Headlines

ಕನ್ನಡದಲ್ಲಿಯೇ ಸಿಹಿಯುಂಟು, ಕರ್ನಾಟಕ ನಮ್ಮತನದ ಅನುಭವ ನೀಡುತ್ತೆ: ಪ್ರಧಾನಿ ಮೋದಿ | Pm Narendra Modi In Bengaluru It Is Sweet In Kannada Itself Mrq

ಕನ್ನಡದಲ್ಲಿಯೇ ಸಿಹಿಯುಂಟು, ಕರ್ನಾಟಕ ನಮ್ಮತನದ ಅನುಭವ ನೀಡುತ್ತೆ: ಪ್ರಧಾನಿ ಮೋದಿ | Pm Narendra Modi In Bengaluru It Is Sweet In Kannada Itself Mrq


ಬೆಂಗಳೂರಿನಲ್ಲಿ 3ನೇ ಹಂತದ ಮೆಟ್ರೋ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.

ಬೆಂಗಳೂರು: ಇಂದು ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಂದೇ ಭಾರತ್ ರೈಲು ಮತ್ತು ಹಳದಿ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದರು. ನಮ್ಮ ಮೆಟ್ರೋ 3ನೇ ಹಂತಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿಗಳು, ಬೆಂಗಳೂರಿಗೆ ಭೇಟಿ ನೀಡಿರೋದು ಸಂತಸವನ್ನುಂಟು ಮಾಡಿದೆ ಎಂದರು. ಎಂದಿನಂತೆ ಪ್ರಧಾನಿಯವರು ಕನ್ನಡದಲ್ಲಿಯೇ ಮಾತು ಆರಂಭಿಸಿ ಎಲ್ಲರಿಗೂ ನಮಸ್ಕಾರಗಳನ್ನು ತಿಳಿಸಿದರು.

ಎಂದಿನಂತೆ ಪ್ರಧಾನಿಯವರು ಕನ್ನಡದಲ್ಲಿಯೇ ಮಾತು ಆರಂಭಿಸಿ ಎಲ್ಲರಿಗೂ ನಮಸ್ಕಾರಗಳನ್ನು ತಿಳಿಸಿದರು. ಕರ್ನಾಟಕದ ಭೂಮಿ ಮೇಲೆ ಕಾಲಿಡುತ್ತಿದ್ದಂತೆ ನಮ್ಮತನದ ಅನುಭವ ನೀಡುತ್ತದೆ. ಇಲ್ಲಿಯ ಸಂಸ್ಕೃತಿ, ಜನರ ಪ್ರೀತಿ ಮತ್ತು ಕನ್ನಡ ಭಾಷೆಯ ಸಿಹಿತನ ಇಷ್ಟವಾಗುತ್ತದೆ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕುರಿತು ಹಲವು ವಿಷಯಗಳನ್ನು ಮಾತನಾಡಿದರು. ಬೆಂಗಳೂರು ಹೊಸ ಭಾರತ ಬೆಳವಣಿಗೆ ಸಂಕೇತವಾಗಿದೆ. ಗ್ಲೋಬಲ್ ಐಟಿ ಮ್ಯಾಪ್‌ನಲ್ಲಿ ಬೆಂಗಳೂರು ಭಾರತದ ಬಾವುಟ ಹಾರಿಸುತ್ತಿದೆ. ಇದೆಲ್ಲಾ ಬೆಂಗಳೂರಿನ ಜನತೆ ಪ್ರತಿಭೆಯಿಂದ ಸಾಧ್ಯವಾಗುತ್ತದೆ. ಭವಿಷ್ಯಕ್ಕಾಗಿ ನಾವು ಬೆಂಗಳೂರು ನಗರವನ್ನು ಮತ್ತಷ್ಟು ಸಿದ್ಧಪಡಿಸಬೇಕಿದೆ. ಬೆಂಗಳೂರು ನಗರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ನೀಡಲಾಗುತ್ತಿದೆ.

 

Scroll to load tweet…

 

ಇಂದು ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಾಗಿದೆ. ಹಾಗೆಯೇ ಹಳದಿ ಮಾರ್ಗದ ಮೆಟ್ರೋಗೆ ಚಾಲನೆ ನೀಡಿ, ಮೂರನೇ ಹಂತದ ಮೆಟ್ರೋಗೆ ಅಡಿಪಾಯ ಹಾಕಲಾಗಿದೆ. ಆಪರೇಷನ್ ಸಿಂದೂರ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದೇನೆ. ಉಗ್ರ ರಕ್ಷಣೆಗೆ ಮುಂದಾಗಿರುವ ಪಾಕಿಸ್ತಾನ ಮಂಡಿಯೂರುವಂತೆ ಭಾರತ ಮಾಡಲಾಗಿದೆ. ಕೆಲವೇ ನಿಮಿಷಗಳಲ್ಲಿ ಆಪರೇಷನ್ ಸಿಂದೂರ ನಡೆದಿದೆ. ಆಪರೇಷನ್ ಸಿಂದೂರ ಸಕ್ಸಸ್‌ನಲ್ಲಿ ತಂತ್ರಜ್ಞಾನವಿದೆ. ಇದರಲ್ಲಿ ಬೆಂಗಳೂರಿನ ಯುವಕರ ಪಾತ್ರವಿದೆ ಎಂದು ಹೇಳಿದರು.

ತಂತ್ರಜ್ಞಾನದಲ್ಲಿ ಸ್ಪರ್ಧೆ ಮಾಡುತ್ತ ಮುನ್ನಡೆಯನ್ನು ಕಾಯ್ದುಕೊಳ್ಳಬೇಕಿದೆ. ಮೆಟ್ರೋ ರೈಲುಗಳಿಂದಾಗಿ ನಗರಗಳು ಸ್ಮಾರ್ಟ್‌ ಆಗುತ್ತವೆ. ಸಾರ್ವಜನಿಕ ಸಾರಿಗೆಗೆ ಮೆಟ್ರೋಗಳು ಹೊಸ ಆಯಾನವನ್ನ ನೀಡಿವೆ. ಇದೇ ವೇಳೆ ಮೆಟ್ರೋ ಕಾಮಗಾರಿಗೆ ಸಹಕರಿಸಿರುವ ಕಾರ್ಪೋರೇಟ್ ಕಂಪನಿಗಳಿಗೆ ಧನ್ಯವಾದಗಳನ್ನು ಪ್ರಧಾನಿ ಮೋದಿ ಸಲ್ಲಿಸಿದರು.

 

YouTube video player



Source link

Leave a Reply

Your email address will not be published. Required fields are marked *