Why death penalty increased in Saudi 2025 | ಸೌದಿ ಅರೇಬಿಯಾದಲ್ಲಿ ಶನಿವಾರ ಒಂದೇ ದಿನದಲ್ಲಿ 8 ಜನರಿಗೆ ಮರಣದಂಡನೆ ದಾಖಲೆ, ಏಕೆ ಅಷ್ಟೊಂದು ಜನರಿಗೆ ಗಲ್ಲಿಗೇರಿಸಲಾಯಿತು? | Saudi Arabia Breaks Execution Record 8 Hanged In One Day For Drugs Murder

ಸೌದಿ ಅರೇಬಿಯಾದಲ್ಲಿ ಒಂದೇ ದಿನ 8 ಜನರಿಗೆ ಮರಣದಂಡನೆ ವಿಧಿಸಲಾಗಿದೆ. ಏಳು ಮಂದಿ ಮಾದಕವಸ್ತು ಕಳ್ಳಸಾಗಣೆ ಮತ್ತು ಒಬ್ಬ ವ್ಯಕ್ತಿ ತಾಯಿಯ ಕೊಲೆ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಘಟನೆ ಮಾನವ ಹಕ್ಕುಗಳ ಕಾರ್ಯಕರ್ತರಿಂದ ಟೀಕೆಗೆ ಗುರಿಯಾಗಿದೆ.

ರಿಯಾದ್ (ಆ.4): ಸೌದಿ ಅರೇಬಿಯಾದಲ್ಲಿ ಶನಿವಾರ ಒಂದೇ ದಿನ 8 ಜನರಿಗೆ ಮರಣದಂಡನೆ ವಿಧಿಸಲಾಗಿದೆ, ಇದು ದೇಶದ ಇತಿಹಾಸದಲ್ಲಿ ಒಂದೇ ದಿನದಲ್ಲಿ ಗರಿಷ್ಠ ಶಿಕ್ಷೆಯಾಗಿದೆ. ಸೌದಿ ಪ್ರೆಸ್ ಏಜೆನ್ಸಿ (SPA) ವರದಿಯ ಪ್ರಕಾರ, ಏಳು ಮಂದಿಯನ್ನು ಮಾದಕವಸ್ತು ಕಳ್ಳಸಾಗಣೆ ಆರೋಪದಲ್ಲಿ ಮತ್ತು ಒಬ್ಬ ವ್ಯಕ್ತಿಯನ್ನು ತನ್ನ ತಾಯಿಯ ಕೊಲೆಗಾಗಿ ಗಲ್ಲಿಗೇರಿಸಲಾಗಿದೆ.

ನಜ್ರಾನ್‌ನ ದಕ್ಷಿಣ ಪ್ರದೇಶದಲ್ಲಿ ‘ಹ್ಯಾಶಿಶ್ ಕಳ್ಳಸಾಗಣೆ’ಗಾಗಿ ನಾಲ್ವರು ಸೊಮಾಲಿ ಮತ್ತು ಮೂವರು ಇಥಿಯೋಪಿಯನ್ ಪ್ರಜೆಗಳಿಗೆ ಶಿಕ್ಷೆ ವಿಧಿಸಲಾಗಿದೆ. 2025ರಲ್ಲಿ ಇಲ್ಲಿಯವರೆಗೆ 230 ಜನರಿಗೆ ಮರಣದಂಡನೆ ನೀಡಲಾಗಿದ್ದು, ಇದರಲ್ಲಿ 154 ಮಂದಿ ಮಾದಕವಸ್ತು ಸಂಬಂಧಿತ ಪ್ರಕರಣಗಳಿಗೆ ಸಂಬಂಧಿಸಿದವರಾಗಿದ್ದಾರೆ. 2024ರಲ್ಲಿ 338 ಶಿಕ್ಷೆಗಳ ದಾಖಲೆಯನ್ನು 2025 ಮೀರಿಸುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.

2023ರಲ್ಲಿ ಆರಂಭವಾದ ‘ಮಾದಕ ವಸ್ತುಗಳ ವಿರುದ್ಧ ಯುದ್ದ ಅಭಿಯಾನದಿಂದಾಗಿ ಮರಣದಂಡನೆಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 2019-2022ರವರೆಗೆ ಮಾದಕವಸ್ತು ಪ್ರಕರಣಗಳಲ್ಲಿ ಮರಣದಂಡನೆಗೆ ನಿಷೇಧವಿತ್ತಾದರೂ, 2024ರಲ್ಲಿ 117 ಮತ್ತು 2025ರಲ್ಲಿ ಇದುವರೆಗೆ 154 ಶಿಕ್ಷೆಗಳು ದಾಖಲಾಗಿವೆ.

ಮಾನವ ಹಕ್ಕುಗಳ ಟೀಕೆ:

ಮಾನವ ಹಕ್ಕುಗಳ ಕಾರ್ಯಕರ್ತರು ಈ ಆಗಾಗ್ಗೆ ನಡೆಯುವ ಮರಣದಂಡನೆಗಳನ್ನು ಖಂಡಿಸಿದ್ದು, ಇದು ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ‘ವಿಷನ್ 2030’ ಯೋಜನೆಯ ‘ಮುಕ್ತ ಸಮಾಜ’ ಇಮೇಜ್‌ಗೆ ಹಾನಿಕಾರಕ ಎಂದಿದ್ದಾರೆ. ಆದರೆ, ಸೌದಿ ಸರ್ಕಾರವು ಸಾರ್ವಜನಿಕ ಸುವ್ಯವಸ್ಥೆಗಾಗಿ ಮರಣದಂಡನೆ ಅಗತ್ಯ ಮತ್ತು ಕಾನೂನು ಪ್ರಕ್ರಿಯೆಯ ನಂತರವೇ ನೀಡಲಾಗುತ್ತದೆ ಎಂದು ಸಮರ್ಥಿಸಿಕೊಂಡಿದೆ. ಈ ಘಟನೆ ಜಾಗತಿಕ ಗಮನ ಸೆಳೆದಿದ್ದು, ಮರಣದಂಡನೆ ನೀತಿಯ ಕುರಿತು ಚರ್ಚೆಗೆ ಕಾರಣವಾಗಿದೆ.

Source link

Leave a Reply

Your email address will not be published. Required fields are marked *