Do Not Curse, why: ಅಪ್ಪಿ ತಪ್ಪಿಯೂ ಸರ್ವನಾಶ ಆಗಲಿ, ಹಾಳಾಗಿ ಹೋಗಲಿ ಅಂತ ಶಾಪ ಹಾಕ್ಬೇಡಿ! ಆ ಥರ ಮಾತಾಡಿದ್ರೆ ಮಾತ್ರ ಅಷ್ಟೇ ಕಥೆ..! | You Should Not Curse Others To Be Ruined Or Destroyed Why

Do Not Curse, why: ಅಪ್ಪಿ ತಪ್ಪಿಯೂ ಸರ್ವನಾಶ ಆಗಲಿ, ಹಾಳಾಗಿ ಹೋಗಲಿ ಅಂತ ಶಾಪ ಹಾಕ್ಬೇಡಿ! ಆ ಥರ ಮಾತಾಡಿದ್ರೆ ಮಾತ್ರ ಅಷ್ಟೇ ಕಥೆ..! | You Should Not Curse Others To Be Ruined Or Destroyed Why



Do Not Curse, why: ಅಪ್ಪಿ ತಪ್ಪಿಯೂ ಸರ್ವನಾಶ ಆಗಲಿ, ಹಾಳಾಗಿ ಹೋಗಲಿ ಅಂತ ಶಾಪ ಹಾಕ್ಬೇಡಿ! ಆ ಥರ ಮಾತಾಡಿದ್ರೆ ಮಾತ್ರ ಅಷ್ಟೇ ಕಥೆ..! | You Should Not Curse Others To Be Ruined Or Destroyed Why

Do Not Curse: ಬೇರೆಯವರಿಂದ ನಮಗೆ ಬೇಸರ ಆಗಲಿ, ಅನ್ಯಾಯ ಆಗಲಿ ಹಾಳಾಗಿ ಹೋಗಲಿ, ಸರ್ವನಾಶ ಆಗಲಿ ಅಂತ ಶಾಪ ಹಾಕೋದುಂಟು. ಆದರೆ ಆ ರೀತಿ ಶಾಪ ಹಾಕಬಾರದು. ಯಾಕೆ? 

ಯಾರು ಏನೇ ತಪ್ಪು ಮಾಡಲಿ, ನಮ್ಮ ಹೊಟ್ಟೆ ಉರಿಸಲು, ನೋಯಿಸಲಿ ಕೆಲವರು ಮನಸ್ಸಿಗೆ ಬಂದಹಾಗೆ ಶಪಿಸುತ್ತಾರೆ. ನೀನು ಸರ್ವನಾಶ ಆಗು, ಹಾಳಾಗಿ ಹೋಗು ಅಂತ ಶಾಪ ಹಾಕೋದುಂಟು. ಆದರೆ ಆ ರೀತಿ ಶಾಪ ಹಾಕಬಾರದು.

ಸರ್ವನಾಶ ಆಗಿ ಅಂತ ಶಾಪ ಹಾಕಬಾರದು

ಯದ್ಭಾವಂ ತದ್ಭವತಿ ಎಂದು ಹೇಳುವುದುಂಟು. ನಾವು ಏನು ಬಯಸುತ್ತೇವೆಯೋ ಅದೇ ಆಗುವುದು. ಅದರಂತೆ ಸರ್ವನಾಶ ಆಗಿ, ಹಾಳಾಗಿ ಹೋಗಿ ಅಂತ ನಾವು ಬೇರೆಯವರಿಗೆ ಶಾಪ ಹಾಕಿದರೆ ಅದು ನಮಗೆ ತಿರುಗು ಬಾಣ ಆಗುವುದು. ಹೀಗಾಗಿ ನೀವು ಚೆನ್ನಾಗಿರಿ, ಆರೋಗ್ಯವಾಗಿರಿ, ಆರ್ಥಿಕ ಶಕ್ತಿ ಸಿಗಲಿ ಎಂದು ಎಲ್ಲರಿಗೂ ಬಯಸು. ಯಾರು ಎಷ್ಟೇ ಮೆರೆದರೂ ಪರವಾಗಿಲ್ಲ, ಕರ್ಮ ಯಾರನ್ನೂ ಬಿಡೋದಿಲ್ಲ ಎನ್ನೋದನ್ನು ನೆನಪಿನಲ್ಲಿಡಿ.

ಶಾಪದ ಬಗ್ಗೆ ಪುರಾಣ ಏನು ಹೇಳುತ್ತದೆ?

ಈ ಶಾಪದ ಕಥೆ ನಿನ್ನೆ ಮೊನ್ನೆಯದಲ್ಲ. ಪುರಾಣ ಕಾಲದಿಂದಲೂ ಶಾಪ ಅಸ್ತಿತ್ವದಲ್ಲಿದೆ. ಪಾಂಡುವಿಗೆ ಪತ್ನಿಯ ಜೊತೆ ಸೇರಲು ಸಾಧ್ಯವಿಲ್ಲ ಎಂಬ ಶಾಪವಿತ್ತು, ಹೀಗಾಗಿಯೇ ಆತನ ಪತ್ನಿ ಕುಂತಿ ದೇವತೆಗಳೊಂದಿಗೆ ಸೇರಿ ಮಕ್ಕಳನ್ನು ( ಪಾಂಡವರು) ಪಡೆದಳು. ದುರ್ಯೋಧನನ ತೊಡೆ ತಟ್ಟಿದ್ದನ್ನು ನೋಡಿದ್ದ ಋಷಿಗಳು ಆತನ ತೊಡೆಯನ್ನು ಭೀಮ ಮುರಿಯಲಿ ಎಂದು ಶಪಿಸಿದರು. ರಾವಣನಿಗೆ ಹೆಣ್ಣು ತಾನಾಗಿ ಒಲಿಯದೆ ಮುಟ್ಟಿದರೆ ಆತನ ತಲೆ ಚೂರು ಚೂರಾಗಲಿ ಎಂದು ರಾವಣನಿಗೆ ಶಾಪವಿತ್ತು. ಹೀಗಾಗಿ ಆತನಿಗೆ ಸೀತೆಯನ್ನು ಮುಟ್ಟಲು ಆಗಲಿಲ್ಲ.

ಶಾಪ ನಿಜ ಆಗುತ್ತದೆಯೇ?

ಶಾಪ ಹಾಕಿದಕೂಡಲೇ ಅದು ನಿಜ ಆಗುತ್ತದೆಯೇ ಎಂಬ ಮಾತು ಕೇಳಿಬರುತ್ತದೆ. ಕೆಲವರು ಬ್ರಾಹ್ಮಣನ ಶಾಪ ತಟ್ಟುತ್ತದೆ ಎಂದು ಹೇಳುತ್ತದೆ. ಆ ಬ್ರಾಹ್ಮಣ ಸಾತ್ವಿಕ ಮನೋಭಾವ ಹೊಂದಿದ್ದು, ಒಳ್ಳೆಯದನ್ನು ಅನುಸರಿಸಿ, ಒಳ್ಳೆಯ ಕೆಲಸವನ್ನು ಮಾಡಿದ್ದರೆ ಪಕ್ಕಾ ಅವನ ಶಾಪ ತಟ್ಟುತ್ತದೆ ಎನ್ನುತ್ತಾರೆ.

ಯಾವಾಗ ಶಾಪ ಫಲ ಕೊಡುತ್ತದೆ?

ನಿಜಕ್ಕೂ ಓರ್ವ ವ್ಯಕ್ತಿಗೆ ತೀರಾ ಅನ್ಯಾಯವಾಗಿರುತ್ತದೆ. ಅವನು ಆ ಅನ್ಯಾಯದಿಂದ ನೊಂದು ಕಣ್ಣೀರು ಹಾಕಿದರೆ ಆ ಶಾಪಗಳು ಫಲ ಕೊಡುತ್ತವೆ. ಶಾಪ ಹಾಕುವವರು ಮಾತ್ರ ಮೊದಲು ತಪ್ಪು ಮಾಡಿರಬಾರದು. ತಪ್ಪು ಮಾಡಿ ಶಾಪ ಹಾಕಿದ್ದರೆ ಅದು ಫಲ ಕೊಡೋದಿಲ್ಲ.

ಮುಗ್ಧರಿಗೆ ಮಹಾ ಮೋಸ ಆಗಿರುತ್ತದೆ. ಅಂಥವರು ಶಾಪ ಹಾಕುವ ಅಗತ್ಯ ಇಲ್ಲ, ಕಣ್ಣೀರು ಹಾಕಿದರೂ ಕೂಡ ಅದು ಶಾಪವಾಗಿ ಪರಿಣಮಿಸುತ್ತದೆ. ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಅಲಮೇಲಮ್ಮ ಶಾಪ ಹಾಕಿದ್ದಳು ಎಂದು ಹೇಳುತ್ತಾರೆ. ಅದೇ ರೀತಿ ಈ ಶಾಪ ಒಂದಷ್ಟು ಪೀಳಿಗೆಗಳ ಕಾಲವೂ ಮುಂದುವರೆಯುತ್ತದೆ.

 

 



Source link

Leave a Reply

Your email address will not be published. Required fields are marked *