ಮಕ್ಕಳ ಉತ್ತಮ ಆರೋಗ್ಯ, ಚುರುಕುತನಕ್ಕೆ ಏನು ಮಾಡಬೇಕು? ತಾಯಂದಿರಿಗೆ ಉದ್ಯಮಿ ನಿಖಿಲ್ ಕಾಮತ್ ತಾಯಿ ರೇವತಿ ಕಾಮತ್ ಸಲಹೆ ನೀಡಿದ್ದಾರೆ. ನಿಖಿಲ್ ಕಾಮತ್ ಉದಾಹರಣೆ ಮಂದಿಟ್ಟು ಎಲ್ಲಾ ತಾಯಂದಿರಿಗೆ ಸಲಹೆ ನೀಡಿದ್ದಾರೆ.
ಬೆಂಗಳೂರು (ಜು.01) ನಿಖಿಲ್ ಕಾಮತ್ ಭಾರತದ ಯುವ ಹಾಗೂ ಶ್ರೀಮಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಉದ್ಯಮದ ಜೊತೆಗೆ ಪಾಡ್‌ಕಾಸ್ಟ್ ವೇದಿಕೆ ಮೂಲಕ ಭಾರಿ ಜನಪ್ರಿಯರಾಗಿದ್ದಾರೆ. ಇದೀಗ ನಿಖಿಲ್ ಕಾಮತ್ ತಾಯಿ ರೇವತಿ ಕಾಮತ್ ತಾಯಂದಿರಿಗೆ ಹಲವು ಸಲಹೆ ನೀಡಿದ್ದಾರೆ. ಮಕ್ಕಳ ಉತ್ತಮ ಆರೋಗ್ಯ, ಚುರುಕುತನ, ಬುದ್ಧಶಕ್ತಿ ಸೇರಿದಂತೆ ಅವರ ಬೆಳವಣಿಗೆಗೆ ಆರಂಭಿಕ 4 ವರ್ಷ ಏನು ಮಾಡಬೇಕು ಅನ್ನೋ ಸಲಹೆ ನೀಡಿದ್ದಾರೆ. ನಿಖಿಲ್ ಕಾಮತ್‌ಗೆ ಊದಾಹರಣೆ ಮುಂದಿಟ್ಟು ರೇವತಿ ಕಾಮತ್ ಈ ಸಲಹೆ ನೀಡಿದ್ದಾರೆ. ಯುವ ತಾಯಂದಿರು ಈ ಸಲಹೆ ಪಾಲಿಸದರೆ ಮಕ್ಕಳ ಬೆಳವಣಿಗೆ ಉತ್ತಮವಾಗಿ ಆಗಲಿದೆ ಎಂದಿದ್ದಾರೆ.
ನಿಖಿಲ್ ಕಾಮತ್‌ಗೆ ನಾನು ನಾಲ್ಕು ವರ್ಷ ವರೆಗೆ…!
ಮಕ್ಕಳ ಆರೋಗ್ಯ, ಬೆಳವಣಿಗೆಯಲ್ಲಿ ತಾಯಿಯ ಎದೆಹಾಲು ಅತ್ಯಂತ ಮುಖ್ಯ. ಈ ಕುರಿತು ಮಾತನಾಡಿರುವ ರೇವತಿ ಕಾಮತ್, ನಿಖಿಲ್ ಕಾಮತ್‌ಗೆ ನಾನು ನಾಲ್ಕು ವರ್ಷವರೆಗೆ ಎದೆಹಾಲು ಉಣಿಸಿದ್ದೇನೆ ಎಂದಿದ್ದಾರೆ. ಬಹುತೇಕ ತಾಯಂದಿರುವ ಗರಿಷ್ಠ 2 ರಿಂದ 2.5 ವರ್ಷ ನೀಡುತ್ತಾರೆ. ಆದರೆ ನಾನು 4 ವರ್ಷ ನೀಡಿದ್ದೇನೆ. ತಾಯಿ ಎದೆಹಾಲು ಎಲ್ಲಾ ಪೌಷ್ಠಿಕ ಅಂಶಗಳನ್ನು ಹೊಂದಿದೆ. ಇದು ಮಕ್ಕಳಿಗೆ ಅತ್ಯಗತ್ಯ. ನಾಲ್ಕು ವರ್ಷವರೆಗೆ ಯಾರು ಎದೆಹಾಲು ನೀಡುವುದಿಲ್ಲ. ಆದರೆ ಮಕ್ಕಳ ಬೆಳವಣಿಗೆ, ಆರೋಗ್ಯ ದೃಷ್ಟಿಯಿಂದ ನೀಡಿದ್ದೇನೆ ಎಂದು ರೇವತಿ ಕಾಮತ್ ಹೇಳಿದ್ದಾರೆ.
ಉಪ್ಪು ಹಾಕದೆ ಹಸಿರು ತರಕಾರಿ ಡಯೆಟ್
ಯುವ ತಾಯಂದಿರು ಮಕ್ಕಳಿಗೆ 2 ವರ್ಷಕ್ಕಿಂತ ಮೇಲ್ಪಟ್ಟು ಎದೆಹಾಲು ನೀಡಬೇಕು. ಅವರ ಬೆಳವಣಿಗೆ ದೃಷ್ಟಿಯಿಂದ ಉತ್ತಮ ಎಂದು ರೇವತಿ ಕಾಮತ್ ಹೇಳಿದ್ದಾರೆ. ನಾಲ್ಕು ವರ್ಷವರೆಗೆ ಮಗುವಿಗೆ ಎದೆ ಹಾಲು ನೀಡಲು ರೇವತಿ ಕಾಮತ್ ಹೆಚ್ಚು ಹಸಿರು ತರಕಾರಿ ತಿನ್ನುತ್ತಿದ್ದರು ಎಂದಿದ್ದಾರೆ. ಉಪ್ಪು ಹಾಕದೆ ಹೆಚ್ಚಿನ ಹಸಿರು ತರಕಾರಿ ತಿನ್ನುತ್ತಿದ್ದೆ. ಇದರಿಂದ ನಾಲ್ಕು ವರ್ಷವರೆಗೆ ಎದೆಹಾಲುಣಿಸಲು ಸಾಧ್ಯವಾಯಿತು ಎಂದಿದ್ದಾರೆ.ಇದರ ಜೊತೆಗೆ ಮೊಳಕೆ ಬರಿಸಿದ ಕಾಳುಗಳನ್ನು ತಿನ್ನುತ್ತಿದ್ದೆ ಎಂದಿದ್ದಾರೆ.
ಉತ್ತಮ ಆಹಾರ ಪದ್ಧತಿ ಅತೀ ಮುಖ್ಯ ಎಂದು ರೇವತಿ ಕಾಮತ್ ಹೇಳಿದ್ದಾರೆ. ನಿಮ್ಮ ಆಹಾರವನ್ನು ನೀವೇ ತಯಾರಿಸಿ ತಿನ್ನಬೇಕು. ಎಂದರೆ ಹೊರಗಿನಿಂದ ಆರ್ಡರ್ ಮಾಡಿ ತಿನ್ನುವುದು ಉತ್ತಮ ಅಭ್ಯಾಸವಲ್ಲ ಎಂದಿದ್ದಾರೆ. ಆಹಾರದ ಮೇಲೆ ಆರೋಗ್ಯ ನಿಂತಿದೆ ಎಂದು ರೇವತಿ ಕಾಮತ್ ಹೇಳಿದ್ದಾರೆ.
ಹೊರಗಿನಿಂದ ಫುಡ್ ಆರ್ಡರ್ ಮಾಡಿಲ್ಲ ರೇವತಿ ಕಾಮತ್
ನಿಖಿಲ್ ಕಾಮತ್, ನಿತಿನ್ ಕಾಮತ್ ಇಬ್ಬರನ್ನು ರೇವತಿ ಕಾಮತ್ ಉತ್ತಮ ಅಭ್ಯಾಸಗಳಿಂದ ಬೆಳೆಸಿದ್ದಾರೆ. ಇತ್ತೀಚೆಗೆ ರೇವತಿ ಕಾಮತ್ ಹೊರಗಿನ ಆಹಾರ ಆರ್ಡರ್ ಕುರಿತು ಮಾತನಾಡಿದ್ದರು. ನಿಖಿಲ್ ಹಾಗೂ ನಿತಿನ್ ಕಾಮತ್‌ಗೆ ಹೊರಗಿನ ಆಹಾರ ಆರ್ಡರ್ ಮಾಡುತ್ತಿರಲಿಲ್ಲ. ಮನೆಯಲ್ಲೇ ತಯಾರಿಸಿ ಆಹಾರ ನೀಡುತ್ತಿದ್ದೆ. ಇದಕ್ಕಾಗಿ ಪ್ರತಿ ದಿನ ಬೇರೆ ಬೇರೆ ಆಹಾರ ತಯಾರಿಸುತ್ತಿದ್ದೆ ಎಂದು ರೇವತಿ ಕಾಮತ್ ಹೇಳಿದ್ದಾರೆ. ಈಗಲೂ ತಾನು ಆಹಾರ ತಯಾರಿಸುತ್ತೇನೆ. ಹೊರಗಿನ ಆಹಾರ ಆರ್ಡರ್ ಮಾಡುವುದಿಲ್ಲ ಎಂದಿದ್ದಾರೆ.