ಸ್ನೇಹಿತರು, ಕುಟುಂಬ ಅಥವಾ ಸಲಹೆಗಾರರ ವೇಷದಲ್ಲಿ ಬರುವ ವಂಚಕರನ್ನು ಎದುರಿಸಲು ಚಾಣಕ್ಯನ 8 ಸೂತ್ರಗಳು ಇಲ್ಲಿವೆ. ವಂಚಕರನ್ನು ಎದುರಿಸಲು ಕೆಲವು ಸಮರ್ಥವಾದ ಆಯುಧಗಳು ನಿಮ್ಮ ಬಳಿಯೇ ಇವೆ. ಅವು ಯಾವುದೆಂದು ಇಲ್ಲಿದೆೆ.
ರಾಜಕೀಯ ತಂತ್ರದ ಪ್ರಾಚೀನ ಗುರು ಚಾಣಕ್ಯ. ನಿಮ್ಮ ಜೊತೆಗೇ ಇದ್ದು ನಿಮ್ಮನ್ನು ನಯವಾಗಿ ಮಾತನಾಡಿಸಿ ಬಲೆಗೆ ಕೆಡವುವ ಗೋಮುಖವ್ಯಾಘ್ರಗಳ ಬಗ್ಗೆ ಆತ ಬಹಳ ಹಿಂದೆಯೇ ಹೇಳಿದ್ದಾನೆ. ಅವರು ಸ್ನೇಹಿತರು, ಕುಟುಂಬದವರು ಅಥವಾ ಸಲಹೆಗಾರರಂತೆ ವೇಷ ಧರಿಸಿ ಬರುತ್ತಾರೆ. ನಿಮ್ಮ ನಂಬಿಕೆ ಮತ್ತು ಭಾವನೆಗಳನ್ನು ಅವರಿಗೆ ಬೇಕಾದಂತೆ ಆಡಿಸುತ್ತಾರೆ. ಇವರನ್ನು ಎದುರಿಸುವುದು ಹೇಗೆ? ಚಾಣಕ್ಯ ಎಂದಿಗೂ ಬಹಿರಂಗ ಮುಖಾಮುಖಿಯನ್ನು ಶಿಫಾರಸು ಮಾಡಲಿಲ್ಲ. ಅಡಗಿಸಿಟ್ಟ ಬ್ಲೇಡ್‌ನಿಂದ ತೀಕ್ಷ್ಣವಾಗಿ ಕೊಯ್ಯುವಂತೆ ಎದುರಿಸಬೇಕು. ನಿಮ್ಮ ಮನಸ್ಸನ್ನು ಕಾಪಾಡಿಕೊಳ್ಳುವುದು, ಕಳ್ಳರಿಗಿಂತ ಮೂರು ಹೆಜ್ಜೆ ಮುಂದೆ ಇರುವುದು, ನೀವು ಅವರ ನಿಯಂತ್ರಣದಿಂದ ಜಾರಿದ್ದೀರಿ ಎಂದು ಅವರಿಗೆ ತಿಳಿಯದಷ್ಟು ಸದ್ದಿಲ್ಲದೆ ಚಲಿಸುವುದು ನಿಮ್ಮ ತಂತ್ರ ಆಗಿರಬೇಕು. ಅದು ಹೇಗೆ ಎಂಬ ಬಗ್ಗೆ ಚಾಣಕ್ಯನ 8 ಸಲಹೆಗಳು ಇಲ್ಲಿವೆ.
1) ವಂಚಕರ ಮಾತನ್ನಲ್ಲ, ಉದ್ದೇಶವನ್ನು ಅರ್ಥ ಮಾಡಿಕೊಳ್ಳಿ
ಕೆಲಸ ಪ್ರಾರಂಭಿಸುವ ಮೊದಲು ಯಾವಾಗಲೂ ಮೂರು ಪ್ರಶ್ನೆ ಕೇಳಿಕೊಳ್ಳಿ: ಅದನ್ನು ಏಕೆ ಮಾಡುತ್ತಿದ್ದೇನೆ, ಫಲಿತಾಂಶ ಏನಾಗಿರಬಹುದು ಮತ್ತು ನಾನು ಯಶಸ್ವಿಯಾಗುತ್ತೇನೆಯೇ? ಕುತಂತ್ರಿಗಳೊಂದಿಗೆ ವ್ಯವಹರಿಸುವಾಗಲೂ ಅದೇ ಬುದ್ಧಿವಂತಿಕೆ ಅನ್ವಯಿಸಿ. ಅವರು ತಮ್ಮ ಉದ್ದೇಶ ಹೇಳುವುದಿಲ್ಲ. ನಿಮ್ಮನ್ನು ಅನುಕೂಲಕ್ಕಾಗಿ ಹೊಗಳಬಹುದು, ಸತ್ಯಗಳನ್ನು ತಿರುಚಬಹುದು, ನಿಮ್ಮ ಸಹಾನುಭೂತಿ ಗಳಿಸಲು ಅಸಹಾಯಕತೆ ನಟಿಸಬಹುದು. ನಿಮ್ಮ ಮೊದಲ ಹೆಜ್ಜೆ ಅವರು ಹೇಳುವುದಕ್ಕೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುವುದು ಮತ್ತು ಅವರು ನಿಜವಾಗಿಯೂ ಏನು ಬಯಸುತ್ತಾರೆ ಎಂಬುದನ್ನು ಗಮನಿಸುವುದು. ಅವರು ಯಾವಾಗಲೂ ನಿಮ್ಮಿಂದ ಏನು ಪಡೆಯುತ್ತಾರೆ? ನೀವು ಇಲ್ಲ ಎಂದು ಹೇಳಿದಾಗ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ? ನೀವು ಪ್ರತಿಕ್ರಿಯಿಸದೆ ಗಮನಿಸುತ್ತಿದ್ದರೆ, ನೀವು ಬಲಶಾಲಿಯಾಗುತ್ತೀರಿ ಮತ್ತು ನಿಮ್ಮನ್ನು ನಿಯಂತ್ರಿಸಲು ಅವರಿಗೆ ಕಷ್ಟವಾಗುತ್ತದೆ.
2) ಮೌನ ನಿಮ್ಮ ಖಡ್ಗವಾಗಿರಲಿ, ನಿಮ್ಮ ಉದ್ದೇಶ ಬಹಿರಂಗಪಡಿಸದಿರಿ
ಚಾಣಕ್ಯ, ರಾಜರು ತಮ್ಮ ಸಂಪೂರ್ಣ ಯೋಜನೆಗಳನ್ನು ಎಂದಿಗೂ ಬಹಿರಂಗಪಡಿಸಬಾರದು ಎಂದು ಕಲಿಸಿದ. ವಿಶ್ವಾಸಾರ್ಹ ಮಿತ್ರರಿಗೂ ಸಹ ಹೇಳಬಾರದು. ದೈನಂದಿನ ಜೀವನದಲ್ಲಿ, ಇದರರ್ಥ ನೀವು ನಿಮ್ಮ ಆಲೋಚನೆಗಳು ಮತ್ತು ಮಾತುಗಳನ್ನು ಕಾಪಾಡಿಕೊಳ್ಳಲು ಕಲಿಯಬೇಕು. ವಂಚಕರು ನಿಮ್ಮ ವಿಚಾರಗಳಿಂದಲೇ ಲಾಭ ಹೊಂದುತ್ತಾರೆ. ಅವರು ನಿಮ್ಮ ರಹಸ್ಯಗಳನ್ನು ನಂತರ ನಿಮ್ಮ ವಿರುದ್ಧವೇ ಬಳಸಬಹುದು. ಆದ್ದರಿಂದ ಕಡಿಮೆ ಹಂಚಿಕೊಳ್ಳಿ. ನಿಮ್ಮ ಭಯ ಮತ್ತು ದೌರ್ಬಲ್ಯಗಳ ಬಗ್ಗೆ ಕಡಿಮೆ ಮಾತನಾಡಿ. ಅವರು ಉತ್ತರಗಳಿಗಾಗಿ ಒತ್ತಾಯಿಸಿದರೆ, ಅಸ್ಪಷ್ಟವಾಗಿ ಹೇಳಿ. ಅವರು ಮಾಹಿತಿಗಾಗಿ ಹುಡುಕಿದರೆ, ವಿಷಯವನ್ನು ಬೇರೆಡೆಗೆ ತಿರುಗಿಸಿ. ನಿಮ್ಮ ನಿಜವಾದ ಆಲೋಚನೆಗಳು ಗುಪ್ತವಾಗಿದ್ದರೆ, ಅವರ ಹಿಡಿತ ದುರ್ಬಲಗೊಳ್ಳುತ್ತದೆ. ಏಕೆಂದರೆ ಅವರು ಏನನ್ನು ಬಳಸಿಕೊಳ್ಳಬಹುದೆಂದು ಕಂಡುಹಿಡಿಯಲಾಗುವುದಿಲ್ಲ.
3) ಅವರ ಬಲೆಯಲ್ಲಿ ಸಿಲುಕಿಕೊಳ್ಳದೆ ಆಟವಾಡಿ
ಕೆಲವೊಮ್ಮೆ ಬಹಿರಂಗವಾಗಿ ವಿರೋಧಿಸುವುದು ವಂಚಕನ ಬೆಂಕಿಗೆ ಇಂಧನ ನೀಡುತ್ತದೆ. ಸದ್ದಿಲ್ಲದೆ ಕೆಲಸ ಮಾಡಿ ಎಂದು ಚಾಣಕ್ಯ ಹೇಳುತ್ತಾರೆ. ವಂಚಕ ನಿಮ್ಮ ಮಾತನ್ನು ನಿರೀಕ್ಷಿಸಿದರೆ ನಯವಾಗಿ ತಲೆಯಾಡಿಸಿ. ಆದರೆ ಏನನ್ನೂ ಮಾಡದಿರಿ. ಅವರು ನಿಮ್ಮನ್ನು ತಮ್ಮ ನಾಟಕದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದರೆ, ಚಾತುರ್ಯದಿಂದ ಜಾರಿಕೊಳ್ಳಿ. ನೀವು ಪ್ರತಿ ಬಾರಿಯೂ ಹೋರಾಡಬೇಕಾಗಿಲ್ಲ. ಕೆಲವೊಮ್ಮೆ ಅವರಿಗೆ ಬೇಕಾದುದನ್ನು ನೀಡದಿರುವುದು ಅತ್ಯಂತ ಬುದ್ಧಿವಂತ ಕ್ರಮ. ಆಂತರಿಕ ಸ್ಪಷ್ಟತೆಯೊಂದಿಗೆ ಬಾಹ್ಯ ಶಾಂತತೆಯೇ ನಿಜವಾದ ಚಾಣಕ್ಯ ತಂತ್ರ.
4) ನಿಮ್ಮ ಮಿತ್ರರನ್ನು ಬುದ್ಧಿವಂತಿಕೆಯಿಂದ ಆರಿಸಿ
ಚಾಣಕ್ಯ ಯಾವಾಗಲೂ ನಿಷ್ಠಾವಂತ ಜನರನ್ನು ಹತ್ತಿರ ಇಟ್ಟುಕೊಳ್ಳಲು ಸಲಹೆ ನೀಡುತ್ತಾರೆ. ವಂಚಕರು ನಿಮ್ಮಲ್ಲಿ ಭೇದ ಸೃಷ್ಟಿಸಲು ಬಯಸುತ್ತಾರೆ. ಏಕೆಂದರೆ ನಿಮ್ಮನ್ನು ಒಂಟಿಯಾಗಿ ನಿಯಂತ್ರಿಸಲು ಸುಲಭ. ನಿಜವಾದ ಮಿತ್ರರನ್ನು ಹತ್ತಿರದಲ್ಲಿರಿಸಿಕೊಳ್ಳಿ. ನೀವು ಯಾರೆಂದು ಗೌರವಿಸುವ ಜನರೊಂದಿಗೆ ವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮನ್ನು ವಂಚಿಸಲಾಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ನಿಮಗೆ ಗೊಂದಲ ಇದ್ದರೆ ವಿಶ್ವಾಸಾರ್ಹ ಸ್ನೇಹಿತರು ನಿಮಗೆ ಸ್ಪಷ್ಟತೆ ನೀಡಬಹುದು. ನೀವು ಒಬ್ಬಂಟಿಯಾಗಿಲ್ಲ ಎಂದು ತಿಳಿದರೆ ವಂಚಕರು ಹಿಂಜರಿಯುತ್ತಾರೆ.
5) ಪ್ರತಿಫಲವನ್ನು ನಿಯಂತ್ರಿಸಿ
ಜನರು ಪ್ರತಿಫಲವನ್ನು ನಿರೀಕ್ಷಿಸಿಯೇ ವರ್ತಿಸುತ್ತಾರೆ. ಅವರಿಗೆ ಹಣ, ಹೊಗಳಿಕೆ ಅಥವಾ ಗಮನ ಬೇಕು. ಹೀಗಾಗಿ, ಅವರು ನಿಮ್ಮಿಂದ ನಿಜವಾಗಿಯೂ ಏನು ಪಡೆಯಬಯಸುತ್ತಾರೆ ಎಂದು ನಿಮ್ಮನ್ನು ಕೇಳಿಕೊಳ್ಳಿ. ನಿಮ್ಮ ಸಮಯ, ಸಹಾಯ ಅಥವಾ ಒಪ್ಪಿಗೆ? ನೀವು ನೀಡುವುದನ್ನು ಸದ್ದಿಲ್ಲದೆ ಮಿತಿಗೊಳಿಸಿ. ಅವರು ನಿರಂತರ ಬೇಡಿಕೆಗಳ ಮೂಲಕ ನಿಮ್ಮನ್ನು ಹಿಂಡಿದರೆ, ಮುಕ್ತವಾಗಿ ನೀಡುವುದನ್ನು ನಿಲ್ಲಿಸಿ. ಅವರು ಹೊಗಳಿಕೆಯನ್ನು ಹಂಬಲಿಸಿದರೆ, ಅದನ್ನು ಮಿತವಾಗಿ ನೀಡಿ. ನೀವು ಅವರಿಗೆ ಕಡಿಮೆ ಆಹಾರ ನೀಡಿದಷ್ಟೂ ಅವರ ಹಿಡಿತ ದುರ್ಬಲವಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಮಾಡಿ.
6) ಶಾಂತವಾಗಿರಿ, ಭಾವನಾತ್ಮಕ ಅಂತರವಿರಲಿ
ವಂಚಕನ ದೊಡ್ಡ ಸಾಧನವೆಂದರೆ ನಿಮ್ಮ ಭಾವನಾತ್ಮಕ ಪ್ರತಿಕ್ರಿಯೆ. ಕೋಪ, ಕಣ್ಣೀರು ಅವರಿಗೆ ನಿಮ್ಮನ್ನು ಎಳೆಯಲು ಸೂತ್ರಗಳನ್ನು ನೀಡುತ್ತದೆ. ನಿಮ್ಮ ಸಂಪತ್ತನ್ನು ನೀವು ಕಾಪಾಡುವಂತೆ ನಿಮ್ಮ ಭಾವನೆಗಳನ್ನು ಕಾಪಾಡಿಕೊಳ್ಳಿ ಎಂದು ಚಾಣಕ್ಯ ಹೇಳುತ್ತಾನೆ. ಅವರು ನಿಮ್ಮನ್ನು ಕೆರಳಿಸಿದರೆ ಕೆರಳದಿರಿ. ಅವರು ನಿಮ್ಮನ್ನು ಅಪರಾಧಿ ಭಾವನೆಯತ್ತ ಆಕರ್ಷಿಸಿದರೆ ಪ್ರತಿಕ್ರಿಯಿಸಬೇಡಿ. ಅವರು ನಿಮ್ಮ ಮಾತುಗಳನ್ನು ತಿರುಚಿದಾಗ ಶಾಂತವಾಗಿ ಸತ್ಯಗಳಿಗೆ ಅಂಟಿಕೊಳ್ಳಿ. ನಿಮ್ಮ ಶಾಂತತೆಯು ಅವರ ತಂತ್ರಗಳನ್ನು ನಿಶ್ಯಸ್ತ್ರಗೊಳಿಸುತ್ತದೆ. ನೀವು ಅವರ ಆಟವನ್ನು ಆಡದಿದ್ದಾಗ, ನೀವು ಸದ್ದಿಲ್ಲದೆ ಗೆಲ್ಲುತ್ತೀರಿ.
7) ಅಗತ್ಯವಿದ್ದಾಗ ಆಟದಿಂದ ನಿರ್ಗಮಿಸಿ
ಕೆಲವೊಮ್ಮೆ ಬುದ್ಧಿವಂತ ನಡೆ ಎಂದರೆ ಸಂಪೂರ್ಣವಾಗಿ ದೂರ ಸರಿಯುವುದು. ಕೆಲವು ಯುದ್ಧಗಳು ಹೋರಾಡಲು ಯೋಗ್ಯವಲ್ಲ ಎಂದು ಚಾಣಕ್ಯ ಸ್ಪಷ್ಟವಾಗಿ ಹೇಳುತ್ತಾನೆ. ನಿಮ್ಮ ಸೂಕ್ಷ್ಮ ರಕ್ಷಣೆಯ ಹೊರತಾಗಿಯೂ ವಂಚಕ ಹಿಂದೆ ಸರಿಯಲು ನಿರಾಕರಿಸಿದರೆ, ದೂರವನ್ನು ಕಾಪಾಡಿಕೊಳ್ಳಿ. ಅದನ್ನು ನಾಜೂಕಾಗಿ ಮಾಡಿ. ನಾಟಕೀಯ ನಿರ್ಗಮನ ಅಥವಾ ಜೋರಾದ ಹೋರಾಟ ಬೇಡ. ನಿಮ್ಮ ಸಂವಹನಗಳನ್ನು ಕಡಿಮೆ ಮಾಡಿ. ಸ್ಪಷ್ಟ ಮಿತಿ ಇರಲಿ. ಅವರು ನಿಮ್ಮ ಶಕ್ತಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಅವರು ಸುಲಭವಾದ ಬೇರೆ ಗುರಿಗಳತ್ತ ಸಾಗುತ್ತಾರೆ.
ನಿಮ್ಮ ಅತ್ತೆ ಈ ರಾಶಿಯವರಾಗಿದ್ದರೆ, ಸೊಸೆಗೆ ಪ್ರತಿದಿನವೂ ಹಬ್ಬವೇ!
8) ಶಾಂತ ಶಕ್ತಿಯ ಮೂಲಕ ಗೆಲುವು
ಕೆಲವು ಯುದ್ಧಗಳನ್ನು ಮೌನ ಮತ್ತು ಅಂತರದ ಮೂಲಕ ಗೆಲ್ಲಬೇಕು ಅಂತಾರೆ ಚಾಣಕ್ಯ. ನೀವು ನಿಮ್ಮ ರಹಸ್ಯಗಳನ್ನು ಕಾಪಾಡಿಕೊಂಡಾಗ ವಂಚಕರ ನಿಜವಾದ ಆಯುಧವನ್ನು ಕಸಿದುಕೊಳ್ಳುತ್ತೀರಿ. ಮಾತನಾಡುವುದಕ್ಕಿಂತ ಹೆಚ್ಚು ಗಮನಿಸಿ. ಪ್ರತಿಕ್ರಿಯಿಸುವುದಕ್ಕಿಂತ ಹೆಚ್ಚಾಗಿ ನಕ್ಕುಬಿಡಿ. ನಿಮ್ಮ ಮನಸ್ಸನ್ನು ಗುಪ್ತ ನಿಧಿಯಂತೆ ಕಾಪಾಡಿಕೊಳ್ಳಿ. ಸರಿಯಾದ ಸಮಯ ಬಂದಾಗ, ಮೃದುವಾಗಿ ಜಾರಿಕೊಳ್ಳಿ.
ಆಷಾಢದಲ್ಲಿ ಗಂಡ-ಹೆಂಡ್ತಿ ಸೇರಿದ್ರೆ ಏನಾಗುತ್ತೆ? ಅಪ್ಪಿತಪ್ಪಿ ರೋಮ್ಯಾನ್ಸ್ ಮಾಡಬೇಡಿ