ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ ಎಂದ ನಿಖಿಲ್ ಕುಮಾರಸ್ವಾಮಿ, ತೀವ್ರ ವಾಗ್ದಾಳಿ! | Chikkaballapur Jds Nikhil Kumaraswamy Roars Against Congress Government Rav

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ ಎಂದ ನಿಖಿಲ್ ಕುಮಾರಸ್ವಾಮಿ, ತೀವ್ರ ವಾಗ್ದಾಳಿ! | Chikkaballapur Jds Nikhil Kumaraswamy Roars Against Congress Government Rav



ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಚಿಕ್ಕಬಳ್ಳಾಪುರ (ಜುಲೈ.10): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸತ್ತುಹೋಗಿದೆ. ಉಚಿತವಾಗಿ ಕೊಡುತ್ತಿರುವ ಅಕ್ಕಿ ಸರಬರಾಜಿಗೆ ಬಳಸಿದ ಲಾರಿಗಳ ಮಾಲೀಕರ ಬಾಡಿಗೆ 250 ಕೋಟಿ ಬಾಕಿ ಇಟ್ಟುಕೊಂಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಶ್ರೀದೇವಿ ಪ್ಯಾಲೆಸ್ ನಲ್ಲಿ ಚಿಕ್ಕಬಳ್ಳಾಪುರವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತವಾದ ಪಕ್ಷವಲ್ಲ. ನಮ್ಮ ಪಕ್ಷದ ಶಾಸಕರಲ್ಲಿ 50ರಷ್ಟು ಮಂದಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಿಂದ ಆಯ್ಕೆಯಾಗುತ್ತಾರೆ. ಈ ಭಾಗಗಳಿಗೆ ನಾನು ನಿರಂತರವಾಗಿ ಭೇಟಿ ನೀಡುತ್ತೇನೆ ಎಂದರು.

ಮೈತ್ರಿಗೆ 150ಕ್ಕೂ ಹೆಚ್ಚು ಸ್ಥಾನ ದೇಶಕ್ಕೆ ನರೇಂದ್ರ ಮೋದಿ ಜೀ, ರಾಜ್ಯಕ್ಕೆ ಕುಮಾರಣ್ಣ. ಇದು ಕೇವಲ ಜೆಡಿಎಸ್ ಕಾರ್ಯಕರ್ತರ ಭಾವನೆ ಅಷ್ಟೇ ಅಲ್ಲ, ರಾಜ್ಯದ ಜನರ ಭಾವನೆ. ಕುಮಾರಣ್ಣ ಸಿಎಂ ಆಗಿದ್ದಾಗ ಕೊಟ್ಟ ಕೊಡುಗೆಗಳನ್ನ ಜನ ಈಗಲೂ ಸ್ಮರಿಸುತ್ತಾರೆ. ಮುಂದಿನ 2028 ರಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಗೆ 150ಕ್ಕೂ ಹೆಚ್ಚು ಸ್ಥಾನಗಳು ಸಿಗಲಿದೆ, ನಮ್ಮ ನಾಯಕರು ಕುಮಾರಣ್ಣ. ಫೇಸ್ ವ್ಯಾಲ್ಯೂ ಇರುವ ನಾಯಕರು ದೇವೇಗೌಡರು, ಕುಮಾರಣ್ಣ. ಕುಮಾರಣ್ಣ ಸಿಎಂ ಆಗಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜೆಡಿಎಸ್ ಪಕ್ಷಕ್ಕೆ ಅಂದಿನಿಂದಲೂ ಬಲ ತುಂಬಿರುವ ಜಿಲ್ಲೆಗಳು. ನಮಗೆ ರಾಮನಗರ ಮತ್ತು ಚಿಕ್ಕಬಳ್ಳಾಪುರ ಎರಡು ಕಣ್ಣುಗಳಿದ್ದಂತೆ. ಶಿಡ್ಲಘಟ್ಟ ಶಾಸಕ ರವಿಕುಮಾರ್ ಚಿಂತಾಮಣಿ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಎರಡು ಆಧಾರ ಸ್ತಂಬಗಳಿದ್ದಂತೆ ಎಂದು ಹೇಳಿದರು

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಟಗರು:

ತಾಲೂಕಿನ ರೈತರು ಕೋರಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರವನ್ನ ಮುನ್ನಡೆಸುವ ಒಬ್ಬ ಟಗರನ್ನು ಕೊಟ್ಟೆ ಕೊಡುತ್ತೇವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಿಲ್ಲದಿದ್ದರೆ ಗೆಲ್ಲಲು ಸಾದ್ಯವಾಗುತ್ತಿರಲಿಲ್ಲ ಎಂದು ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಹೇಳಿಕೊಂಡಿರುವುದೆ ನಮ್ಮ ಪಕ್ಷಕ್ಕೆ ಶಕ್ತಿ ಇದೆ ಎನ್ನುವುದು ತೋರಿಸುತ್ತದೆ ಎಂದರು.

ತಾವು ರಾಜ್ಯ ಪ್ರವಾಸ ಮಾಡುತ್ತಿರುವುದು ಮುಂದಿನ ಚುನಾವಣೆ ಹೇಗೆ ನಡೆಸಬೇಕೆಂಬ ಮಾಹಿತಿ ನಿಮಗೆ ನೀಡುತ್ತೇವೆ. ಪಕ್ಷ 50 ಲಕ್ಷಕ್ಕೂ ಹೆಚ್ಚು ಸದಸ್ಯತ್ವ ಗುರಿ ಇಟ್ಟು ಹೋಗುತ್ತಿದ್ದೇನೆ. ಕಾರ್ಯಕರ್ತರು ಮೂವತ್ತು ದಿನ, ಒಂದು ದಿನಕ್ಕೆ ಮೂರು ಗಂಟೆ ಕೆಲಸ ಮಾಡಿ ಒಬ್ಬರು ಹತ್ತು ಜನರಿಂದ ಮಿಸ್ಡ್ ಕಾಲ್ ಕೊಡಿಸಿ ಅವರಿಗೆ ಪಕ್ಷಕ್ಕೆ ಬೆಂಬಲಿಸುವಂತೆ ವಿಶ್ವಾಸ ಮೂಡಿಸಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಣ್ಣನವರು ಚಿಕ್ಕಬಳ್ಳಾಪುರ ಜಿಲ್ಲೆಗೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ 2028 ಕ್ಕೆ ಮತ್ತೊಮ್ಮೆ ಕುಮಾರಣ್ಣನವರನ್ನು ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲು ನಾವೆಲ್ಲರೂ ಹಗಲಿರುಳು ಶ್ರಮಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇದಕ್ಕೂ ಮೊದಲು ನಿಖಿಲ್ ಕುಮಾರಸ್ವಾಮಿ ಅವರನ್ನು ತಿಪ್ಪೆನಹಳ್ಳಿಯಿಂದ ಕನಜೇನಹಳ್ಳಿ. ನಗರದ ಅಂಕನಗೊಂದಿ, ಎಪಿಎಂಸಿ, ಎಂ ಜಿ ರಸ್ತೆ, ಬಿ ಆರ್ ಅಂಬೇಡ್ಕರ್ ವೃತ್ತ, ಬಿಬಿ ರಸ್ತೆ ಮೂಲಕವಾಗಿ ಸಾಗಿತು ಇದೇ ವೇಳೆ ಹೂವಿನ ಮಳೆ ಸುರಿಸಿ ಸುಮಾರು ಐದು ಕಿಲೋಮೀಟರ್ ನಷ್ಟು ಬೈಕ್ ರ್‍ಯಾ ಮೂಲಕ ಹಾಗೂ ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ಕಾರ್ಯಕರ್ತರು ಅವರನ್ನು ಸ್ವಾಗತ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎ. ಮಂಜು , ಶಾಸಕ ಬಿ.ಎನ್. ರವಿಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಆರ್. ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿಗಳಾದ ಡಾ. ರೋಷನ್ ಅಬ್ಬಾಸ್ , ನಾರಾಯಣಗೌಡ,ಜಿಲ್ಲಾ ಅಧ್ಯಕ್ಷ ಮುಕ್ತಾ ಮುನಿಯಪ್ಪ, ಕಾರ್ಯಾಧ್ಯಕ್ಷ ಕೆ.ಆರ್.ರೆಡ್ಡಿ, ಮಹಿಳಾ ಜಿಲ್ಲಾಧ್ಯಕ್ಷೆ ಪ್ರಭಾ ನಾರಾಯಣಗೌಡ, ತಾಲ್ಲೂಕು ಅಧ್ಯಕ್ಷ ಕೆ.ಬಿ. ಮುನಿರಾಜು, ಸೇರಿದಂತೆ ಪಕ್ಷದ ಪದಾಧಿಕಾರಿಗಳು ಇದ್ದರು



Source link

Leave a Reply

Your email address will not be published. Required fields are marked *