
ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಗಟ್ಟಲು 15 ವರ್ಷ ಹಳೆಯ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳಿಗೆ ಇಂಧನ ನಿಷೇಧ. ಈ ಕ್ರಮದಿಂದ 62 ಲಕ್ಷ ವಾಹನಗಳು ನಿಷೇಧಕ್ಕೆ ಒಳಗಾಗಲಿವೆ.
ಇಂದಿನಿಂದ ದೆಹಲಿಯಲ್ಲಿ 62 ಲಕ್ಷ ವಾಹನಗಳಿಗೆ ಪೆಟ್ರೋಲ್ ಡೀಸೆಲ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ 62 ಲಕ್ಷ ವಾಹನಗಳಿಗೆ ಪೆಟ್ರೋಲ್ ಡೀಸೆಲ್ ಸಿಗುವುದಿಲ್ಲ, ಇದೇನು ಅಂತ ಅಚ್ಚರಿ ಪಡ್ತಿದ್ದೀರಾ? ಹೌದು ದೆಹಲಿಯ ಪೆಟ್ರೋಲ್ ಬಂಕ್ಗಳಲ್ಲಿ ಇಂದಿನಿಂದ ಹಳೆ ವಾಹನಗಳಿಗೆ ಅಥವಾ ಜೀವಾಂತ್ಯದಲ್ಲಿರುವ ಇಂಧನ ತುಂಬಿಸಲು ಆಗುವುದಿಲ್ಲ ಎಂಬ ಬೋರ್ಡನ್ನು ನೀವು ನೋಡಿದರೆ ಅಚ್ಚರಿ ಆಗಬೇಡಿ. ವಾಯುಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನವಾಗಿ ಈಗ ದೆಹಲಿ ಸರ್ಕಾರ 15 ವರ್ಷಕ್ಕಿಂತಲೂ ಹಳೆಯ ಪೆಟ್ರೋಲ್ ಅವಲಂಬಿತ ವಾಹನಗಳು ಹಾಗೂ 10 ವರ್ಷ ಹಳೆಯ ಡೀಸೆಲ್ ಅವಲಂಬಿತ ವಾಹನಗಳಿಗೆ ಇಂಧನ ನೀಡುವುದನ್ನು ನಿಷೇಧಿಸಲಾಗಿದೆ.
ಪ್ರತಿ ಬಾರಿಯೂ ಚಳಿ ಹಾಗೂ ಬೇಸಿಗೆಯ ಸಮಯದಲ್ಲಿ ದೆಹಲಿ ತೀವ್ರವಾದ ವಾಯುಮಾಲಿನ್ಯದಿಂದ ಸಂಕಷ್ಟಕ್ಕೀಡಾಗುತ್ತದೆ. ಆದರೆ ಇಲ್ಲಿನ ವಾಯುಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆಯನ್ನು ಈ ಹಳೆಯ ವಾಹನಗಳೇ ನೀಡುತ್ತಿವೆ. ಅಂದರೆ ಈ ಹಳೇ ವಾಹನಗಳು ದೆಹಲಿ ವಾಯುಮಾಲಿನ್ಯಕ್ಕೆ ಶೇಕಡಾ 51 ರಷ್ಟು ಕೊಡುಗೆ ನೀಡುತ್ತಿವೆ ಎಂದು 2024ರ ನವೆಂಬರ್ನಲ್ಲಿ ಬಿಡುಗಡೆಯಾದ ವರದಿ ಹೇಳಿದೆ.
ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು, ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ಎನ್ಸಿಆರ್ನಾದ್ಯಂತ ಎಲ್ಲಾ ರೀತಿಯ (ಸರಕು ವಾಹಕ, ವಾಣಿಜ್ಯ, ವಿಂಟೇಜ್, ದ್ವಿಚಕ್ರ ವಾಹನಗಳು) ಜೀವಿತಾವಧಿ ಮುಗಿದ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಶಾಸನಬದ್ಧ ನಿರ್ದೇಶನ ಸಂಖ್ಯೆ 89 ಅನ್ನು ಜಾರಿಗೆ ತಂದಿದೆ. ಈ ಕ್ರಮದಿಂದ ದೆಹಲಿಯೊಂದರಲ್ಲೇ ಸುಮಾರು 62 ಲಕ್ಷ ವಾಹನಗಳ (61,14,728) ನಿಷೇಧವಾಗಲಿದೆ. ಮಾರ್ಚ್ 2025 ರ ವರದಿಯಂತೆ ಹೊತ್ತಿಗೆ ಹರಿಯಾಣದಲ್ಲಿ 27.5 ಲಕ್ಷ ಹಳೆಯ ವಾಹನಗಳು, ಉತ್ತರ ಪ್ರದೇಶದಲ್ಲಿ 12.69 ಲಕ್ಷ ಮತ್ತು ರಾಜಸ್ಥಾನದಲ್ಲಿ 6.2 ಲಕ್ಷ ಹಳೆಯ ವಾಹನಗಳಿವೆ.