟ್ಟು 16 ಲಕ್ಷ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ.

ಇದರ ನಡುವೆಯೇ, ಪುಷ್ಪ ಅರುಣ್ ಕುಮಾರ್ (Pushpa Arun kumar) ಅವರು ನೀಡಿರುವ ಸಂದರ್ಶನಗಳ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಲೇ ಇವೆ. ಇದೀಗ ತಮ್ಮ ಮನೆಯವರ ಬಗ್ಗೆ ಮಾತನಾಡುತ್ತಿರುವ ಜನರ ಬಗ್ಗೆ ಯಶ್​ ಅಮ್ಮ ಸಕತ್​ ಗರಂಗೊಂಡಿದ್ದು, ಬಾಯಿಮುಚ್ಚಿಕೊಂಡು ಇರೋಕೆ ಹೇಳಿ ಅವರಿಗೆ. ನಮ್ಮ ಮನೆಯವರನ್ನು ಹೇಗೆ ನೋಡಿಕೊಳ್ಳಬೇಕು ಎನ್ನೋದು ನಮಗೆ ಗೊತ್ತು. ಅವರಿಂದ ಕೇಳಿ ತಿಳಿದುಕೊಳ್ಳಬೇಕಿಲ್ಲ. ಅವರ ಮನೆಯಲ್ಲಿ ಬಾಯಿ ಮುಚ್ಚಿಕೊಂಡು ಬಿದ್ದಿರೋಕೆ ಹೇಳಿ ಎಂದು ಹೇಳಿದ್ದಾರೆ.

ಯಶ್​ ಏನು ಸಾಮಾನ್ಯದವನಲ್ಲ…

ಎಫ್​ಡಿಎಫ್​ಸಿ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಪುಷ್ಪಾ ಅವರು ಸಕತ್​ ಗರಂ ಆಗಿರೋದನ್ನು ನೋಡಬಹುದು. ಯಶ್​ ಇಷ್ಟೊಂದು ದುಡ್ಡು ಹಾಕ್ತಿದ್ದಾರೆ, ಮಗನನ್ನು ಅಲ್ಲಿ ಬಿಟ್ಟಿದ್ದಾರೆ ಎಂದು ಹೇಳ್ತಿರೋ ವಿರುದ್ಧ ಕಿಡಿ ಕಾರಿರೋ ಅವರು, ಯಶ್​ ಸಾಮಾನ್ಯ ಸರ್ಕಾರಿ ನೌಕರ ಆಗಿ ರೋಡ್​ನಲ್ಲಿ ಇದ್ದಿದ್ದರೆ ಈ ಮಾತು ಹೇಳಿದ್ರೆ ಸರಿ. ಆದರೆ ಯಶ್​ಗೆ ಇರೋ ಕ್ರೇಜ್​ ಎಷ್ಟು ಎಂದು ಗೊತ್ತಲ್ಲ, ಒಂದು ಕಡೆ ಫಂಕ್ಷನ್​ಗೆ ಹೋದ್ರೆ ಹತ್ತಾರು ಬಾಡಿಗಾರ್ಡ್​ಗಳು ಬೇಕು, ಅಂಥ ಯಶ್​ಗೆ ಕಡಿಮೆ ಬಜೆಟ್​ನ ನನ್ನ ಸಿನಿಮಾದಲ್ಲಿ ಚಾನ್ಸ್​ ಕೊಡಬೇಕು ಎಂದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಕೂಡ ಪುಷ್ಪಾ ಅವರು ಸಾಕಷ್ಟು ಕೋಪಗೊಂಡಿದ್ದರು. ಪ್ರಮೋಷನ್​ ಸಮಯದಲ್ಲಿ, ಅವರಿಗೆ ಸಹಜವಾಗೇ ನಿಮ್ಮ ಮಗನಿಗೆ ಸಿನಿಮಾ ತೋರಿಸಿದ್ರಾ., ರಾಕಿಂಗ್ ಸ್ಟಾರ್ (Rocking Star) ನಿಮ್ಮ ಸಿನಿಮಾ ನೋಡಿ ಏನಂದ್ರು ಅನ್ನೋ ಪ್ರಶ್ನೆ ತೂರಿಬಂದಿತ್ತು. ಆಗ ಯಶ್ ತಾಯಿ ಮಾರ್ಮಿಕವಾದ ಉತ್ತರ ಕೊಟ್ಟಿದ್ದರು. ಯಶ್ ನೋಡಿದ ಮಾತ್ರಕ್ಕೆ ಸಿನಿಮಾ ಓಡಲ್ಲ…ಹಣ ಬರಲ್ಲ.. ಜನ ಬಂದು ನೋಡಿದ್ರೇನೆ ಸಿನಿಮಾ ಗೆಲ್ಲೋದು ಅಂದಿದ್ದಾರೆ. ಮಗನ ಅನಿಸಿಕೆ ಬೇಕಾಗಿಲ್ಲ. ಈ ಸಿನಿಮಾ ಮಾಡಿರೋದು ಜನಕ್ಕೆ ಅಂದಿದ್ದರು. ಅವರ ನಟನೆ ನಿರ್ಮಾಣದ ರಾಮಾಯಣದ ಬಗ್ಗೆ ನನಗೇನೂ ಕೇಳಬೇಡಿ ಅಂತಿದ್ದರು.

 

 



Source link

Leave a Reply

Your email address will not be published. Required fields are marked *