ಲೋಕಾಯುಕ್ತ ದಾಳಿ ಮುಕ್ತಾಯ, ಐವರು ಭ್ರಷ್ಟಾಧಿಕಾರಿಗಳ ಆಸ್ತಿ ವಿವರ ಕೇಳಿದ್ರೆ ಶಾಕ್! | Karnataka Lokayukta Raid Ends Shocked About The Assets Of Five Corrupt Officials

ಲೋಕಾಯುಕ್ತ ದಾಳಿ ಮುಕ್ತಾಯ, ಐವರು ಭ್ರಷ್ಟಾಧಿಕಾರಿಗಳ ಆಸ್ತಿ ವಿವರ ಕೇಳಿದ್ರೆ ಶಾಕ್! | Karnataka Lokayukta Raid Ends Shocked About The Assets Of Five Corrupt Officials



ಲೋಕಾಯುಕ್ತ ದಾಳಿ ಮುಕ್ತಾಯ, ಐವರು ಭ್ರಷ್ಟಾಧಿಕಾರಿಗಳ ಆಸ್ತಿ ವಿವರ ಕೇಳಿದ್ರೆ ಶಾಕ್! | Karnataka Lokayukta Raid Ends Shocked About The Assets Of Five Corrupt Officials

ಐವರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ ಮತ್ತು ಬೆಂಗಳೂರಿನಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.

ಬೆಂಗಳೂರು (ಜುಲೈ 30): ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಐವರು ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಮಂಗಳವಾರ ನಡೆದಿದ್ದ ಲೋಕಾಯುಕ್ತ ದಾಳಿ ಮುಕ್ತಾಯಗೊಂಡಿದೆ.

ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ ಸೇರಿ ಬೆಂಗಳೂರು ನಗರದ ಎರಡು ಕಡೆ ಸೇರಿ ಒಟ್ಟು 25 ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ ನಡೆಸಿದ್ದರು. ದಾಳಿ ವೇಳೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಸಂಬಂಧಿಕರ ಮನೆ ಕಚೇರಿಗಳಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇದೀಗ ಭ್ರಷ್ಟ ಅಧಿಕಾರಿಗಳ ಮೇಲಿನ ಲೋಕಾಯುಕ್ತ ದಾಳಿ ಮುಕ್ತಾಯಗೊಂಡಿದ್ದು, ಐವರು ಅಧಿಕಾರಿಗಳ ಅಪಾರ ಪ್ರಮಾಣದ ಆಸ್ತಿ ವಿವರ ಕೆಳಗಿನಂತಿದೆ.

ಲೋಕಾಯುಕ್ತ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾ, ಬೆಳ್ಳಿ, ನಗದು, ಆಸ್ತಿ ಪತ್ತೆ

1. ಕೆ. ಓಂಪ್ರಕಾಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಬಿ.ಡಿ.ಎ, ಬೆಂಗಳೂರು

– ಸ್ಥಿರ ಆಸ್ತಿಯ ಮೌಲ್ಯ- ₹4,78,20,000

– ಚರ ಆಸ್ತಿಯ ಮೌಲ್ಯ- ₹1,47,96,365

– ಚರಾಸ್ತಿ ಹಾಗೂ ಸ್ತಿರಾಸ್ತಿ ಸೇರಿ ಒಟ್ಟು ಆಸ್ತಿ ಮೌಲ್ಯ ₹6,26,16,365

2. ಎನ್. ವೆಂಕಟೇಶ್, ತೆರಿಗೆ ಮೌಲ್ಯಮಾಪಕ, ಶೆಟ್ಟಿಹಳ್ಳಿ ಉಪ-ವಿಭಾಗ, ಬಿಬಿಎಂಪಿ

– ಸ್ಥಿರ ಆಸ್ತಿಯ ಮೌಲ್ಯ- ₹2,25,05,000/-

– ಚರ ಆಸ್ತಿಯ ಅಂದಾಜು ಮೌಲ್ಯ ₹32,50,264

ಚರಾಸ್ತಿ ಹಾಗೂ ಸ್ತಿರಾಸ್ತಿ ಸೇರಿ ಒಟ್ಟು ಆಸ್ತಿ ಮೌಲ್ಯ ₹2,57,55,264

3. ಡಾ. ವೆಂಕಟೇಶ್ ಜಿ, ತಾಲ್ಲೂಕು ವೈಧ್ಯಾಧಿಕಾರಿ, ಹಿರಿಯೂರು, ಚಿತ್ರದುರ್ಗ

– ಸ್ಥಿರ ಆಸ್ತಿಯ ಅಂದಾಜು ಮೌಲ್ಯ- ₹2,87,36,000

– ಚರ ಆಸ್ತಿಯ ಅಂದಾಜು ಮೌಲ್ಯ ₹67,49,750/

– ಒಟು ಆಸ್ತಿ ಮೌಲ್ಯ- ₹3,54,85,750

4. ಜಯಣ್ಣ. ಆರ್, ಕಾರ್ಯಪಾಲಕ ಅಭಿಯಂತರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಾಸನ ವಿಭಾಗ,

– ಸ್ಥಿರ ಆಸ್ತಿಯ ಅಂದಾಜು ಮೌಲ್ಯ ₹5,59,59,749

– ಚರ ಆಸ್ತಿಯ ಅಂದಾಜು ಮೌಲ್ಯ ₹69,35,600

– ಒಟ್ಟು ಆಸ್ತಿ ಮೌಲ್ಯ- ₹6,28,95,349

5. ಆಂಜನೇಯ ಮೂರ್ತಿ. ಎಂ, ಕಿರಿಯ ಅಭಿಯಂತರರು, ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆ, ಗೌರಿಬಿದನೂರು, ಚಿಕ್ಕಬಳ್ಳಾಪುರ

– ಸ್ಥಿರ ಆಸ್ತಿಯ ಅಂದಾಜು ಮೌಲ್ಯ-₹4,83,46,000

– ಚರ ಆಸ್ತಿಯ ಅಂದಾಜು ಮೌಲ್ಯ- ₹93,65,000/-

ಒಟ್ಟು ಆಸ್ತಿ ಮೌಲ್ಯ- ₹5,77,11,000



Source link

Leave a Reply

Your email address will not be published. Required fields are marked *