2013ರ ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಉಗ್ರ ಅಬೂಬಕರ್‌ನನ್ನು 30 ವರ್ಷಗಳ ನಂತರ ತಮಿಳುನಾಡು ಉಗ್ರ ನಿಗ್ರಹ ಪಡೆ ಬಂಧಿಸಿದೆ. ಬಾಂಬ್ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದ ಅಬೂಬಕರ್, ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಬೆಂಗಳೂರು (ಜು.3): 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಉಗ್ರ ಅಬೂಬಕರ್‌ನನ್ನು ತಮಿಳುನಾಡು ಉಗ್ರ ನಿಗ್ರಹ ಪಡೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಬಂಧಿಸಿದೆ. ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಾತಕಿ ಜೊತೆಗೆ ಆತನ ಸಹಚರ ಮಹಮ್ಮದ್ ಅಲಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಲ್ಲೇಶ್ವರಂ ಬಾಂಬ್ ಸ್ಫೋಟಿಸಿದ್ದ ಉಗ್ರ:
ಬಾಂಬ್ ತಯಾರಿಕೆಯಲ್ಲಿ ಪರಿಣತಿ ಹೊಂದಿದ್ದ ಅಬೂಬಕರ್, 1995ರಿಂದಲೇ ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ. 2013ರ ಮಲ್ಲೇಶ್ವರಂ ಬಾಂಬ್ ಸ್ಫೋಟದಲ್ಲಿ ಈತನ ಕೈವಾಡದ ಬಗ್ಗೆ ಸಾಕ್ಷ್ಯಗಳು ದೊರೆತಿದ್ದವು. ಇದರ ಜೊತೆಗೆ, ದೇಶದ ವಿವಿಧೆಡೆ ನಡೆದ ಬಾಂಬ್ ಸ್ಫೋಟಗಳು ಮತ್ತು ಪ್ರಮುಖ ಹಿಂದೂಪರ ಸಂಘಟನೆಯ ಮುಖಂಡರ ಕೊಲೆ ಪ್ರಕರಣಗಳಲ್ಲಿ ಈತನ ಪಾತ್ರವಿರುವ ಬಗ್ಗೆ ತನಿಖೆಯಲ್ಲಿ ಬಹಿರಂಗವಾಗಿತ್ತು.
ತಮಿಳುನಾಡು ಉಗ್ರ ನಿಗ್ರಹ ಪಡೆ ಸದ್ಯ ತನಿಖೆಯನ್ನು ತೀವ್ರಗೊಳಿಸಿದ್ದು, ಈ ಬಂಧನವು ಭಯೋತ್ಪಾದಕ ಜಾಲದ ಮೇಲೆ ಮಹತ್ವದ ಹೊಡೆತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.